ನಾಗಪುರ, ಮಾ.5: ಬಣ್ಣಗಳ ಹಬ್ಬ ಹೋಳಿ ಹುಣ್ಣಿಮೆಯನ್ನು ಸಂತೋಷ, ಸಡಗರದಿಂದ ಆಚರಣೆ ಮಾಡಲಾಗುತ್ತದೆ. ಎಲ್ಲೆಡೆ ಯುವಕ–ಯುವತಿಯರು, ಎಳೆಯರು ಹೋಳಿ ಹಬ್ಬದ ರಂಗಿನಲ್ಲಿ ಮಿಂದು ಸಂಭ್ರಮಿಸಿದ್ದಾರೆ. ಈ ನಡುವೆ ಮಹಾರಾಷ್ಟ್ರ ದಲ್ಲಿ ಕ್ರೂರತ್ವ ಮೆರೆದಿರುವ ಘಟನೆ ಯೊಂದು ಕಂಡು ಬಂದಿದೆ. ಮೊಮ್ಮಗನ ಮೇಲೆ ಸ್ವಂತ ಅಜ್ಜಿಯೇ ಕುದಿಯುವ ನೀರನ್ನು ಸುರಿ ದಿದ್ದು ಬಾಲಕನಿಗೆ ತೀವ್ರ ಗಾಯವಾಗಿದೆ. ಈ ಘಟನೆ ಮಾರ್ಚ್ 3 ರಂದು ಅರಾಮ್ಶಿನ್ ಪ್ರದೇಶದ ವಾರ್ಡ್ ಸಂಖ್ಯೆ 2 ರಲ್ಲಿ ನಡೆದಿದ್ದು ಸಿಸಿಟಿವಿ ಕ್ಯಾಮೆರಾದಲ್ಲಿ (Viral Video) ಸೆರೆಯಾಗಿದೆ.
ಮಾಹಿತಿಯ ಪ್ರಕಾರ, ಓಂ ಹರೀಶ್ ವಾಂಗೆ ಎಂದು ಗುರುತಿಸಲಾದ ಮಗು ಹೋಳಿ ಆಟದ ಸಂಭ್ರಮದಲ್ಲಿತ್ತು. ಮನೆಯ ಹೊರಗೆ ಬಣ್ಣ ತುಂಬಿದ ಸ್ಪ್ರೇ ಬಾಟಲಿಯೊಂದಿಗೆ ತನ್ನ ಪಾಡಿಗೆ ಆಟವಾಡುತ್ತಿತ್ತು. ಆದರೆ ಆಟ ಆಡುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಬಿಸಿ ನೀರು ತುಂಬಿ ಸುತ್ತಿದ್ದ ಅಜ್ಜಿ ಸಿಂಧು ಠಾಕ್ರೆ ಮೇಲೆ ಬಣ್ಣವನ್ನು ಸಿಂಪಡಿಸಿದ್ದಾನೆ, ಇದರಿಂದ ಸಿಟ್ಟುಗೊಂಡ ಅಜ್ಜಿ, ಆ ಕ್ಷಣವೇ ತನ್ನ ಬಳಿ ಇದ್ದ ಬಕೆಟ್‌ನಲ್ಲಿದ್ದ ಕುದಿಯುವ ನೀರನ್ನು ಮಗುವಿನ ಮೇಲೆ ಸುರಿದಿದ್ದಾರೆ.
ವಿಡಿಯೋ ನೋಡಿ:
ಈ ದೃಶ್ಯವು ಹತ್ತಿರದ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿದ್ದುನೋಡಲು ಅತ್ಯಂತ ಭಯಾನಕವಾಗಿದೆ.ಇದರಿಂದ ಮಗುವಿನ ಸೊಂಟದ ಕೆಳಗೆ ತೀವ್ರವಾದ ಸುಟ್ಟಗಾಯಗಳಾಗಿದ್ದು, ಬಾಲಕನನ್ನು ನಾಗ್ಪುರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿ ವೈದ್ಯರು ಅವನಿಗೆ ಸುಮಾರು 45 ಪ್ರತಿಶತ ಸುಟ್ಟ ಗಾಯಗಳಾಗಿವೆ ಎಂದು ಅಂದಾಜಿಸಿದ್ದಾರೆ.
ಮಹಿಳೆಯ ವಿರುದ್ಧ ದೂರು ದಾಖಲಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದ್ದು ಹಬ್ಬದ ಸಂದರ್ಭದಲ್ಲಿ ಮಗುವಿನ ಮೇಲೆ ಈ ಕೃತ್ಯ ಎಸಗಲಾಗಿದ್ದು ಸಾವರ್ಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಈ ಬಗ್ಗೆ ಬಳಕೆದಾರರು ನಾನಾ ಬಗೆಯ ಕಾಮೆಂಟ್ ಮಾಡಿದ್ದಾರೆ. ನೆಟ್ಟಿಗರೊಬ್ಬರು ಈ ಅಜ್ಜಿಗೆ ಸರಿಯಾದ ಶಿಕ್ಷೆ ನೀಡಬೇಕು ಎಂದು ಬರೆದುಕೊಂಡಿದ್ದಾರೆ.