ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Internal Reservation: ಒಳಮೀಸಲಾತಿ; ಜಾತಿ ಸಂಘರ್ಷಕ್ಕೆ ಸಿದ್ದರಾಮಯ್ಯ ಕುಮ್ಮಕ್ಕು ನೀಡುತ್ತಿದ್ದಾರೆ ಎಂದ ಛಲವಾದಿ ನಾರಾಯಣಸ್ವಾಮಿ

Chalavadi Narayanaswamy: ಈಗ ಜಾತಿ ಸಂಘರ್ಷಕ್ಕೆ ಸಿದ್ದರಾಮಯ್ಯ ಅವರು ಕುಮ್ಮಕ್ಕು ಕೊಡುತ್ತಿದ್ದಾರೆ. ಕಾಂಗ್ರೆಸ್ಸಿನವರು ಒಂದು ಕಡೆ ಜಾತಿಗಳನ್ನು ಒಡೆದು ತಮ್ಮ ಮತದ ಬಲ ಹೆಚ್ಚಿಸಿಕೊಂಡಿದ್ದರು. ಇನ್ನೊಂದು ಕಡೆ ಜಾತಿಗಳ ಸಂಘರ್ಷಕ್ಕೆ ಕುಮ್ಮಕ್ಕು ಕೊಡುತ್ತಿದ್ದಾರೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.

ಜಾತಿ ಸಂಘರ್ಷಕ್ಕೆ ಸಿಎಂ ಸಿದ್ದರಾಮಯ್ಯ ಕುಮ್ಮಕ್ಕು: ಛಲವಾದಿ ನಾರಾಯಣಸ್ವಾಮಿ

ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (ಸಂಗ್ರಹ ಚಿತ್ರ) -

Profile
Siddalinga Swamy Mar 7, 2026 8:25 PM

ಬೆಂಗಳೂರು, ಮಾ.6: ಒಳ ಮೀಸಲಾತಿ (Internal Reservation) ಸಂಬಂಧಿತ ಕಾಯ್ದೆಗೆ ಕೋರ್ಟ್ ಒಪ್ಪಿಗೆ ಇಲ್ಲದ ಕಾರಣ ರಾಜ್ಯಪಾಲರಿಂದ ಅಂಕಿತ ಪಡೆಯಬಾರದಿತ್ತು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಆಕ್ಷೇಪಿಸಿದ್ದಾರೆ. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳ ಮೀಸಲಾತಿ ಶೇ 15ರಿಂದ 17ಕ್ಕೆ ಏರಿಸಲಾಗಿತ್ತು. ನ್ಯಾ. ನಾಗಮೋಹನ್‍ದಾಸ್ ಅವರ ವರದಿಯನ್ನೂ ಪಡೆದರು. ಅದರ ಪ್ರಕಾರವೇ 6, 6, 5 ಎಂದು ಹಂಚಿಕೆ ಮಾಡಿದ್ದರು. ಕಾಯ್ದೆ ಅನುಮೋದಿಸಿ, ರಾಜ್ಯಪಾಲರಿಂದ ಅಂಕಿತವನ್ನೂ ಪಡೆದಿದ್ದರು ಎಂದು ಹೇಳಿದರು.

ನೀವ್ಯಾಕೆ ರಾಜ್ಯಪಾಲರ ಅಂಕಿತ ತೆಗೆದುಕೊಂಡಿರಿ? ನಿಮಗೆ ಪ್ರಜ್ಞೆ, ಬುದ್ಧಿ ಇಲ್ಲವೇ ಎಂದು ಕೇಳಿದರು. ಅಂಕಿತ ಪಡೆದ ಮೇಲೆ ಅದನ್ನೇ ಜಾರಿಗೊಳಿಸಬೇಕಿತ್ತು ಎಂದು ಆಗ್ರಹಿಸಿದರು. ಶೇ.15 ರ ಮೇಲೆ ಹಂಚಿಕೆ ಮಾಡುವುದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದೀರಿ. ಹಾಗಾಗಿ ಈ ಕಾಯ್ದೆ ಅನೂರ್ಜಿತ. ಅದು ತಿಪ್ಪೆಗುಂಡಿಗೆ ಹೋದಂತೆ ಎಂದು ಹೇಳಿದರು.

ನೀವು ಯಾವ ರೀತಿ 56 ಸಾವಿರ ಹುದ್ದೆಗಳನ್ನು ತುಂಬುತ್ತೀರಿ? ಎಸ್‍ಸಿ, ಎಸ್‍ಟಿಗಳ ಪಾಲು ಏನು? ಎಂದು ಕೇಳಿದರು. 24ರಂದು ಅಂಕಿತ ಹಾಕಿದ್ದಾರೆ. ಧಾರವಾಡ ವಿವಿ, ಬಿಡಿಎ, ಸಾರಿಗೆ ಇಲಾಖೆಯಲ್ಲಿ ಎ, ಬಿ, ಸಿ ಪ್ರವರ್ಗಗಳನ್ನು ಯಾಕೆ ಪ್ರಕಟಿಸಿದ್ದೀರಿ? ಗೊಂದಲ ಯಾಕೆ ಸೃಷ್ಟಿಸಿದ್ದೀರಿ. ಎಲ್ಲ ಹುದ್ದೆಗಳೂ ಪ್ರವರ್ಗ ಎ ಎಂದು ಬಂದಿವೆ ಎಂದು ದೂರಿದರು.

ಮೀಸಲಾತಿ ಜಾರಿಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಬದ್ಧತೆಯೇ ಇಲ್ಲ: ಛಲವಾದಿ ನಾರಾಯಣಸ್ವಾಮಿ

ಈಗ ಜಾತಿ ಸಂಘರ್ಷಕ್ಕೆ ಸಿದ್ದರಾಮಯ್ಯ ಅವರು ಕುಮ್ಮಕ್ಕು ಕೊಡುತ್ತಿದ್ದಾರೆ. ಕಾಂಗ್ರೆಸ್ಸಿನವರು ಒಂದು ಕಡೆ ಜಾತಿಗಳನ್ನು ಒಡೆದು ತಮ್ಮ ಮತದ ಬಲ ಹೆಚ್ಚಿಸಿಕೊಂಡಿದ್ದರು. ಇನ್ನೊಂದು ಕಡೆ ಜಾತಿಗಳ ಸಂಘರ್ಷಕ್ಕೆ ಕುಮ್ಮಕ್ಕು ಕೊಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಸರ್ಕಾರ ಮಾಡಿದ ತಪ್ಪಿಗೆ ಜನಾಂಗಗಳು ಯಾಕೆ ತಮ್ಮ ತಮ್ಮಲ್ಲಿ ಹೋರಾಟ ಮಾಡಬೇಕು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಕೇಳಿದರು. ಈ ವೇಳೆ ಬಿಜೆಪಿ ಮುಖಂಡ ರುದ್ರಯ್ಯ ಉಪಸ್ಥಿತರಿದ್ದರು.