ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ನೇಪಾಳ ಜೈಲಿನಿಂದ ತಪ್ಪಿಸಿಕೊಂಡ ಖೈದಿಗಳು, ಉಗ್ರರು ಭಾರತಕ್ಕೆ ನುಸುಳಲು ಯತ್ನ!

Nepal Jailbreak Sparks Alarm: ನೇಪಾಳದಲ್ಲಿ ನಡೆದ ಜನರೇಷನ್ ಝಡ್ ಪ್ರತಿಭಟನೆಯ ಸಂದರ್ಭದಲ್ಲಿ 13,700 ಕ್ಕೂ ಹೆಚ್ಚು ಕೈದಿಗಳು ತಪ್ಪಿಸಿಕೊಂಡಿದ್ದು, ಈ ಅಪರಾಧಿಗಳು ಭಾರತಕ್ಕೆ ನುಸುಳುವ ಪ್ರಯತ್ನದಲ್ಲಿದ್ದಾರೆ ಎಂದು ಭಾರತೀಯ ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ಗಡಿಗಳಲ್ಲಿ ಭದ್ರತೆ ಹೆಚ್ಚಿಸುವಂತೆ ಸೂಚಿಸಲಾಗಿದೆ.

ಕಠ್ಮಂಡು: ನೇಪಾಳ (Nepal) ದಲ್ಲಿ ನಡೆದ ಜನರೇಷನ್ ಝಡ್ (Generation Z) ಪ್ರತಿಭಟನೆಯ ಸಂದರ್ಭದಲ್ಲಿ 13,700 ಕ್ಕೂ ಹೆಚ್ಚು ಕೈದಿಗಳು ತಪ್ಪಿಸಿಕೊಂಡಿದ್ದಾರೆ. ದಕ್ಷಿಣ ಏಷ್ಯಾದ ಇತ್ತೀಚಿನ ಇತಿಹಾಸದಲ್ಲಿಯೇ ಅತಿದೊಡ್ಡ ಜೈಲ್ ಬ್ರೇಕ್‌ ಇದಾಗಿದೆ. ಇದೀಗ ಭಾರತೀಯ ಕೇಂದ್ರ ಗುಪ್ತಚರ ಸಂಸ್ಥೆ ಹೊಸ ಎಚ್ಚರಿಕೆಯನ್ನು ನೀಡಿವೆ. ಜೈಲಿನಿಂದ ತಪ್ಪಿಸಿಕೊಳ್ಳುವ ಮೂಲಕ ಭಾರತಕ್ಕೆ ನುಸುಳಲು ಭಯೋತ್ಪಾದಕರು, ಅಪರಾಧಿಗಳು, ಮಾಫಿಯಾಗಳು ಪ್ರಯತ್ನಿಸುತ್ತಿವೆ ಎಂದು ಎಚ್ಚರಿಕೆ ನೀಡಿವೆ.

ಭಾರತ-ನೇಪಾಳ ಗಡಿಯಲ್ಲಿ ವಿಸ್ತೃತ ಅವಧಿಯವರೆಗೆ ಹೆಚ್ಚಿನ ಜಾಗರೂಕತೆಯನ್ನು ಕಾಯ್ದುಕೊಳ್ಳುವಂತೆ ಗುಪ್ತಚರ ಸಂಸ್ಥೆಗಳು ಪೊಲೀಸರು ಮತ್ತು ಭದ್ರತಾ ಪಡೆಗಳಿಗೆ ಎಚ್ಚರಿಸಿದೆ. ಭಯೋತ್ಪಾದಕರು, ಮಾದಕವಸ್ತು ಕಳ್ಳಸಾಗಣೆದಾರರು ಮತ್ತು ಇತರ ಕ್ರಿಮಿನಲ್ ಅಪರಾಧಿಗಳು ಭಾರತಕ್ಕೆ ನುಸುಳಲು ಪ್ರಯತ್ನಿಸುತ್ತಿರುವುದರಿಂದ ಈ ಪ್ರದೇಶದಲ್ಲಿ ಗಂಭೀರ ಭದ್ರತಾ ಕಳವಳಗಳು ವ್ಯಕ್ತವಾಗಿವೆ.

ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರ ಪ್ರಕಾರ, ಭಾರತಕ್ಕೆ ನುಸುಳಲು ಪ್ರಯತ್ನಿಸುತ್ತಿರುವವರಲ್ಲಿ ಪಾಕಿಸ್ತಾನ ಮೂಲದ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಭಯೋತ್ಪಾದಕ ಶಂಕಿತರು, ಮಾದಕವಸ್ತು ಕಳ್ಳಸಾಗಣೆದಾರರು, ಅಪಹರಣಕಾರರು ಮತ್ತು ಹಂತಕರು ಸೇರಿದ್ದಾರೆ. ಅವರಲ್ಲಿ ಹಲವರು ಭಾರತ-ನೇಪಾಳ ಗಡಿಯಲ್ಲಿ ಸಕ್ರಿಯರಾಗಿದ್ದರು. ಇಲ್ಲಿಯವರೆಗೆ, ಸಶಸ್ತ್ರ ಸೀಮಾ ಬಲ್ (SSB) 72 ಜೈಲ್ ಬ್ರೇಕ್ ಶಂಕಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಇದನ್ನೂ ಓದಿ: Viral News: ಭಾರತದ ಈ ಹಳ್ಳಿಯಲ್ಲಿ ಈರುಳ್ಳಿ ಬಳಸುವಂತಿಲ್ಲ!

ಪರಾರಿಯಾದವರಿಗೆ ಈಗಾಗಲೇ ಭಾರತದೊಳಗೆ ಸ್ಥಳೀಯ ಸಂಪರ್ಕವಿದ್ದು, ಇದು ಅವರಿಗೆ ಆಶ್ರಯವನ್ನು ಕಂಡುಕೊಳ್ಳಲು ಸಹಾಯ ಮಾಡುತ್ತದೆ ಎಂದು ಮೂಲಗಳು ತಿಳಿಸಿವೆ. ಪರಾರಿಯಾದವರಲ್ಲಿ ಶರಣಾಗಿದ್ದರೆ, ಅಪರಾಧಿಗಳು ನೇಪಾಳದ ಅಸ್ಥಿರತೆಯನ್ನು ಒಂದು ಅವಕಾಶವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ನೇಪಾಳದಲ್ಲಿ ಹಿಂಸಾಚಾರ ಭುಗಿಲೆದ್ದ ಕೆಲವೇ ದಿನಗಳ ಮೊದಲು, ಜೈಶ್-ಎ-ಮೊಹಮ್ಮದ್ ಭಯೋತ್ಪಾದಕಾ ಸಂಘಟನೆಗೆ ಸಂಬಂಧ ಹೊಂದಿರುವ ಉಗ್ರರು ಪ್ರವಾಸಿ ವೀಸಾದಲ್ಲಿ ದೇಶವನ್ನು ಪ್ರವೇಶಿಸಿ ಮಲೇಷ್ಯಾಕ್ಕೆ ಪಲಾಯನ ಮಾಡಿದ್ದಾರೆ ಎಂದು ವರದಿಯಾಗಿದೆ. ಅವರು ಭಾರತಕ್ಕೆ ಪ್ರವೇಶಿಸಲು ಪ್ರಯತ್ನಿಸಿದ್ದಾರೆ ಎಂದು ಹೇಳಲಾಗಿತ್ತು.

ಜೈಲ್ ಬ್ರೇಕ್ ನಂತರ, ಗುಪ್ತಚರ ಸಂಸ್ಥೆಗಳು ಎಲ್ಲಾ ಗಡಿ ರಾಜ್ಯಗಳಿಗೆ ಎಚ್ಚರಿಕೆ ನೀಡಿದ್ದು, ಪರಾರಿಯಾದವರು ನುಸುಳಲು ಪ್ರಯತ್ನಿಸಬಹುದು ಎಂದು ಎಚ್ಚರಿಸಿದೆ. ಭಾರತ-ನೇಪಾಳ ಗಡಿಯುದ್ದಕ್ಕೂ, ವಿಶೇಷವಾಗಿ ಉತ್ತರ ಪ್ರದೇಶ, ಬಿಹಾರ ಮತ್ತು ಉತ್ತರಾಖಂಡಗಳಲ್ಲಿ ಭದ್ರತಾ ಪಡೆಗಳಿಗೆ ಕಟ್ಟುನಿಟ್ಟಿನ ಕಣ್ಗಾವಲು ಕಾಯ್ದುಕೊಳ್ಳಲು ಮತ್ತು ತೀವ್ರ ತಪಾಸಣೆ ನಡೆಸಲು ಸೂಚನೆ ನೀಡಲಾಗಿದೆ.

ತಪ್ಪಿಸಿಕೊಂಡವರಲ್ಲಿ ಕೆಲವರು ಅಂತಾರಾಷ್ಟ್ರೀಯ ಭಯೋತ್ಪಾದನೆ ಮತ್ತು ಸಂಘಟಿತ ಅಪರಾಧ ಜಾಲಗಳೊಂದಿಗೆ ನೇರ ಸಂಪರ್ಕವನ್ನು ಹೊಂದಿದ್ದಾರೆ. ಅವರು ಇತರ ದೇಶಗಳ ಅಂಶಗಳಿಂದ ಬೆಂಬಲ ಪಡೆಯಲು ಸಹ ಪ್ರಯತ್ನಿಸಬಹುದು ಎಂದು ಹಿರಿಯ ಭದ್ರತಾ ಅಧಿಕಾರಿಯೊಬ್ಬರು ಹೇಳಿದರು. ಗುಪ್ತಚರ ಅಂದಾಜಿನ ಪ್ರಕಾರ, ಪರಾರಿಯಾದವರಲ್ಲಿ ಅನೇಕರು ತಕ್ಷಣ ಗಡಿ ದಾಟಲು ಪ್ರಯತ್ನಿಸದಿರಬಹುದು. ಬದಲಾಗಿ, ಭದ್ರತಾ ಕ್ರಮಗಳು ಸಡಿಲಗೊಳ್ಳುತ್ತಿರುವುದನ್ನೇ ಕಾಯುತ್ತಾ ನಂತರ ಅಕ್ರಮವಾಗಿ ನುಸುಳಲು ಪ್ರಯತ್ನಿಸಬಹುದು ಎಂದು ಹೇಳಿದೆ.

ಇನ್ನು ಕೆಲವರು ಗಡಿಯಾಚೆಗಿನ ಮಾರ್ಗಗಳು ಮತ್ತು ಸ್ಥಳೀಯ ಬೆಂಬಲಗಳನ್ನು ಬಳಸಿಕೊಳ್ಳುವ ಸಾಧ್ಯತೆಯಿದೆ ಎಂದು ಎಚ್ಚರಿಸಿದೆ. ಭಾರತ-ನೇಪಾಳ ಗಡಿಯು ಭಾರತೀಯ ಭದ್ರತಾ ಪಡೆಗಳಿಗೆ ಬಹಳ ಹಿಂದಿನಿಂದಲೂ ಸವಾಲುಗಳನ್ನು ಒಡ್ಡಿದೆ. ಪಲಾಯನಗೈದವರು ಹಠಾತ್ತನೇ ಒಳನುಸುಳುವುದು, ಸೂಕ್ಷ್ಮ ಜಿಲ್ಲೆಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಅಸ್ಥಿರಗೊಳಿಸಬಹುದು. ಕಳ್ಳಸಾಗಣೆ, ಸುಲಿಗೆ ಮತ್ತು ಭಯೋತ್ಪಾದನೆಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಹೆಚ್ಚಳಕ್ಕೆ ಕಾರಣವಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.