ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Viral Video: ಶ್ರೀಮಂತ ಹುಡುಗರು ಬಿಸಿ ಸಮೋಸ ಇದ್ದಂತೆ! ಸಂಗಾತಿ ಆಯ್ಕೆ ಬಗ್ಗೆ ಸಲಹೆ ನೀಡಿದ ಯುವತಿ!

ಇತ್ತೀಚೆಗೆ ಸರಿಯಾದ ಆಯ್ಕೆಯ ಹುಡುಗ/ಹುಡುಗಿ ಸಿಕ್ಕಿಲ್ಲ ಎಂದು ಮದುವೆ ಗೋಜಿಗೆ ಹೋಗದವರು ಇದ್ದಾರೆ. ಆದರೆ ಇಲ್ಲೊಬ್ಬ ಯುವತಿ 'ಜೀವನ ಸಂಗಾತಿ'ಯನ್ನು ಹುಡುಕುವ ಬಗ್ಗೆ ನೀಡಿರುವ ಹೇಳಿಕೆ ಯೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಜೀವನದಲ್ಲಿ ಕಠಿಣ ಪ್ರಯತ್ನ ಮುಖ್ಯ ಆದರೆ ಯಾವಾಗಲೂ ಸಾಂಪ್ರದಾಯಿಕ ಅರ್ಥದಲ್ಲಿ ಅಲ್ಲ. ಒಳ್ಳೆಯ ಮತ್ತು ಶ್ರೀಮಂತ ಹುಡುಗನನ್ನು ಹುಡುಕಲು ಸರಿಯಾದ ಸಿದ್ಧತೆ ಮತ್ತು ಅರಿವು ಬೇಕಾಗುತ್ತದೆ ಎಂದು ಅವರು ಹೇಳಿಕೊಂಡಿದ್ದಾರೆ..

ಸಂಗಾತಿ ಆಯ್ಕೆ ಬಗ್ಗೆ ಯುವತಿ ನೀಡಿದ ಸಲಹೆ

ಬೆಂಗಳೂರು,ಫೆ. 10: ಸಂಗಾತಿ ಹುಡುಕಾಟದಲ್ಲಿ ಹೆಚ್ಚಿನವರು ಎಡವುತ್ತಾರೆ.‌ ಅದರಲ್ಲೂ ಇತ್ತೀಚೆಗೆ ಸರಿಯಾದ ಆಯ್ಕೆಯ ಹುಡುಗ/ಹುಡುಗಿ ಸಿಕ್ಕಿಲ್ಲ ಎಂದು ಮದುವೆ ಗೋಜಿಗೆ ಹೋಗದವರು ಇದ್ದಾರೆ. ಆದರೆ ಇಲ್ಲೊಬ್ಬ ಯುವತಿ 'ಜೀವನ ಸಂಗಾತಿ'ಯನ್ನು ಹುಡುಕುವ ಬಗ್ಗೆ ನೀಡಿರುವ ಹೇಳಿಕೆಯೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಜೀವನದಲ್ಲಿ ಕಠಿಣ ಪ್ರಯತ್ನ ಮುಖ್ಯ ಆದರೆ ಯಾವಾಗಲೂ ಸಾಂಪ್ರದಾಯಿಕ ಅರ್ಥದಲ್ಲಿ ಅಲ್ಲ. ಒಳ್ಳೆಯ ಮತ್ತು ಶ್ರೀಮಂತ ಹುಡುಗನನ್ನು ಹುಡುಕಲು ಸರಿಯಾದ ಸಿದ್ಧತೆ ಮತ್ತು ಅರಿವು ಬೇಕಾಗುತ್ತದೆ ಎಂದು ಅವರು ಹೇಳಿಕೊಂಡಿದ್ದಾರೆ

ಯುವತಿ ತನ್ನ ಶ್ರೀಮಂತ ಅನುಭವಗಳ ಬಗ್ಗೆ ಹಾಸ್ಯಮಯವಾಗಿ ಮಾತನಾಡುವುದರೊಂದಿಗೆ ವಿಡಿಯೊ ಪ್ರಾರಂಭವಾಗುತ್ತದೆ. ನಾನು ಯಾವತ್ತೂ ವಿಮಾನದಲ್ಲಿ ಪ್ರಯಾಣ ಮಾಡುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಆದರೆ ಈಗ ವಿಮಾನ ಪ್ರಯಾಣ ತನ್ನ ಸಾಮಾನ್ಯ ಜೀವನದ ಭಾಗವಾಗಿದೆ. ಶ್ರೀಮಂತರ ಸಮಸ್ಯೆಗಳೇ ಹೀಗೆ ಇರುತ್ತದೆ. ಇನ್ನು ಮುಂದೆ ನಾನು ತರಕಾರಿ ತರಲು ಕೂಡ ಫ್ಲೈಟ್‌ನಲ್ಲೇ ಹೋಗಬೇಕು ಅಂದುಕೊಂಡಿದ್ದೇನೆ ಎಂದು ತಮಾಷೆ ಮಾಡಿದ್ದಾರೆ.

ವಿಡಿಯೋ ನೋಡಿ:



ಜೀವನದಲ್ಲಿ ಎಷ್ಟು ಶ್ರಮ ಪಡಬೇಕು ಎಂದರೆ, ಒಬ್ಬ ಶ್ರೀಮಂತ ಮತ್ತು ಒಳ್ಳೆಯ ಹುಡುಗನನ್ನು ಹುಡುಕುವಷ್ಟು ಕಷ್ಟ ಪಡಬೇಕು. ಆದರೆ ಕಷ್ಟಪಟ್ಟು ಕೆಲಸ ಮಾಡುವುದು ಎಂದರೆ ಬರೀ ದುಡಿ ಯುವುದು ಎಂದರ್ಥವಲ್ಲ.ಒಳ್ಳೆಯ ಅವಕಾಶ ಸಿಕ್ಕಾಗ ಅದನ್ನು ಬಳಸಿಕೊಳ್ಳಬೇಕು. ಇದರಿಂದ ಸ್ವಲ್ಪ ನೀವು ಯಾಮಾರಿದರೂ ಆ ಅವಕಾಶವನ್ನು ಬೇರೆಯವರು ಬಳಸಿಕೊಳ್ಳಲು ಸಿದ್ದ ಇರುತ್ತಾರೆ ಎಂದು ವಿವರಿಸಿದ್ದಾರೆ.

Viral Video: ಹಿಂದೂ ದೇವಾಲಯದಲ್ಲಿ ಮುಸ್ಲಿಂ ಯುವಕನ ರೀಲ್ಸ್; ಕಲ್ಯಾಣಿಗೆ ನೀರು ಉಗಿದ ಯೂಟ್ಯೂಬರ್‌!

ವಿಡಿಯೋದ ಅತ್ಯಂತ ಕುತೂಹಲಕಾರಿ ಸ್ವಾರಸ್ಯಕರ ಭಾಗವೆಂದರೆ ಅವಳು ಶ್ರೀಮಂತ ಹುಡುಗ ರನ್ನು ಸಮೋಸಗೆ ಹೋಲಿಕೆ ಮಾಡಿದ್ದಾರೆ. ಒಳ್ಳೆಯ ಮತ್ತು ಶ್ರೀಮಂತ ಹುಡುಗರನ್ನು ತಿಂಡಿಗಳಂತೆ ಹೇಗೆ ಸುಲಭವಾಗಿ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ಒಳ್ಳೆಯ ಮತ್ತು ಶ್ರೀಮಂತ ಹುಡುಗರು ಬಿಸಿ ಬಿಸಿ ಸಮೋಸವಿದ್ದಂತೆ. ನೀವು ಸುಮ್ಮನೆ ನೋಡುತ್ತಾ ನಿಂತರೆ ಯಾರೋ ಬಂದು ಪ್ಲೇಟ್‌ನಲ್ಲಿ ಹಾಕಿಕೊಂಡು ತಿನ್ನುತ್ತಾರೆ ಆದ್ದರಿಂದ, ನಿಮ್ಮ ಸ್ವಂತ ಸಮೋಸಾಗಳನ್ನು ನೀವೇ ಕಬಳಿಸಿಕೊಳ್ಳಿ ಎಂದಿದ್ದಾರೆ.

ನಿಮ್ಮ ಸಮೋಸವನ್ನು ನೀವೇ ಮೊದಲು ಆಯ್ದುಕೊಳ್ಳಿ. ಕೆರಿಯರ್ ಅಂತೆಲ್ಲಾ ಆಮೇಲೆ ನೋಡಿ ಕೊಳ್ಳಬಹುದು ಎಂದು ನಗುತ್ತಾ ಹೇಳಿದ್ದಾರೆ. ಅನೇಕರು ವೀಡಿಯೊವನ್ನು ಹಾಸ್ಯ ಎಂದು ಉಲ್ಲೇಖಿಸಿದರೂ ಇದರಲ್ಲಿ ಉತ್ತಮ ಒಳಾರ್ಥ ಇದೆ ಎಂದು ಶ್ಲಾಘಿಸಿದ್ದಾರೆ. ಬಳಕೆದಾರರೊಬ್ಬರು ಪ್ರಬುದ್ಧತೆ ಎಂದರೆ ಈ ಯುವತಿ ವೃತ್ತಿಜೀವನವನ್ನು ನಿರ್ಮಿಸುವ ಬಗ್ಗೆ ಈಕೆ ಮಾತನಾಡಿಲ್ಲ. ಆದರೆ ಐಷಾರಾಮಿ ಜೀವನ ಆನಂದಿಸಲು ಶ್ರೀಮಂತ ವ್ಯಕ್ತಿಯನ್ನು ಹುಡುಕುವ ಬಗ್ಗೆ ಮಾತ ನಾಡಿದ್ದಾರೆ..ಇದು ನಿಜವಾದ ಮೆಚ್ಯುರಿಟಿ ಎಂದಿದ್ದಾರೆ. ಮತ್ತೊಬ್ಬರು ಸಮಾಜದ ಇಂದಿನ ಮುಖವನ್ನು ವ್ಯಂಗ್ಯವಾಗಿ ಬಿಚ್ಚಿಟ್ಟಿದ್ದಾಳೆ ಇದು ನಿಜ ಅಂದಿದ್ದಾರೆ.