Viral News: ಏಕಕಾಲಕ್ಕೆ 1,638 ಕ್ರೆಡಿಟ್ ಕಾರ್ಡ್ ಬಳಸಿ ಗಿನ್ನಿಸ್ ದಾಖಲೆ ಬರೆದ ಭೂಪ
ಹೈದರಾಬಾದ್‌ನ ಮನೀಶ್ ಧಮೇಜಾ 1,638 ಸಕ್ರಿಯ ಕ್ರೆಡಿಟ್ ಕಾರ್ಡ್‌ಗಳನ್ನು ಹೊಂದಿರುವ ಮೂಲಕ ವಿಶ್ವದ ಅತಿ ಹೆಚ್ಚು ಕ್ರೆಡಿಟ್ ಕಾರ್ಡ್‌ಗಳನ್ನು ಹೊಂದಿರುವ ವ್ಯಕ್ತಿಯಾಗಿ ಗಿನ್ನೆಸ್ ವಿಶ್ವ ದಾಖಲೆ ಮಾಡಿದ್ದಾರೆ. ಅವರು ಒಟ್ಟು 1,638 ಸಕ್ರಿಯ ಕಾರ್ಡ್‌ಗಳನ್ನು ಸಂಗ್ರಹಿಸಿದ್ದಾರೆ.

ಮನೀಶ್ ಧಮೇಜಾ -

ಹೈದರಾಬಾದ್: ಗಿನ್ನಿಸ್ ವಿಶ್ವ ದಾಖಲೆ (Guinness World Record) ನಿರ್ಮಿಸಬೇಕೆಂಬುವುದು ಎಷ್ಟೋ ಜನರ ಕನಸು. ಅದಕ್ಕಾಗಿಯೇ ಏನೇನೆಲ್ಲ ಸರ್ಕಸ್ ಕೂಡ ಮಾಡೋದುಂಟು. ಆದರೆ ಇಲ್ಲೊಬ್ಬ ಭೂಪ ತಾನು ಕೂಡಿಟ್ಟಿರುವ ಕ್ರೆಡಿಟ್ ಕಾರ್ಡ್(Credit Card)ಗಳಿಂದಲೇ ಈ ಮಹಾನ್ ದಾಖಲೆ ನಿರ್ಮಿಸಿದ್ದಾನೆ. ಹೌದು.. ಕ್ರೆಡಿಟ್ ಕಾರ್ಡ್‌ಗಳನ್ನು ಶಾಪಿಂಗ್ (Shopping) ಅಥವಾ ಬಿಲ್ ಪಾವತಿ (Paying Bills)ಗಳಿಗೆ ಬಳಸುತ್ತಾರೆ. ಆದರೆ ಮನೀಶ್ ಧಮೇಜಾ (Manish Dhameja) ಎಂಬುವವರ ಈ ಕಥೆ ನಿಮಗೆ ಆಶ್ಚರ್ಯವನ್ನುಂಟು ಮಾಡಬಹುದು. ಕ್ರೆಡಿಟ್ ಕಾರ್ಡ್ ಬಳಕೆಯನ್ನು ಹವ್ಯಾಸವನ್ನಾಗಿ ಮಾಡಿಕೊಂಡಿದ್ದು, ಅದನ್ನೇ ತಮ್ಮ ಆದಾಯದ ಮೂಲವನ್ನಾಗಿಸಿ 2021ರ ಏಪ್ರಿಲ್ 30ರಂದು ಗಿನ್ನೆಸ್ ದಾಖಲೆಯನ್ನೇ ನಿರ್ಮಿಸಿದ್ದಾರೆ.
ಈ ಸುದ್ದಿಯನ್ನು ಓದಿ: Viral News: ಆಸ್ತಿ ವಿವಾದ; 15 ತಿಂಗಳು ತಾಯಿ-ಮಗನನ್ನ ಕೂಡಿ ಹಾಕಿದ 'ಕೈ' ನಾಯಕ
ಮನೀಶ್ ಧಮೇಜಾ ಒಟ್ಟು 1,638 ಮಾನ್ಯ ಕ್ರೆಡಿಟ್ ಕಾರ್ಡ್‌ಗಳನ್ನು ಹೊಂದಿದ್ದಾರೆ. ಅಯ್ಯೋ ಕ್ರೆಡಿಟ್ ಕಾರ್ಡ್‌ಗಳನ್ನು ಪಡೆದು ಕೂಡಿಡುವುದೇ ಈತನ ಚಟ ಅನ್ಕೋಬೇಡಿ. ಮನೀಶ್ ಈ ಕ್ರೆಡಿಟ್ ಕಾರ್ಡ್‌ಗಳ ಮೂಲಕ ಬಂದ ರಿವಾರ್ಡ್ ಪಾಯಿಂಟ್ಸ್(Rewards Points), ಕ್ಯಾಶ್‌ಬ್ಯಾಕ್ (Cashback), ಹೋಟೆಲ್ ಪ್ರಿವಿಲೇಜ್ ಹಾಗೂ ಪ್ರವಾಸ ಸೌಲಭ್ಯಗಳನ್ನು ಪಡೆಯುತ್ತ ಯಾವುದೇ ಸಾಲಗಳಿಲ್ಲದೇ ನಿರ್ವಹಿಸುತ್ತಿದ್ದಾರೆ.
During India’s 2016 demonetisation, when the country faced a cash shortage, Manish relied on his credit cards and managed his expenses through digital payments with ease. For him, credit cards are more than financial tools. They are a way of life. pic.twitter.com/g7V8Sztl1Z
— Fact Point (@FactPoint) October 10, 2025
ಕೇವಲ ಖರ್ಚು ಮಾಡಲು ಅಂತಾನೇ ಇರುವ ಈ ಕ್ರೆಡಿಟ್ ಕಾರ್ಡ್‌ಗಳನ್ನು, ಬುದ್ಧಿವಂತಿಕೆಯಿಂದ ಉಪಯೋಗಿಸುವ ಮೂಲಕ ಆದಾಯದ ಮೂಲವನ್ನಾಗಿಯೂ ಪರಿವರ್ತಿಸಬಹುದು ಎಂಬುವುದನ್ನು ಮನೀಶ್ ತೋರಿಸಿಕೊಟ್ಟಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮನೀಶ್, "ಕ್ರೆಡಿಟ್ ಕಾರ್ಡ್‌ಗಳು ಇಲ್ಲದೆ ನನ್ನ ಜೀವನ ಅಪೂರ್ಣ ಎಂದೆನಿಸುತ್ತದೆ. ನಾನು ಕ್ರೆಡಿಟ್ ಕಾರ್ಡ್‌ಗಳನ್ನು ತುಂಬಾ ಪ್ರೀತಿಸುತ್ತೇನೆ. ರಿವಾರ್ಡ್ ಪಾಯಿಂಟ್ಸ್, ಕಾಂಪ್ಲಿಮೆಂಟರಿ ಟ್ರಾವೆಲಿಂಗ್ ಮತ್ತು ಕ್ಯಾಶ್‌ಬ್ಯಾಕ್‌ಗಳನ್ನು ಬಳಸಿಕೊಂಡು ಉಚಿತವಾಗಿ ಪ್ರಯಾಣಿಸುತ್ತೇನೆ. ರೈಲ್ವೆ ಲಾಂಚ್, ಏರ್‌ಪೋರ್ಟ್ ಲಾಂಚ್, ಆಹಾರ, ಸ್ಪಾ, ಹೋಟೆಲ್ ವೋಚರ್‌ಗಳು, ಉಚಿತ ದೇಶೀಯ ವಿಮಾನ ಟಿಕೆಟ್ ಗಳು, ಉಚಿತ ಶಾಪಿಂಗ್ ವೋಚರ್‌ಗಳು, ಉಚಿತ ಮೂವಿ ಟಿಕೆಟ್‌ಗಳು, ಉಚಿತ ಗಾಲ್ಫ್ ಸೆಷನ್‌ಗಳು, ಉಚಿತ ಇಂಧನ ಸೇರಿದಂತೆ ಅನೇಕ ಲಾಭಗಳನ್ನು ಪಡೆಯುತ್ತಿದೇನೆ" ಎಂದಿದ್ದಾರೆ.
2016ರ ನೋಟು ಅಮಾನ್ಯೀಕರಣವನ್ನು ಪ್ರಸ್ತಾಪಿಸಿರುವ ಅವರು, ʼʼಆ ವೇಳೆ 500 ರೂ., 1,000 ರೂ. ನೋಟುಗಳು ರದ್ದಾದಾಗ, ಜನರೆಲ್ಲ ಬ್ಯಾಂಕ್ ಮತ್ತು ಎಟಿಎಂಗಳ ಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದರು. ಆ ಸಂದರ್ಭದಲ್ಲಿ ಕ್ರೆಡಿಟ್ ಕಾರ್ಡ್ ನನ್ನ ಜೀವನದಲ್ಲಿ ಪ್ರಮುಖ ಪಾತ್ರವಹಿಸಿತು. ಹಣಕ್ಕಾಗಿ ಬ್ಯಾಂಕ್‌ಗಳಿಗೆ ತಡಕಾಡುವ ಅಗತ್ಯ ನನಗೆ ಬರಲೇ ಇಲ್ಲ. ಕ್ರೆಡಿಟ್ ಕಾರ್ಡ್‌ಗಳ ಮೂಲಕ ಡಿಜಿಟಲ್ ಪಾವತಿಗಳನ್ನು ಮಾಡುತ್ತಾ ಖುಷಿಯಾಗಿ ಖರ್ಚು ಮಾಡುತ್ತಿದ್ದೆʼʼ ಎಂದು ವಿವರಿಸಿದ್ದಾರೆ.
ಇನ್ನು ಮನೀಶ್ ಕಾನ್ಪುರದ ಸಿಎಸ್‌ಜೆಎಂ ವಿಶ್ವವಿದ್ಯಾಲಯದಿಂದ ಬಿಸಿಎ, ಲಖನೌ ಇಂಟಿಗ್ರಲ್ ಯೂನಿವರ್ಸಿಟಿಯಿಂದ ಎಂಸಿಎ ಹಾಗೂ IGNOUನಿಂದ Master of Social Workನಲ್ಲಿ ಪದವಿ ಪಡೆದಿದ್ದಾರೆ.
ಮನೀಶ್ ಧಮೇಜಾ ಅವರ ಈ ಪಯಣದಿಂದ ತಂತ್ರಜ್ಞಾನ ಹಾಗೂ ಹಣಕಾಸುಗಗಳನ್ನು ಬುದ್ಧಿವಂತಿಕೆಯಿಂದ ಯೋಜಿಸಿದಾಗ ಸಾಮಾನ್ಯ ವಿಷಯಗಳನ್ನು, ಅಸಾಮಾನ್ಯ ಸಾಧನೆಗಳನ್ನಾಗಿ ಪರಿವರ್ತಿಸಬಹುದು ಎಂಬುದನ್ನು ಸಾಬೀತುಪಡಿಸುತ್ತದೆ.