ಮುಂಬೈ ,ಜು.9: ಇಂದು ಮಾನವೀಯತೆಯನ್ನು ಜನ ಮರೆತಿದ್ದಾರೆ. ಅದರಲ್ಲೂ ಶಿಕ್ಷಣ ಗಿಟ್ಟಿಸಿಕೊಂಡ ಯುವಕ- ಯುವತಿಯರೇ ಕನಿಷ್ಠ ಸಹಾನುಭೂತಿ ಇಲ್ಲದಂತೆ ವರ್ತಿಸುವುದು ನಿಜಕ್ಕೂ ದುಃಖಕರ ಸಂಗತಿಯಾಗಿದೆ. ಇದಕ್ಕೆ ಪೂರಕವಾಗಿ ಲೋಕಲ್ ರೈಲಿನಲ್ಲಿ ಅಸ್ವಸ್ಥರಾಗಿದ್ದ ವೃದ್ಧರೊಬ್ಬರು ಯುವತಿಯ ಬಳಿ ಸೀಟು ಕೇಳಿದ್ದು ಆಕೆ ನಿರಾಕರಣೆ ಮಾಡಿದ್ದಾಳೆ. ಅಷ್ಟೇ ಅಲ್ಲದೆ ವಾಂತಿ ಮಾಡಿದ್ದಾರೆಂದು ಕಪಾಳಮೋಕ್ಷ ಮಾಡಿದ್ದಾಳೆ. ಈ ಪೋಸ್ಟ್ (Viral News) ನೋಡಿದ ಅನೇಕರು ಯುವತಿಯ ವರ್ತನೆ ಕುರಿತು ಕಿಡಿಕಾರಿದ್ದಾರೆ.
ಕನಿಷ್ಠವಾದ ನೈತಿಕ ಪಾಠ ಈ ಯುವತಿಗೆ ಇಲ್ಲ ಎಂದು ನೆಟ್ಟಿಗರು ಕಿಡಿಕಾರಿದ್ದು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ಕೇಳಿ ಬರುತ್ತಿದೆ. ಅನಾರೋಗ್ಯ ಪೀಡಿತ ವೃದ್ಧರೊಬ್ಬರು ತನಗೆ ಹುಷಾರಿಲ್ಲದ ಕಾರಣ ಕುಳಿತುಕೊಳ್ಳಲು ಬಿಡುವಂತೆ ಯುವತಿ ಯನ್ನು ವಿನಯದಿಂದ ಕೇಳಿ ಕೊಂಡರು,.ಆದರೆ ಆಕೆ ಇದನ್ನು ನಿರಾಕರಿಸಿದ್ದಾಳೆ. ಈ ಘಟನೆಯನ್ನು ಅಂಕಿತ್ ಪಾಂಡೆ ಎಂಬ ವ್ಯಕ್ತಿ ಪೋಸ್ಟ್ ಶೇರ್ ಮಾಡಿದ್ದು ಸ್ಥಳೀಯ ರೈಲಿನಲ್ಲಿ ನಡೆದ ಘಟನೆಯನ್ನು ವಿವರಿಸಿದ್ದಾರೆ.
"ನಾವು ಅಂದುಕೊಂಡಿದ್ದಕ್ಕಿಂತಲೂ ಮಾನವೀಯತೆ ವಿರಳವಾಗುತ್ತಿದೆ" ಎಂದು ಬರೆದು ಶೇರ್ ಮಾಡಿದ್ದಾರೆ. ಜನಸಾಗರದಲ್ಲಿ ಮುಳುಗಿಹೋಗಿದ್ದ ಲೋಕಲ್ ರೈಲಿನಲ್ಲಿ ಎಲ್ಲ ಸೀಟು ಖಾಲಿ ಯಾಗಿತ್ತು..ಕಾಮಾಲೆ ರೋಗದಿಂದ ಬಳಲುತ್ತಿದ್ದಂತೆ ಕಾಣುತ್ತಿದ್ದ, ವಯಸ್ಸಾದ ವ್ಯಕ್ತಿಯೊಬ್ಬರು ಅಲ್ಲೇ ಕುಳಿತಿದ್ದ ಯುವತಿಯ ಬಳಿ ಹೋಗಿ ಸೀಟು ಸ್ವಲ್ಪ ಬಿಟ್ಟು ಕೊಡಿ ಆರಾಮ ಇಲ್ಲ ಎಂದು ಕೇಳಿಕೊಂಡಿದ್ದಾರೆ.
Viral News: ಕರ್ನಾಟಕ ಮಾತ್ರವಲ್ಲ ಆಸ್ಟ್ರೇಲಿಯಾದಲ್ಲೂ ಇದೆ ಮಂಗಳೂರು; ಏನೀದರ ಇತಿಹಾಸ?
ಆದರೆ ಆಕೆ ಸೀಟು ಕೊಡದೆ ನಿರಾಕರಣೆ ಮಾಡಿದ್ದಾಳೆ., ಅಷ್ಟೊಂದು ಅಸ್ವಸ್ಥತೆಯ ನಡುವೆಯೂ ನಿಂತುಕೊಂಡೆ ಅವರು ಪ್ರಯಾಣ ಮಾಡಿದ್ದರೂ ಕೆಲವು ನಿಮಿಷಗಳ ನಂತರ ಅವರ ಆರೋಗ್ಯ ಇನ್ನಷ್ಟು ಕೆಟ್ಟಿದೆ. ಅವರು ಹೇಗೋ ಕಷ್ಟಪಟ್ಟು ಚಲಿಸುವ ರೈಲಿನ ಕಿಟಕಿಯ ಬಳಿ ಹೋಗಿ ಹೊರಗೆ ವಾಂತಿ ಮಾಡಿದರು. ಆದರೆ ಇದನ್ನು ನೋಡಿ ಆಕೆಯ ಹೃದಯ ಮರುಗುವ ಬದಲು ಆ ಯುವತಿ ತಕ್ಷಣ ಎದ್ದು ಬಂದು, ಎಲ್ಲರ ಮುನ್ನವೇ ಆ ಅಸ್ವಸ್ಥ ವ್ಯಕ್ತಿಗೆ ಎರಡು ಬಾರಿ ಕಪಾಳಮೋಕ್ಷ ಮಾಡಿ, ಕೆಟ್ಟದಾಗಿ ನಿಂದನೆ ಮಾಡಿದ್ದಾಳೆ.
ಆ ವ್ಯಕ್ತಿಯ ಕಣ್ಣಲ್ಲಿ ನೀರಿದ್ದು ಮೌನವಾಗಿ ಮತ್ತೊಂದು ಸ್ಥಳಕ್ಕೆ ನಡೆದಿದ್ದಾರೆ. ಸದ್ಯ ಈ ಘಟನೆಯ ಸತ್ಯಾಸತ್ಯತೆಯನ್ನು ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗದಿದ್ದರೂ, ಅನೇಕ ಜನರನ್ನು ಕೆರಳಿಸಿದೆ, ಅನೇಕರು ಈಕೆಯ ವಿರುದ್ಧ ಕ್ರಮ ಕೈಗೊಳ್ಳಲು ಖಂಡಿಸಿದ್ದಾರೆ. ಬಳಕೆದಾರರೊಬ್ಬರು ''ನಮ್ಮಲ್ಲಿ ಕೆಲವರು ತುಂಬಾ ಅಮಾನವೀಯರಾಗಿರುವುದು ದುಃಖಕರವಾಗಿದೆ" ಎಂದರು. ಮತ್ತೊಬ್ಬರು ಇತ್ತೀಚಿನ ದಿನಗಳಲ್ಲಿ ರೈಲು ಮತ್ತು ಬಸ್‌ಗಳಲ್ಲಿ ವಿಕಲಚೇತನರಿಗೆ ಮತ್ತು ವೃದ್ಧರಿಗೆ ಗೌರವವೇ ಇಲ್ಲದಂತೆ ಆಗಿದೆ ಎಂದು ಬರೆದಿದ್ದಾರೆ.