ಹಿಂದೂ ಯುವತಿಗೆ ಹಿಜಾಬ್ ಧರಿಸುವಂತೆ ಮುಸ್ಲಿಂ ಗೆಳತಿಯರ ಒತ್ತಾಯ; ಕೆಂಗಣ್ಣಿಗೆ ಗುರಿಯಾಯ್ತು ಈ ವಿಡಿಯೋ
Viral Video: ಉತ್ತರ ಪ್ರದೇಶದಲ್ಲಿ ನಡೆದ ಘಟನೆಯೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಮೂಡಿಸಿದೆ. ಮುಸ್ಲಿಂ ಮಹಿಳಾ ಸ್ನೇಹಿತರಿಂದ ಹಿಂದೂ ಹುಡುಗಿಗೆ ಹಿಜಾಬ್ ಧರಿಸಲು ಬಲವಂತ ಮಾಡಿರುವ ಘಟನೆ ಕಂಡು ಬಂದಿದ್ದು ನೆಟ್ಟಿಗರು ಈ ಬಗ್ಗೆ ತೀವ್ರ ವಿರೋಧ ವ್ಯಕ್ತ ಪಡಿಸಿದ್ದಾರೆ.
ಹಿಜಾಬ್ ಧರಿಸುವಂತೆ ಮುಸ್ಲಿಂ ಗೆಳತಿಯರ ಒತ್ತಾಯ -
ಲಕ್ನೋ,ಜ.16: ಇತ್ತೀಚೆಗೆ ಧಾರ್ಮಿಕ ಸಂಘರ್ಷಣೆಗಳು ಹೆಚ್ಚಾಗುತ್ತಿವೆ. ಹಿಂದು ಯುವತಿ ಅನ್ಯ ಕೋಮಿನ ಯುವಕನ ಜೊತೆ ಸ್ನೇಹ, ಧಾರ್ಮಿಕ (Hijab) ನಿಯಮ ಉಲ್ಲಂಘನೆ ವಿಚಾರ ಹೀಗೆ ನಾನಾ ಕಾರಣಕ್ಕಾಗಿ ಘರ್ಷಣೆಗಳು ಉಂಟಾಗುತ್ತವೆ. ಅಂತೆಯೇ ಉತ್ತರ ಪ್ರದೇಶದಲ್ಲಿ ನಡೆದ ಘಟನೆ ಯೊಂದು ಸೋಷಿಯಲ್ ಮೀಡಿಯಾದಲ್ಲಿ (Viral Video) ಭಾರಿ ಸಂಚಲನ ಮೂಡಿಸಿದೆ. ಮುಸ್ಲಿಂ ಮಹಿಳಾ ಸ್ನೇಹಿತರಿಂದ ಹಿಂದೂ ಹುಡುಗಿಗೆ ಹಿಜಾಬ್ ಧರಿಸಲು ಬಲವಂತ ಮಾಡಿರುವ ಘಟನೆ ಕಂಡು ಬಂದಿದ್ದು ನೆಟ್ಟಿಗರು ಈ ಬಗ್ಗೆ ತೀವ್ರ ವಿರೋಧ ವ್ಯಕ್ತ ಪಡಿಸಿದ್ದಾರೆ.
ಮುಸ್ಲಿಂ ಹುಡುಗಿಯರು ತಮ್ಮ ಹಿಂದೂ ಸ್ನೇಹಿತೆಗೆ ಹಿಜಾಬ್ ಧರಿಸಲು ಪದೇ ಪದೇ ಪ್ರೋತ್ಸಾಹಿಸುತ್ತಾರುವ ವಿಡಿಯೊವೊಂದು ಭಾರೀ ವೈರಲ್ ಆಗಿದೆ. ಟ್ಯೂಷನ್ ಕ್ಲಾಸ್ ಮುಗಿಸಿ ಬರುತ್ತಿದ್ದ ಯುವತಿಯರ ಗುಂಪಿನಲ್ಲಿ, ಹಿಂದೂ ಯುವತಿಗೆ ಆಕೆಯ ಮುಸ್ಲಿಂ ಗೆಳತಿಯರು ಹಿಜಾಬ್ ಧರಿಸುವಂತೆ ಕೇಳಿಕೊಂಡಿದ್ದಾರೆ. ವಿಡಿಯೊದಲ್ಲಿ ಮೂವರು ಮುಸ್ಲಿಂ ಹುಡುಗಿಯರು ಮತ್ತು ಒಬ್ಬ ಹಿಂದೂ ಹುಡುಗಿ ಸೇರಿದ್ದಾರೆ, ಅವರು ಒಟ್ಟಿಗೆ ನಡೆದುಕೊಂಡು ಹೋಗುತ್ತಿರುವುದನ್ನು ಮತ್ತು ಸಾಂದರ್ಭಿಕವಾಗಿ ಮಾತನಾಡು ತ್ತಿರುವುದನ್ನು ಕ್ಲಿಪ್ ನಲ್ಲಿ ಕಾಣಬಹುದು.ಮುಸ್ಲಿಂ ಹುಡುಗಿಯರು ತಮ್ಮ ಹಿಂದೂ ಸ್ನೇಹಿತೆಗೆ ಹಿಜಾಬ್ ಧರಿಸಲು ಪದೇ ಪದೇ ಪ್ರೋತ್ಸಾಹಿಸುತ್ತಾ, ನೀನು ತುಂಬಾ ಸುಂದರವಾಗಿ ಕಾಣುತ್ತೀಯಾ, ಒಮ್ಮೆ ಇದು ಧರಿಸು ಎಂದು ಹೇಳುತ್ತಾ ಹಿಜಾಬ್ ಧರಿಸಲು ಒತ್ತಾಯಿಸುತ್ತಾರೆ.
ವಿಡಿಯೋ ನೋಡಿ:
भाई इतना भी सेक्युलरिज्म ठीक नहीं है उत्तर प्रदेश के मोरहाबाद में कोचिंग क्लास से लौटते समय एक हिंदू लड़की पर कथित तौर पर उसके मुस्लिम क्लासमेट्स ने बुर्का पहनने का दबाव डाला और उसे बुर्का पहनाया।
— Anuj Agnihotri Swatntra (@ASwatntra) January 16, 2026
वीडियो वायरल है पुलिस जांच कर रही है आखिर क्या मामला है? pic.twitter.com/caqi4xiuw6
ಹುಡುಗಿ ಆರಂಭದಲ್ಲಿ ಹಿಂಜರಿಯುತ್ತಿರುವಂತೆ ತೋರುತ್ತಾಳೆ ಆದರೆ ನಂತರ ಹಿಜಾಬ್ ಧರಿಸುತ್ತಾಳೆ. ವೀಡಿಯೊದ ಕೊನೆಯಲ್ಲಿ ಅವಳು ನಗುತ್ತಿರುವಂತೆ ಕಾಣುತ್ತದೆ. ಸದ್ಯ ಈ ಘಟನೆಯು ಸೋಷಿಯಲ್ ಮೀಡಿಯಾದಲ್ಲಿ ಪರ-ವಿರೋಧದ ವಾಗ್ವಾದಕ್ಕೆ ಕಾರಣವಾಗಿದೆ.ಅನೇಕ ಜನರು ಈ ಘಟನೆಯನ್ನು 'ದಿ ಕೇರಳ ಸ್ಟೋರಿ' ಚಿತ್ರಕ್ಕೆ ಹೋಲಿಕೆ ಮಾಡಿದ್ದಾರೆ."ಇದು ಕೇವಲ ಸ್ನೇಹವಲ್ಲ, ಬದಲಾಗಿ ಹಿಂದೂ ಯುವತಿಯರ ಮೇಲೆ ಉಂಟಾಗುವ ಒತ್ತಡ" ಎಂದು ಕೆಲವರು ದೂರಿದ್ದಾರೆ.
Viral Video: ರೀಲ್ಸ್‌ಗಾಗಿ ಇದೆಂಥ ಹುಚ್ಚಾಟ? ಹಸುವಿಗೆ ಚಿಕನ್ ಮೋಮೋಸ್ ತಿನ್ನಿಸಿದ ಯುವಕ! ವ್ಯಾಪಕ ಆಕ್ರೋಶ
ಒಬ್ಬ ಬಳಕೆದಾರರು, "ಇದು ಹಿಂದೂ ಹುಡುಗಿಯ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿಯ ಹಕ್ಕನ್ನು ಅಡ್ಡಿಪಡಿಸುವುದಿಲ್ಲವೇ? ಅಂತಹ ಕೃತ್ಯಕ್ಕಾಗಿ ಮುಸ್ಲಿಂ ಹುಡುಗಿಯರ ವಿರುದ್ಧ ಕಠಿಣ ಪ್ರಕರಣ ದಾಖಲಿಸಬೇಕಾಗಿದೆ ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು ''ಇದು ಸ್ನೇಹಿತರ ನಡುವೆ ನಡೆಯುವ ಸಹಜವಾದ ತಮಾಷೆಯ ದೃಶ್ಯ. ಯುವತಿ ಸ್ವ ಇಚ್ಛೆಯಿಂದಲೇ ಹಿಜಾಬ್ ಧರಿಸಿದ್ದು ಖುಷಿಯಾಗಿಯೇ ಪ್ರತಿಕ್ರಿಯೆ ನೀಡಿದ್ದಾಳೆ ಇದನ್ನು ಕೋಮು ಗಲಭೆ ಮಾಡುವುದು ಸರಿಯಲ್ಲ" ಎಂದು ಸಮರ್ಥಿಸಿಕೊಂಡಿದ್ದಾರೆ. ಕೆಲವು ಬಳಕೆದಾರರು ಹುಡುಗಿಯ ಮೇಲೆಯೇ ಜವಾಬ್ದಾರಿ ಯನ್ನು ಹೊರಿಸಿ, "ಅವಳು ತನ್ನ ನಿರ್ಧಾರಗಳನ್ನು ತೆಗೆದುಕೊಳ್ಳುವಷ್ಟು ಬಲಿಷ್ಠಳು ಎಂದು ಬರೆದುಕೊಂಡಿದ್ದಾರೆ.