ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಪಾನಿಪುರಿ ತಯಾರಿಸಲು ವಾಟರ್ ಗನ್ ಬಳಸಿದ ವ್ಯಾಪಾರಿ; ಕ್ರಿಯೇಟಿವಿಟಿಗೆ ಫಿದಾ ಆದ ನೆಟ್ಟಿಗರು!

Viral Video: ಮುಂಬೈನ ಬೀದಿ ಆಹಾರವು ಅದರ ವಿಭಿನ್ನವಾದ ಪರಿಮಳ ಮತ್ತು ರುಚಿಗೆ ಹೆಸರು ವಾಸಿಯಾಗಿದೆ. ಇದೀಗ ಮುಂಬೈ ಮೂಲದ ಪಾನಿಪುರಿ ಮಾರಾಟಗಾರನೊಬ್ಬ ಸಾಂಪ್ರದಾಯಿಕ ವಿಧಾನ ಬಿಟ್ಟು ಬಣ್ಣ ಬಣ್ಣದ ವಾಟರ್ ಗನ್ ಬಳಸಿ ಪಾನಿ ಪುರಿ ಮಾರಾಟ ಮಾಡುತ್ತಿದ್ದಾನೆ.

ಮುಂಬೈನ ಸ್ಪೆಷಲ್ ಗೋಲ್‌ಗಪ್ಪಾ

ಮುಂಬೈ,ಫೆ. 24: ಇತ್ತೀಚೆಗೆ ಮನೆ ಆಹಾರಕ್ಕಿಂತಲೂ ಸ್ಟ್ರೀಟ್ ಫುಡ್ ಅನ್ನು ಬಹಳಷ್ಟು ಮಂದಿ ಇಷ್ಟಪಡುತ್ತಾರೆ. ಅದರಲ್ಲೂ ಪಾನಿಪುರಿ ಹೆಚ್ಚಿನವರ ಇಷ್ಟದ ರೋಡ್ ಸೈಡ್ ಆಹಾರವಾಗಿದೆ. ಆದರೆ ಈಗ ಮುಂಬೈನಲ್ಲಿ ಪಾನಿಪುರಿ ವ್ಯಾಪಾರಿಯೊಬ್ಬ ವಿಭಿನ್ನವಾಗಿ ಮಾರಾಟ ಮಾಡುತ್ತಿದ್ದು ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿದ್ದಾನೆ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral Video) ಆಗಿದೆ..

ಮುಂಬೈನ ಬೀದಿ ಆಹಾರವು ಅದರ ವಿಭಿನ್ನವಾದ ಪರಿಮಳ ಮತ್ತು ರುಚಿಗೆ ಹೆಸರುವಾಸಿಯಾಗಿದೆ. ಇದೀಗ ಮುಂಬೈ ಮೂಲದ ಪಾನಿಪುರಿ ಮಾರಾಟಗಾರನೊಬ್ಬ ಸಾಂಪ್ರದಾಯಿಕ ವಿಧಾನ ಬಿಟ್ಟು ಬಣ್ಣ ಬಣ್ಣದ ವಾಟರ್ ಗನ್ ಬಳಸಿ ಪಾನಿ ಪುರಿ ಮಾರಾಟ ಮಾಡುತ್ತಿದ್ದಾನೆ.

ವಿಡಿಯೋ ನೋಡಿ:



ಸಾಮಾನ್ಯವಾಗಿ ಪಾನಿಪುರಿಗೆ ಚಮಚ ಅಥವಾ ಲೋಟದಿಂದ ಜಲ್ಜೀರ ನೀರು ತುಂಬಿಸುತ್ತಾರೆ. ಆದರೆ ಈ ‌ಮಾರಾಟಗಾರ ಮಾತ್ರ ಪಾನಿಪುರಿಗೆ ನೀರು ತುಂಬಿಸಲು ಬಳಸುತ್ತಿರುವುದು ಬಣ್ಣಬಣ್ಣದ ವಾಟರ್ ಗನ್ ಆಗಿದೆ. ಈತ ಪುರಿಗಳ ಒಳಗೆ ಆಲೂಗಡ್ಡೆ ಮಸಾಲೆ ಯನ್ನು ತುಂಬಿದ ನಂತರ, ಅತ್ಯಂತ ವೇಗವಾಗಿವಾಟರ್ ಗನ್ ಮೂಲಕ ನೀರನ್ನು ಪುರಿಯೊಳಗೆ 'ಶೂಟ್' ಮಾಡುತ್ತಿದ್ದಾನೆ.

Viral News: ಬೆಳಗ್ಗೆ 6:30ಕ್ಕೆ ಆಫೀಸ್‌ಗೆ ಹಾಜರಾಗಬೇಕು ಎಂಬ ಆದೇಶಕ್ಕೆ ಜೆನ್‌ ಝೀ ಉದ್ಯೋಗಿಯ ಖಡಕ್ ರೆಸ್ಪಾನ್ಸ್

ವೈರಲ್ ಆಗಿರುವ ಕ್ಲಿಪ್‌ನಲ್ಲಿ, ಮಾರಾಟಗಾರನು ಸ್ಟೈಲಿಶ್ ಉಡುಪುಗಳನ್ನು ಧರಿಸಿ ಪಾನಿ ಪುರಿ ಮಾರಾಟ ಮಾಡುವುದು ಗಮನಿಸಬಹುದು. ಪ್ರತಿ ಪುರಿಗೆ ಗ್ಲಾಸ್ ನಿಂದ ನೀರನ್ನು ಹಾಕುವ ಬದಲು, ಅವನ ಗನ್‌ನಲ್ಲಿ ಜಲ್ಜೀರವನ್ನು ತುಂಬಿಸಿ ನೀಡುತ್ತಿದ್ದಾನೆ. ಕೆಲವು ಗ್ರಾಹಕರು ಕೈ ಕೊಡುವ ಬದಲು ಬಾಯಿ ತೆರೆದು ನಿಂತಿದ್ದಾರೆ. ಈತ ನೇರವಾಗಿ ಅವರ ಬಾಯಿಗೇ ಜಲ್ಜೀರಾ ನೀರನ್ನು ಸ್ಪ್ರೇ ಮಾಡಿದ್ದಾನೆ.

ಆನ್‌ಲೈನ್ ಬಳಕೆದಾರರು ಈ ಸೃಜನಶೀಲತೆಯನ್ನು ತ್ವರಿತವಾಗಿ ಶ್ಲಾಘಿಸಿದರು. ಅನೇಕರು ಇದನ್ನು "ಅದ್ಭುತ ಸ್ಟಾರ್ಟ್‌ಅಪ್ ಐಡಿಯಾ" ಎಂದು ಕರೆದರು, ಇನ್ನೊಬ್ಬರು, "ಈತನ ಕಾನ್ಫಿಡೆನ್ಸ್ ಗೆ ನಾನು ಫಿದಾ ಅಂದಿದ್ದಾರೆ.