ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಭಾರತ ಎಂದರೆ ಇದು; ದಾರಿ ತಪ್ಪಿದ ವಿದೇಶಿ ಮಹಿಳೆಗೆ ನೆರವಾದ ರ‍್ಯಾಪಿಡೊ ಚಾಲಕಿ: ನೆಟ್ಟಿಗರ ಮನಗೆದ್ದ ವಿಡಿಯೊ ಇಲ್ಲಿದೆ

Viral Video: ದಾರಿ ತಪ್ಪಿದ ವಿದೇಶಿ ಪ್ರವಾಸಿ ಮಹಿಳೆಯೊಬ್ಬರಿಗೆ ರ‍್ಯಾಪಿಡೊ ಬೈಕ್ ಟ್ಯಾಕ್ಸಿ ಚಾಲಕಿವೊಬ್ಬರು ನೆರವಾಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ವಿದೇಶಿ ಮಹಿಳೆ ತಾವು ಹೋಗಬೇಕಾದ ಸ್ಥಳದ ದಾರಿ ತಿಳಿಯದೆ ತಡರಾತ್ರಿ ಭಯಭೀತರಾಗಿದ್ದರು. ಅವರಿಗೆ ರ‍್ಯಾಪಿಡೊ ಬೈಕ್ ಟ್ಯಾಕ್ಸಿ ಚಾಲಕಿ ನೆರವಾಗುವ ಮೂಲಕ ಇಡೀ ದೇಶದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ವಿದೇಶಿ ಮಹಿಳೆಗೆ ನೆರವಾದ ರ‍್ಯಾಪಿಡೊ ಚಾಲಕಿ

ಮುಂಬೈ, ಜ. 13: ಇತ್ತೀಚೆಗೆ ಬೆಂಗಳೂರಿನಂತಹ ನಗರ ಪ್ರದೇಶದಲ್ಲಿ ಕ್ಯಾಬ್ ಚಾಲಕರ ಅಸಭ್ಯ ನಡವಳಿಕೆಗಳು ಸುದ್ದಿಯಾಗುತ್ತಲೇ ಇವೆ. ಈ ನಡುವೆ ವಿದೇಶಿ ಪ್ರವಾಸಿ ಮಹಿಳೆಯೊಬ್ಬರಿಗೆ ರ‍್ಯಾಪಿಡೊ ಬೈಕ್ ಟ್ಯಾಕ್ಸಿ ಚಾಲಕಿವೊಬ್ಬರು ನೆರವಾಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ವಿದೇಶಿ ಮಹಿಳೆಯೊಬ್ಬರು ಮಧ್ಯರಾತ್ರಿ ತಮ್ಮ ಗಮ್ಯ ಸ್ಥಾನದ ದಾರಿ ತಿಳಿಯದೆ ಭಯಭೀತರಾಗಿದ್ದರು. ತಡರಾತ್ರಿ ದಾರಿ‌ ತಿಳಿಯಾದೆ ಗಾಬರಿಯಾಗಿದ್ದ ವಿದೇಶಿ ಮಹಿಳೆಗೆ ರ‍್ಯಾಪಿಡೊ ಬೈಕ್ ಟ್ಯಾಕ್ಸಿ ಚಾಲಕಿ ನೆರವಾಗುವ ಮೂಲಕ ಇಡೀ ದೇಶದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸದ್ಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದ್ದು, ನೆಟ್ಟಿಗರು ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ.

ರಾತ್ರಿ ಸುಮಾರು 10 ಗಂಟೆಗೆ ಈ ಘಟನೆ ನಡೆದಿದೆ. ಗೂಗಲ್‌ ಮ್ಯಾಪ್‌ ಕೂಕೊಟ್ಟಿದ್ದರಿಂದ ವಿದೇಶಿ ಮಹಿಳೆ ದಾರಿ ತಪ್ಪಿದ್ದರು. ಸಮುದ್ರ ತೀರದ ಹತ್ತಿರ ಒಬ್ಬರೇ ಸಿಲುಕಿದ್ದ ಅವರು, ದಿಕ್ಕು ತೋಚದೆ ತೀವ್ರ ಆತಂಕಕ್ಕೆ ಒಳಗಾಗಿದ್ದರು. ಈ ಸಂದರ್ಭದಲ್ಲಿ ರ‍್ಯಾಪಿಡೊ ಚಾಲಕಿ ಸಿಂಧು ಕುಮಾರಿ ನೆರವಿಗೆ ಧಾವಿಸಿ ಅವರಿಗೆ ಧೈರ್ಯ ತುಂಬಿ, ತಲುಪಬೇಕಾದ ಹೋಟೆಲ್‌ಗೆ ಸುರಕ್ಷಿತವಾಗಿ ತಲುಪಿಸಿದರು.

ವಿಡಿಯೊ ನೋಡಿ:



ವೈರಲ್ ಆಗಿರುವ ವಿಡಿಯೊದಲ್ಲಿ,‌ ವಿದೇಶಿ ಮಹಿಳೆ ತೀವ್ರ ಭಾವುಕರಾಗಿ ಸಿಂಧು ಕುಮಾರಿ ಅವರನ್ನು ಅಪ್ಪಿ ಧನ್ಯವಾದ ತಿಳಿಸುವುದನ್ನು ಕಾಣಬಹುದು. ʼʼಕಷ್ಟದ ಸಮಯದಲ್ಲಿ ನನಗೆ ಬೆಂಬಲವಾಗಿ ನಿಂತ ಈ ಧೈರ್ಯವಂತ ಮಹಿಳೆಗೆ ಧನ್ಯವಾದಗಳು" ಎಂದು ಅವರು ಬರೆದುಕೊಂಡಿದ್ದಾರೆ. ಕ್ಯಾಮರಾದಲ್ಲಿ ಸೆರೆಹಿಡಿಯಲಾದ ಆ ಕ್ಷಣವು ದೇಶಾದ್ಯಂತ ಹಲವು ವೀಕ್ಷಕರನ್ನು ಆಕರ್ಷಿಸಿದೆ. ನೆಟ್ಟಿಗರು ಕೂಡ ಈ ಬಗ್ಗೆ ನಾನಾ ಬಗೆಯ ಕಮೆಂಟ್ ಮಾಡಿದ್ದಾರೆ.

ಮರು ಮದುವೆಯಾಗಲು ಹೊರಟ ಪತಿಗೆ ಶಾಕ್ ಕೊಟ್ಟ ಮೊದಲ ಪತ್ನಿ

ನೆಟ್ಟಿಗರೊಬ್ಬರು ಭಾರತಕ್ಕೆ ಇಂತಹ ಹೆಚ್ಚಿನ ಚಾಲಕರು ಬೇಕು ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಮಗೆ ಪ್ರಪಂಚದಾದ್ಯಂತ ಹೆಚ್ಚಿನ ಮಹಿಳಾ ಸವಾರರು ಬೇಕು ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಸಿಂಧು ಕುಮಾರಿ ಜಿ ಅವರಿಗೆ ಹ್ಯಾಟ್ಸ್ ಆಫ್... ಅಪರಿಚಿತರಿಗೆ ಸಹಾಯ ಮಾಡಲು ಎಲ್ಲರೂ ರಾತ್ರಿ 10 ಗಂಟೆಗೆ ನಿಲ್ಲುವುದಿಲ್ಲ. ನಿಜವಾದ ಮಾನವೀಯತೆ ಎಂದು ಮತ್ತೊಬ್ಬರು ಶ್ಲಾಘಿಸಿದ್ದಾರೆ. ಕಷ್ಟಕಾಲದಲ್ಲಿ ನೆರವಾದ ಸಿಂಧು ಅವರಂತಹ ಚಾಲಕರನ್ನು ಹೊಂದಿರುವ ಸಂಸ್ಥೆಯ ಬಗ್ಗೆ ಜನ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ.