ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನಾಲ್ಕು ವರ್ಷಗಳ ಹಿಂದೆ ಭಾರತಕ್ಕೆ ಬಂದಿದ್ದ ಇಸ್ರೇಲ್ ಯುವತಿ ವಿಡಿಯೋಗೆ ಅಸಭ್ಯ ಕಾಮೆಂಟ್: ನಾಲ್ವರನ್ನು ಬಂಧಿಸಿದ ಪೊಲೀಸರು!

Viral Video: ಭಾರತಕ್ಕೆ ಪ್ರವಾಸ ಬಂದಿದ್ದ ವಿದೇಶಿ ಮಹಿಳೆ ಜೊತೆ ನಾಲ್ವರು ಯುವಕರು ಅಸಭ್ಯವಾಗಿ ಮಾತನಾಡಿದ್ದಾರೆ ಎನ್ನುವ ಕಾರಣಕ್ಕೆ ಪೊಲೀಸರು ಸೂಕ್ತ ಕ್ರಮ ಕೈಗೊಂಡಿದ್ದಾರೆ. ಇದಕ್ಕೆ ಸಂಬಂಧ ಪಟ್ಟಂತೆ ರಾಜಸ್ಥಾನ ಹಾಗೂ ಅಜ್ಮೇರ್ ಪೊಲೀಸರಿಗೆ ಇಸ್ರೇಲ್‌ನ ಪ್ರವಾಸಿ ಗೇಲಿಯಾ ಕೊವೊ ಅವರು ಧನ್ಯವಾದ ಆರ್ಪಿಸಿದ್ದಾರೆ.

ವಿದೇಶಿ ಮಹಿಳೆ ಜೊತೆ ಅಸಭ್ಯ ವರ್ತನೆ-ನಾಲ್ವರನ್ನು ಬಂಧಿಸಿದ ಪೊಲೀಸರು

ನವದೆಹಲಿ,ಸೆ.30: ಭಾರತಕ್ಕೆ ಪ್ರವಾಸ ಬಂದಿದ್ದ ವಿದೇಶಿ ಮಹಿಳೆ ಜೊತೆ ನಾಲ್ವರು ಯುವಕರು ಅಸಭ್ಯವಾಗಿ ಮಾತನಾಡಿದ್ದಾರೆ ಎನ್ನುವ ಕಾರಣಕ್ಕೆ ಪೊಲೀಸರು ಸೂಕ್ತ ಕ್ರಮ ಕೈಗೊಂಡಿದ್ದಾರೆ. ಇದಕ್ಕೆ ಸಂಬಂಧ ಪಟ್ಟಂತೆ ರಾಜಸ್ಥಾನ ಹಾಗೂ ಅಜ್ಮೇರ್ ಪೊಲೀಸರಿಗೆ ಇಸ್ರೇಲ್‌ನ ಪ್ರವಾಸಿ ಗೇಲಿಯಾ ಕೊವೊ ಅವರು ಧನ್ಯವಾದ ಅರ್ಪಿಸಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಗೇಲಿಯಾ ಅವರು ಭಾರತಕ್ಕೆ ಏಕಾಂಗಿ ಪ್ರವಾಸಿ ಕೈಗೊಂಡಿದ್ದರು. ಈ ವೇಳೆ ತೆಗೆದಿದ್ದ ತಮಾಷೆಯ ಪ್ರಯಾಣದ ನೆನಪಾಗಿ ವಿಡಿಯೊವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಆದರೆ, ವಿಡಿಯೋದಲ್ಲಿದ್ದ (Viral News) ವ್ಯಕ್ತಿಗಳು ತಮ್ಮ ಬಗ್ಗೆ ಅಸಭ್ಯವಾಗಿ ಮಾತನಾಡುತ್ತಿದ್ದಾರೆ ಎಂಬುದು ಅವರಿಗೆ ಅರಿವಾಗಿರಲಿಲ್ಲ.

ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ವೀಡಿಯೊ ಸುಮಾರು ನಾಲ್ಕು ವರ್ಷಗಳಷ್ಟು ಹಳೆಯದು ಎಂದು ಕೋವೊ ಸ್ಪಷ್ಟಪಡಿಸಿದ್ದಾರೆ. ಇದನ್ನು ತಾವು ಆರಂಭದಲ್ಲಿ ಒಂದು ತಮಾಷೆಯ ಪ್ರಯಾಣದ ನೆನಪಾಗಿ ಪೋಸ್ಟ್ ಮಾಡಿದ್ದರು. ಆದರೆ ವಿಡಿಯೊದಲ್ಲಿ ಅಸಭ್ಯವಾಗಿ ಮಾತನಾಡಲಾಗಿತ್ತು.

ವಿಡಿಯೋ ನೋಡಿ:



ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಮತ್ತೆ ವೈರಲ್ ಆದ ಬಳಿಕ ಅಜ್ಮೀರ್ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣವನ್ನು ಗಮನಕ್ಕೆ ತೆಗೆದುಕೊಂಡು ತನಿಖೆ ಆರಂಭಿಸಿದ್ದರು. ಅಜ್ಮೇರ್ ಪೊಲೀಸ್ ವರಿಷ್ಠಾಧಿಕಾರಿ ಹರ್ಷವರ್ಧನ್ ಅಗರ್ವಾಲ್ ಮತ್ತು ಗಾಂಧಿ ನಗರ ಪೊಲೀಸ್ ತಂಡವು  ಗುಪ್ತಚರ ಮಾಹಿತಿ ಬಳಸಿ ನಾಲ್ವರನ್ನು ಗುರುತಿಸಿ ಬಂಧಿಸಿದೆ.

Viral Video: ಮರೆಯಾದ ಮಾನವೀಯತೆ; ನೇಪಾಳ ಪ್ರವಾಹದಲ್ಲಿ ಮೃತಪಟ್ಟ ಮಹಿಳೆಯ ಚಿನ್ನದ ಓಲೆ ಕದ್ದ ಕಿಡೀಗೆಡಿಗಳು!

ಭಾರತದಲ್ಲಿ ಆರು ತಿಂಗಳುಗಳ ಕಾಲ ಏಕಾಂಗಿಯಾಗಿ ಪ್ರಯಾಣ ಬೆಳೆಸಿದ್ದ ಗೇಲಿಯಾ,ಈ ವಿಚಾರ ತಿಳಿದರೂ ಭಾರತದ ಮೇಲಿನ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಭಾರತದ ಬಗ್ಗೆ ತಮಗೆ ಈಗಲೂ ಬಹಳಷ್ಟು ಪ್ರೀತಿಯಿದೆ. ವೀಡಿಯೊದಲ್ಲಿ ಕಾಣಿಸಿ ಕೊಂಡಿರುವ ನಾಲ್ವರು ವ್ಯಕ್ತಿಗಳ ನಡವಳಿಕೆ ಭಾರತೀಯ ಸಮಾಜವನ್ನು ಪ್ರತಿನಿಧಿಸುವುದಿಲ್ಲ ಎಂದು ಭಾರತದ ಬಗ್ಗೆ ಹೆಮ್ಮೆಯ ಮಾತುಗಳನ್ನು ಆಡಿದ್ದಾರೆ‌.

ಜನರ ಬೆಂಬಲಕ್ಕಾಗಿ ಕೋವೊ ಭಾರತೀಯರಿಗೆ ಧನ್ಯವಾದ ಅರ್ಪಿಸಿದರು. ಭಾರತದ ಜನರ ಬಗ್ಗೆ ತಮಗೆ ಕೃತಜ್ಞತೆಯ ಭಾವನೆಯಿದೆ. ಮತ್ತೆ ಈ ದೇಶಕ್ಕೆ ಬಂದು ಪ್ರಯಾಣಿಸುವ ಆಶಯವನ್ನು ವ್ಯಕ್ತಪಡಿಸಿದರು. ಸದ್ಯ ಬಂಧಿತರ ವಿರುದ್ಧ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಸೆಕ್ಷನ್ 170 ರ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದ್ದು ವಿದೇಶಿ ಪ್ರವಾಸಿಗರು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ಅಥವಾ ಅಸಭ್ಯ ವರ್ತನೆಯನ್ನು ಸಹಿಸುವುದಿಲ್ಲ ಎಂದು ರಾಜಸ್ಥಾನ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.