ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಸಂತ ಪ್ರೇಮಾನಂದ ಮಹಾರಾಜ್‍ ಆರೋಗ್ಯಕ್ಕಾಗಿ ಮದೀನಾದಲ್ಲಿ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಂ ಭಕ್ತ; ವಿಡಿಯೊ ವೈರಲ್

Muslim Devotee Prays in Medina: ಹಿಂದೂ ಸಂತ ಪ್ರೇಮಾನಂದ ಮಹಾರಾಜ ಆರೋಗ್ಯ ವೃದ್ಧಿಗಾಗಿ ಮುಸ್ಲಿಂ ಯುವಕನೊಬ್ಬ ಮದೀನಾದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾನೆ. ಈ ಹೃದಯಸ್ಪರ್ಶಿ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸೂಫಿಯಾನ್ ಅಲಹಾಬಾದ್ ಎಂಬ ಮುಸ್ಲಿಂ ಯುವಕ ಪ್ರಾರ್ಥನೆ ಸಲ್ಲಿಸಿದಾತ.

ಲಖನೌ: ಮುಸ್ಲಿಂ ಯುವಕನೊಬ್ಬ ಹಿಂದೂ ಸಂತ ಪ್ರೇಮಾನಂದ ಮಹಾರಾಜರ ಆರೋಗ್ಯಕ್ಕಾಗಿ ಮದೀನಾದಲ್ಲಿ (Medina) ಪ್ರಾರ್ಥನೆ ಸಲ್ಲಿಸಿದ, ಸರ್ವಧರ್ಮ ಸಾಮರಸ್ಯದ ಹೃದಯಸ್ಪರ್ಶಿ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ. ಸೂಫಿಯಾನ್ ಅಲಹಾಬಾದ್ ಎಂಬ ಮುಸ್ಲಿಂ ಯುವಕ ಪ್ರಾರ್ಥನೆ ಸಲ್ಲಿಸಿದಾತ. 1 ನಿಮಿಷ 20 ಸೆಕೆಂಡುಗಳ ವಿಡಿಯೊದಲ್ಲಿ, ಸೂಫಿಯಾನ್ ಇಸ್ಲಾಂನ ಪವಿತ್ರ ನಗರಗಳಲ್ಲಿ ಒಂದಾದ ಮದೀನಾದಲ್ಲಿ ವೃಂದಾವನ ಮೂಲದ ಸಂತರು ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಪ್ರಾರ್ಥಿಸುತ್ತಿರುವುದನ್ನು ಕಂಡು ಬಂದಿದೆ.

ಸಂತ ಪ್ರೇಮಾನಂದ ಮಹಾರಾಜ್ ತುಂಬಾ ಒಳ್ಳೆಯ ವ್ಯಕ್ತಿ. ಅವರು ಅಸ್ವಸ್ಥರಾಗಿದ್ದಾರೆಂದು ನಾವು ಕೇಳಿದ್ದೇವೆ. ಖಿಜ್ರಾದಿಂದ ಅವರ ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ನಾವು ಅಲ್ಲಾಹನಲ್ಲಿ ಪ್ರಾರ್ಥಿಸುತ್ತೇವೆ. ನಾವು ಭಾರತದವರು ಮತ್ತು ಅವರನ್ನು ತುಂಬಾ ಮೆಚ್ಚುತ್ತೇವೆ. ಅವರು ನಿಜವಾದ ಮತ್ತು ಉದಾತ್ತ ಮನುಷ್ಯ ಎಂದು ಸೂಫಿಯಾನ್ ವಿಡಿಯೊದಲ್ಲಿ ಹೇಳುತ್ತಾ, ಫೋನ್‌ನಲ್ಲಿರುವ ಸಂತನ ಫೋಟೊವನ್ನು ತೋರಿಸಿದ್ದಾನೆ.

ಇದನ್ನೂ ಓದಿ: Viral Video: ಅಲ್ಲೇ ಡ್ರಾ... ಅಲ್ಲೇ ಬಹುಮಾನ! ಪೊಲೀಸರ ವಶದಲ್ಲಿದ್ದ ಆರೋಪಿ ಮೇಲೆ ಡೆಡ್ಲಿ ಅಟ್ಯಾಕ್‌

ವಿಡಿಯೊ ವೀಕ್ಷಿಸಿ:



ಸೂಫಿಯಾನ್, ಗಂಗಾ-ಯಮುನಾ ಸಂಗಮದ ಭೂಮಿಯಾದ ಪ್ರಯಾಗ್‌ರಾಜ್‌ನವನೆಂದು ಪರಿಚಯಿಸಿಕೊಳ್ಳುತ್ತಾ, ಒಬ್ಬರು ಹಿಂದೂ ಅಥವಾ ಮುಸ್ಲಿಂ ಎಂಬುದು ಮುಖ್ಯವಲ್ಲ. ನಿಜವಾಗಿಯೂ ಮುಖ್ಯವಾದುದು ಒಳ್ಳೆಯ ಮನುಷ್ಯನಾಗಿರುವುದು ಎಂದು ಅವರು ಹೇಳಿದ್ದಾರೆ. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಮೆಚ್ಚುಗೆಯನ್ನು ಗಳಿಸಿದೆ. ಅನೇಕರು ಸೂಫಿಯಾನ್ ಅವರ ಸಹಾನುಭೂತಿ ಮತ್ತು ಧಾರ್ಮಿಕ ಏಕತೆಯ ಸಂದೇಶಕ್ಕಾಗಿ ಶ್ಲಾಘಿಸಿದ್ದಾರೆ.

ಇದನ್ನೂ ಓದಿ: Viral News: ಏಕಕಾಲಕ್ಕೆ 1,638 ಕ್ರೆಡಿಟ್ ಕಾರ್ಡ್ ಬಳಸಿ ಗಿನ್ನಿಸ್ ದಾಖಲೆ ಬರೆದ ಭೂಪ

ಒಳ್ಳೆಯ ಜನರನ್ನು ಅವರು ಜಗತ್ತಿನ ಎಲ್ಲೇ ಇದ್ದರೂ ಎಂದಿಗೂ ಮರೆಯುವುದಿಲ್ಲ. ಒಳ್ಳೆಯ ವ್ಯಕ್ತಿ ಎಂದರೆ ಅವರು ಸಮಾಜದ ಪ್ರತಿಯೊಂದು ವರ್ಗಕ್ಕೂ ಕಾಳಜಿ ತೋರುತ್ತಾರೆ ಎಂದು ಬಳಕೆದಾರರೊಬ್ಬರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾವಣ ಕೂಡ ಋಷಿಯ ವೇಷ ಧರಿಸಿದನು. ಅವನು ಒಬ್ಬ ಮಹಾನ್ ವಿದ್ವಾಂಸ ಮತ್ತು ಹೆಚ್ಚು ಪಾಂಡಿತ್ಯ ಹೊಂದಿದ್ದನು. ಆದರೆ ದುರಹಂಕಾರ, ದುರುದ್ದೇಶ ಮತ್ತು ದುಷ್ಟ ಉದ್ದೇಶಗಳಿಂದಾಗಿ, ಅವನು ಒಳ್ಳೆಯತನದ ವಿರುದ್ಧ ಎಷ್ಟು ದೃಢವಾಗಿ ನಿಂತನೆಂದರೆ ಅವನು ದೌರ್ಜನ್ಯಗಳನ್ನು ಎಸಗಿದನು ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ.

ಧರ್ಮವು ನಮ್ಮ ನಡುವೆ ದ್ವೇಷವನ್ನು ಬೆಳೆಸಿಕೊಳ್ಳಲು ಕಲಿಸುವುದಿಲ್ಲ ಎಂದು ಮಗದೊಬ್ಬರು ಹೇಳಿದರು. ತಾರತಮ್ಯವನ್ನು ಹೃದಯದಲ್ಲಿ ಇಟ್ಟುಕೊಳ್ಳುವುದು ಮನುಷ್ಯರ ಚಿಂತನೆಯಾಗಿದೆ ಎಂದು ವ್ಯಕ್ತಿಯೊಬ್ಬರು ಶ್ಲಾಘಿಸಿ ಕಮೆಂಟ್ ಮಾಡಿದ್ದಾರೆ.