ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

"ಗ್ರಾಹಕಿಯರೇ ರಾಣಿಯರು. ರಾಣಿಯರು ಎಂದಿಗೂ ಚೌಕಾಶಿ ಮಾಡಲ್ಲ": ಅಂಗಡಿಯೊಂದರಲ್ಲಿ ಕಂಡುಬಂದ ಬೋರ್ಡ್‌ಗೆ ನೆಟ್ಟಿರು ಫಿದಾ

Viral Video: ಇಲ್ಲೊಬ್ಬ ವ್ಯಾಪಾರಿ ಚೌಕಾಶಿಗೆ ಫುಲ್ ಸ್ಟಾಪ್ ಇಡಲು ಬೆಸ್ಟ್ ಪ್ಲಾನ್ ಒಂದನ್ನು ಮಾಡಿದ್ದಾನೆ. ಡ್ರೆಸ್ ಮತ್ತು ಆಭರಣಗಳ ಅಂಗಡಿಯೊಂದರ ಮುಂದೆ ವ್ಯಾಪಾರಿಯು ಗಮನ ಸೆಳೆಯುವ ಬೋರ್ಡ್ ಒಂದನ್ನು ಅಳವಡಿಸಿದ್ದಾನೆ. ಅದರಲ್ಲಿ ಅವರು ಗ್ರಾಹಕಿಯರನ್ನು ಹೊಗಳುವ ಮೂಲಕ ರಿಯಾಯಿತಿಯನ್ನು ಕೇಳಬೇಡಿ ಎಂದು ವಿನಂತಿಸಿದ್ದಾರೆ.

ವ್ಯಾಪಾರಿಯ ಮಾಸ್ಟರ್ ಪ್ಲಾನ್

ನವದೆಹಲಿ, ಜ. 26: ಯಾವುದೇ ವಸ್ತು ಕಡಿಮೆ ಬೆಲೆಗೆ ಸಿಗಬೇಕೆಂದು ಗ್ರಾಹಕರು ಇಚ್ಚಿಸುವುದು ಸಾಮಾನ್ಯ. ಕೆಲವರಂತೂ ವ್ಯಾಪಾರಿಯ ಮುಂದೆ ಬೆಲೆ ಕಡಿತಕ್ಕಾಗಿ ಪಟ್ಟು ಹಿಡಿದು ಕೂತು ಬಿಡುತ್ತಾರೆ. ಅದರಲ್ಲೂ ಭಾರತದಲ್ಲಿ 'ಚೌಕಾಶಿ' ಮಾಡುವುದು ಒಂದು ಕಲೆಯಿದ್ದಂತೆ ಎನ್ನುವವರೂ ಇದ್ದಾರೆ. ಆದರೆ ಇಲ್ಲೊಬ್ಬ ವ್ಯಾಪಾರಿ ಚೌಕಾಶಿಗೆ ಫುಲ್ ಸ್ಟಾಪ್ ಇಡಲುಉತ್ತಮ ಮಾರ್ಗವೊಂದನ್ನು ಕಂಡುಕೊಂಡಿದ್ದಾನೆ. ತನ್ನ ಬಟ್ಟೆ ಮತ್ತು ಆಭರಣ ಅಂಗಡಿಯ ಮುಂದೆ ವ್ಯಾಪಾರಿಯು ಗಮನ ಸೆಳೆಯುವ ಬೋರ್ಡ್ ಒಂದನ್ನು ಅಳವಡಿಸಿದ್ದಾನೆ. ಗ್ರಾಹಕಿಯನ್ನು ಹೊಗಳುವ ಮೂಲಕ ರಿಯಾಯಿತಿ ಕೇಳಬೇಡಿ ಎಂದು ಮನವಿ ಮಾಡಿದ್ದಾನೆ.

ಗ್ರಾಹಕರೊಂದಿಗಿನ ಚೌಕಾಶಿಯನ್ನು ತಪ್ಪಿಸಲು ಈ ಅಂಗಡಿ ಮಾಲಕ ಅನುಸರಿಸಿದ ವಿಶಿಷ್ಟ ತಂತ್ರವು ಸೋಶಿಯಲ್ ಮೀಡಿಯಾದಲ್ಲಿ ಜನರ ಗಮನ ಸೆಳೆದಿದೆ. ಮಹಿಳೆಯರು ತಮ್ಮ ಚೌಕಾಶಿ ಕೌಶಲ್ಯದಲ್ಲಿ ಎಷ್ಟು ಶ್ರೇಷ್ಠರು ಎಂಬುದನ್ನು ಅರಿತುಕೊಂಡ ಅಂಗಡಿ ಮಾಲಕ ಒಂದು ವಿಭಿನ್ನ ಯೋಚನೆ ಮಾಡಿದ್ದಾನೆ. ಅಂಗಡಿ ಮುಂದೆ ಮಹಿಳೆಯರನ್ನು ಆಕರ್ಷಿಸುವಂತಹ ಬೋರ್ಡ್ ಅಳವಡಿಸಿದ್ದಾನೆ. ಅದರಲ್ಲಿ "ಗ್ರಾಹಕಿಯರೇ ರಾಣಿಯರು. ರಾಣಿಯರು ಎಂದಿಗೂ ಚೌಕಾಶಿ ಮಾಡುವುದಿಲ್ಲ" ಎಂದು ಬರೆದುಕೊಂಡಿದ್ದಾರೆ.

ವೈರಲ್‌ ಪೋಸ್ಟ್‌:



ಗ್ರಾಹಕಿಯರನ್ನು ರಾಣಿ ಎಂದು ಕರೆಯುವ ಮೂಲಕ ಚೌಕಾಸಿ ಮಾಡದಂತೆ ಪರೋಕ್ಷವಾಗಿ ವಿನಂತಿಸಿದ್ದಾನೆ. ರಾಣಿ ಎಂದು ಕರೆಯುವ ಮೂಲಕ ಅವರಿಗೆ ‌ಗೌರವ ನೀಡುವುದು ಮತ್ತು ಆ ಗೌರವದ ಹೆಸರಿನಲ್ಲೇ ಅವರು ಬೆಲೆ ಕಡಿಮೆ ಮಾಡಲು ಕೇಳದಂತೆ ನೋಡಿಕೊಳ್ಳುವುದು ವ್ಯಾಪಾರಿಯ ಮುಖ್ಯ ಉದ್ದೇಶ. ಇನ್‌ಸ್ಟಾಗ್ರಾಮ್‌ನಲ್ಲಿ ಸಂದೇಶವನ್ನು ಹಂಚಿಕೊಳ್ಳುತ್ತಿದ್ದಂತೆ, ಜನರು ಅಂಗಡಿಯವನ ಬುದ್ಧಿವಂತಿಕೆ ಮೆಚ್ಚಿಕೊಂಡಿದ್ದಾರೆ.

ದರೋಡೆಕೋರರಿಗೇ ಚಳ್ಳೆಹಣ್ಣು ತಿನ್ನಿಸಿದ ಚಿನ್ನದ ಮಳಿಗೆ ಮಾಲೀಕ... ಈತನ ಧೈರ್ಯಕ್ಕೊಂದು ಸಲಾಂ!

"ಭಾರತ ಹೊಸಬರಿಗಲ್ಲ" ಎಂಬ ಶೀರ್ಷಿಕೆಯಡಿ ವ್ಯಾಪಾರಿಯ ಬುದ್ಧಿವಂತಿಕೆಯನ್ನು ಹೆಚ್ಚಿನವರು ಶ್ಲಾಘಿಸುತ್ತಿದ್ದಾರೆ. ವ್ಯಾಪಾರಿಯು ಬಹಳ ನಯವಾಗಿಯೇ ಮಹಿಳೆಯರಿಗೆ "ಬೆಲೆ ಇಳಿಸಲು ತನ್ನ ಬಳಿ ಕೇಳಬೇಡಿ ಎಂಬ ಸಂದೇಶ ರವಾನಿಸಿದ್ದಾನೆ. ಈ ಬಗ್ಗೆ ನೆಟ್ಟಿಗರು ಕೂಡ ನಾನಾ ಬಗೆಯ ಪ್ರತಿಕ್ರಿಯೆ ನೀಡಿದ್ದಾರೆ. "ರಾಣಿಯರಿಗೆ ಪ್ರತಿಯೊಂದು ಸಣ್ಣ ವಿಷಯದ ನಿಜವಾದ ಮೌಲ್ಯ ತಿಳಿದಿದೆ” ಎಂದು ಒಬ್ಬರು ಬರೆದಿದ್ದಾರೆ. ಮತ್ತೊಬ್ಬರು ರಾಣಿ ಹಣವನ್ನು ಗೌರವಿಸುತ್ತಾಳೆ ಮತ್ತು ಅದನ್ನು ಎಲ್ಲಿ ಖರ್ಚು ಮಾಡಬೇಕೆಂದು ನಿಖರವಾಗಿ ತಿಳಿದಿರುತ್ತಾಳೆ ಎಂದು ತಿಳಿಸಿದ್ದಾತರೆ. ಮತ್ತೊಬ್ಬರು “ಚೌಕಾಶಿ ಮಾಡದವಳು ಎಂದಿಗೂ ರಾಣಿಯಾಗಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.