ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಹಿಂದೂ ಧರ್ಮ ವಿರೋಧಿ ಹೇಳಿಕೆಗೆ ಜೈ ಶ್ರೀರಾಮ್ ಘೋಷಣೆ ಕೂಗಿ ಪ್ರತ್ಯುತ್ತರ ಕೊಟ್ಟ ಮುಸ್ಲಿಂ ಪೊಲೀಸ್ ಅಧಿಕಾರಿ

Hina Khan: ಹಿಂದೂ ಧರ್ಮ ವಿರೋಧಿ ಎಂದು ಕರೆದ ಹಿನ್ನೆಲೆಯಲ್ಲಿ ಮುಸ್ಲಿಂ ಪೊಲೀಸ್ ಅಧಿಕಾರಿ ಜೈ ಶ್ರೀರಾಮ್ ಘೋಷಣೆ ಕೂಗುವ ಮೂಲಕ ತಮ್ಮ ಮೇಲೆ ಬಂದಿದ್ದ ಅಪವಾದವನ್ನು ತಳ್ಳಿ ಹಾಕಿದ್ದಾರೆ. ಎಸ್‌ಪಿ ಹೀನಾ ಖಾನ್ ಶ್ರೀರಾಮ್ ಘೋಷಣೆ ಕೂಗಿದ್ದ ಅಧಿಕಾರಿಯಾಗಿದ್ದು, ಅವರು ಜಯ ಘೋಷ ಹಾಕಿದ್ದ ವಿಡಿಯೋ ವೈರಲ್ ಆಗಿದೆ.

ಎಸ್‌ಪಿ ಹೀನಾ ಖಾನ್

ಭೋಪಾಲ್‌: ಮಧ್ಯ ಪ್ರದೇಶ (Madhya Pradesh)ದ ಗ್ವಾಲಿಯರ್‌ (Gwalior)ನಲ್ಲಿ ರಾಮಾಯಣ ಪಠಣೆಗೆ ಸಂಬಂಧಿಸಿದಂತೆ ಉಂಟಾದ ವಾಕ್ಸಮರದಲ್ಲಿ ಬಲಪಂಥೀಯರಿಂದ ಕೇಳಿಬಂದ 'ಸನಾತನ ಧರ್ಮ ವಿರೋಧಿ' ಆರೋಪಕ್ಕೆ, 'ಜೈ ಶ್ರೀರಾಮ್' ಎಂದು ಘೋಷಣೆ ಕೂಗುವ ಮೂಲಕ ಎಸ್‌ಪಿ ಹೀನಾ ಖಾನ್ (Hina Khan) ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

ಗ್ವಾಲಿಯರ್‌ನಲ್ಲಿ ಅಂಬೇಡ್ಕರ್ ಪ್ರತಿಮೆಗೆ ಸಂಬಂಧಿಸಿದ ವಿವಾದದ ಬಳಿಕ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಹೀಗಾಗಿ ನಗರದಾದ್ಯಂತೆ ನಿಷೇಧಾಜ್ಞೆ ಜಾರಿಗೊಳಿಸಿ, ಸಾರ್ವಜನಿಕ ಸಭೆ-ಸಮಾರಂಭಗಳಿಗೆ ನಿಷೇಧ ಹೇರಲಾಗಿತ್ತು. ಅಷ್ಟೇ ಅಲ್ಲದೆ ಶಾಂತಿ-ಸುವ್ಯವಸ್ಥೆಯನ್ನು ಕಾಪಾಡಲು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಈ ನಡುವೆ ಮಧ್ಯ ಪ್ರದೇಶ ಹೈಕೋರ್ಟ್ (Madhya Pradesh High Court) ಹಿರಿಯ ವಕೀಲ ಅನಿಲ್ ಮಿಶ್ರಾ (Anil Mishra) ನೇತೃತ್ವದ ಗುಂಪೊಂದು ಸಿದ್ದೇಶ್ವರ್ ಹನುಮಾನ್ ಮಂದಿರದಲ್ಲಿ ರಾಮಾಯಣ ಪಠಣಕ್ಕೆ ಟೆಂಟ್ ಸಮೇತ ಆಗಮಿಸಿತ್ತು. ನಿಷೇಧಾಜ್ಞೆ ಜಾರಿಯಲ್ಲಿದ್ದ ಹಿನ್ನೆಲೆ ಎಸ್‌ಪಿ ಹೀನಾ ಖಾನ್ ಅವರನ್ನು ತಡೆದಿದ್ದಾರೆ. ಈ ವೇಳೆ ಹೀನಾ ಖಾನ್ ಮತ್ತು ಅನಿಲ್ ಮಿಶ್ರಾ ನಡುವೆ ವಾಗ್ವಾದ ನಡೆದಿದೆ.

'ಜೈ ಶ್ರೀರಾಮ್' ಕೂಗಿದ ಎಸ್‌ಪಿ ಹೀನಾ ಖಾನ್ ಅವರ ವಿಡಿಯೊ:



ಈ ಸುದ್ದಿಯನ್ನು ಓದಿ: Crime News: ಗೆಳತಿಯನ್ನು ಕೊಂದ 48 ವರ್ಷಗಳ ನಂತರ ಆರೋಪಿ ಅರೆಸ್ಟ್; 23ನೇ ಹರೆಯದಲ್ಲಿ ಕೊಲೆ, 71ನೇ ವಯಸ್ಸಿನಲ್ಲಿ ಬಂಧನ

ಈ ವೇಳೆ ಅನಿಲ್ ಮಿಶ್ರಾ ಬೆಂಬಲಿಗರು ಹೀನಾ ಖಾನ್ ಅವರನ್ನು ಸನಾತನ ಧರ್ಮ ವಿರೋಧಿ ಎಂದು ಆರೋಪಿಸುತ್ತಾ ಜೈ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದಾರೆ. ಇದಕ್ಕೆ ಪ್ರತಿಯಾಗಿ ಹೀನಾ ಖಾನ್ ಕೂಡ ಜೈ ಜೈ ಶ್ರೀರಾಮ್...ಜೈಜೈ ಶ್ರೀರಾಮ್... ಎಂದು ಘೋಷಣೆ ಕೂಗಿದ್ದಾರೆ. "ಜೈ ಶ್ರೀರಾಮ್ ಎಂದು ಘೋಷಣೆ ಕೂಗುವ ಮೂಲಕ ನನ್ನ ಮೇಲೆ ಒತ್ತಡ ಹೇರಬಹುದು ಎಂದು ಭಾವಿಸಿದ್ದರೆ ಅದು ನಿಮ್ಮ ತಪ್ಪು ಕಲ್ಪನೆ" ಎಂದು ಇದೇ ವೇಳೆ ಹೀನಾ ಖಾನ್ ಹೇಳಿದ್ದಾರೆ. ಮುಸ್ಲಿಂ ಪೊಲೀಸ್ ಅಧಿಕಾರಿಯೊಬ್ಬರು ಜೈ ಶ್ರೀರಾಮ್ ಘೋಷಣೆ ಕೂಗಿದ್ದನ್ನು ಕಂಡು ಆಶ್ಚರ್ಯಚಕಿತರಾದ ಉದ್ರಿಕ್ತ ಗುಂಪು ಅಲ್ಲಿಂದ ವಾಪಸ್ ಆಗಿದೆ.

ಬಳಿಕ ವಕೀಲ ಅನಿಲ್ ಮಿಶ್ರಾ ನೇತೃತ್ವದ ತಂಡ ಸಿದ್ದೇಶ್ವರ್ ಹನುಮಾನ್ ಮಂದಿರಕ್ಕೆ ಭೇಟಿ ನೀಡಿ ಕೆಲ ಹೊತ್ತು ಮಾತುಕತೆ ನಡೆಸಿದೆ. ಆ ಸ್ಥಳದಲ್ಲಿ ಕಾರ್ಯಕ್ರಮ ಮಾಡಲು ಸಾಧ್ಯವಾಗುವುದಿಲ್ಲ ಎಂದು ಅರಿತು ಎಲ್ಲರೂ ಮರಳಿದ್ದು, ದಾರಿಯುದ್ದಕ್ಕೂ ಸ್ಥಳೀಯ ಆಡಳಿತ ಹಾಗೂ ಪೊಲೀಸ್ ಇಲಾಖೆ ವಿರುದ್ಧ ಘೋಷಣೆ ಕೂಗುತ್ತ ಸಾಗಿರುವುದು ವಿಡಿಯೊದಲ್ಲಿ ಕಂಡುಬಂದಿದೆ.

ಇನ್ನು ಈ ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಎಸ್‌ಪಿ ಹೀನಾ ಖಾನ್, "ಸಿದ್ದೇಶ್ವರ್ ಹನುಮಾನ್ ಮಂದಿರದ ಬಳಿ ರಾಮಾಯಣ ಪಠಣೆಗೆ ಸಂಬಂಧಿಸಿದಂತೆ ಟೆಂಟ್ ಹಾಕುವ ಬಗ್ಗೆ ಮಾತುಕತೆ ನಡೆದಿತ್ತು. ನಿಷೇಧಾಜ್ಞೆ ಜಾರಿಯಲ್ಲಿರುವ ಹಿನ್ನೆಲೆ ಅನುಮತಿ ಇಲ್ಲದೆ ಯಾವುದೇ ಕಾರ್ಯಕ್ರಮ ನಡೆಸುವಂತಿಲ್ಲ ಎಂದು ಅವರಿಗೆ ವಿವರಿಸಲಾಗಿದೆ" ಎಂದಿದ್ದಾರೆ.