ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬಡತನವಿದ್ದರೂ ನಗು ಮಾಸಿಲ್ಲ! ಬೆಳಿಗ್ಗೆ ರ‍್ಯಾಪಿಡೋ ರೈಡರ್‌, ಬಳಿಕ ಆಫೀಸ್‌, ಈ ವ್ಯಕ್ತಿಯ ಕಥೆ ಕೇಳಿದ್ರೆ ಮನಸ್ಸು ಮರುಗುವುದು ಗ್ಯಾರಂಟಿ

Viral News: ಕೆಲವೊಬ್ಬರು ಸಣ್ಣ ಪುಟ್ಟ ವಿಚಾರಗಳಿಗೂ ಬೇಸರ ಮಾಡಿಕೊಳ್ಳುತ್ತಾರೆ.ಇದೆಲ್ಲದರ ನಡುವೆ ಜೀವನದಲ್ಲಿ ಬಹಳಷ್ಟು ನೊಂದಿದ್ದರೂ ನಗುತ್ತಾ ಬದುಕು ಸಾಗಿಸುವ ಅನೇಕ ಜನರನ್ನು ನಾವು ನೋಡಿ ರುತ್ತೇವೆ.ಇದಕ್ಕೆ ಸಾಕ್ಷಿ ಎಂಬಂತೆ ದೆಹಲಿಯಲ್ಲಿ ನಡೆದ ಈ ಘಟನೆಯೂ ಎಲ್ಲರ ಕಣ್ಣಲ್ಲಿ ನೀರು ತರಿಸು ವಂತೆ ಮಾಡಿದೆ. ಇಲ್ಲೊಬ್ಬರು ದಿನದ ಜೀವನ ಸಾಗಿಸಲು ರ‍್ಯಾಪಿಡೋ ಓಡಿಸಿ, ಮತ್ತೆ ಆಫೀಸ್ ಕೆಲಸಕ್ಕೆ ತೆರಳುವ ವ್ಯಕ್ತಿಯ ಜೀವನಗಾಥೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

ಜೀವನ ನಿಭಾಯಿಸಲು ರ‍್ಯಾಪಿಡೋ ಜೊತೆಗೆ ಆಫೀಸ್‌ ಕೆಲಸ

ನವದೆಹಲಿ,ಜು.3: ಜೀವನದಲ್ಲಿ ಸುಖ- ದುಃಖ, ನೋವು ಸಾಮಾನ್ಯವಾಗಿದೆ. ಕೆಲವೊಬ್ಬರು ಸಣ್ಣ ಪುಟ್ಟ ವಿಚಾರಗಳಿಗೂ ಬೇಸರ ಮಾಡಿಕೊಳ್ಳುತ್ತಾರೆ.ಇದೆಲ್ಲದರ ನಡುವೆ ಜೀವನದಲ್ಲಿ ಬಹಳಷ್ಟು ನೊಂದಿದ್ದರೂ ನಗುತ್ತಾ ಬದುಕು ಸಾಗಿಸುವ ಅನೇಕ ಜನರನ್ನು ನಾವು ನೋಡಿರುತ್ತೇವೆ.ಇದಕ್ಕೆ ಸಾಕ್ಷಿ ಎಂಬಂತೆ ದೆಹಲಿಯಲ್ಲಿ ನಡೆದ ಈ ಘಟನೆಯೂ ಎಲ್ಲರ ಕಣ್ಣಲ್ಲಿ ನೀರು ತರಿಸುವಂತೆ ಮಾಡಿದೆ. ಇಲ್ಲೊಬ್ಬರು ದಿನದ ಜೀವನ ಸಾಗಿಸಲು ರ‍್ಯಾಪಿಡೋ ಓಡಿಸಿ, ಮತ್ತೆ ಆಫೀಸ್ ಕೆಲಸಕ್ಕೆ ತೆರಳುವ ವ್ಯಕ್ತಿಯ ಜೀವನಗಾಥೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral News) ಆಗುತ್ತಿದೆ.

​ದೆಹಲಿಯಲ್ಲಿ ಶಿಖರ್ ಎಂಬ ವ್ಯಕ್ತಿ ಪೋಸ್ಟ್ ವೊಂದನ್ನು ಶೇರ್ ಮಾಡಿದ್ದಾರೆ. ಶಿಖರ್ ಪ್ರತಿದಿನ ಆಫೀಸ್ ಗೆ ಮೆಟ್ರೋದಲ್ಲಿ ತೆರಳುತ್ತಿದ್ದರು‌.ಆದರೆ ಅಂದು ಕೆಲಸಕ್ಕೆ ಹೊರಡುವಾಗ ಬಹಳಷ್ಟು ತಡವಾಗಿತ್ತು ಎಂದು ರ‍್ಯಾಪಿಡೋ ಬುಕ್ ಮಾಡಿದ್ದರು. ರೈಡರ್ ಕೇವಲ 2 ನಿಮಿಷದಲ್ಲಿ ಆಗಮಿಸಿದ್ದು ಶಿಖರ್ ಕೆಳಗೆ ಬರುವುದು ಕೇವಲ 5 ನಿಮಿಷ ತಡವಾಗಿದ್ದಕ್ಕೆ 3 ಬಾರಿ ಫೋನ್ ಮಾಡಿ ಬೇಗ ಬನ್ನಿ ಕಾಯುತ್ತಿದ್ದೇನೆ ಎಂದು ಪದೇ ಪದೇ ಕಾಲ್ ಮಾಡಿ ಹೇಳಿದ್ದಾರೆ.



ಬೈಕ್ ಹತ್ತಿದಾಗ, ಕುತೂಹಲದಿಂದ ಶಿಖರ್ ರೈಡರ್ ಗೆ ಏಕೆ ಇಷ್ಟು ಆತುರದಲ್ಲಿದ್ದೀರಿ ಎಂದು ಕೇಳಿದ್ದಾನೆ. ರಾಪಿಡೋ ಸವಾರ ಅವನನ್ನು ನೋಡಿ ಮುಗುಳ್ನಗುತ್ತಾ, ನಾನು ಕಚೇರಿಗೆ ಹೋಗಲು ತಡವಾಗುತ್ತಿದೆ ಎಂದು ಉತ್ತರಿಸಿದ. ಆಶ್ಚರ್ಯಚಕಿತನಾದ ಶಿಖರ್,ಈಗಾಗಲೇ ಪೂರ್ಣ ಸಮಯದ ಕೆಲಸವಿದ್ದರೆ, ಅವನು ರಾಪಿಡೋ ಯಾಕೆ ಎಂದು ಕೇಳಿದ. ಆಗ ಅವನು ತನ್ನ ಕಷ್ಟಗಳನ್ನು ಬಹಿರಂಗಪಡಿಸಿದ್ದಾನೆ.

ತನ್ನ ಕೆಲಸದಿಂದ ತಿಂಗಳಿಗೆ 20 ಸಾವಿರ ಸಂಪಾದಿಸುತ್ತೇನೆ, ಅವನಿಗೆ ಹೆಂಡತಿ, ಮೂವರು ಮಕ್ಕಳಿದ್ದಾರೆ ಮತ್ತು ಅವರಲ್ಲಿ ಒಬ್ಬರಿಗೆ ಹುಟ್ಟಿನಿಂದಲೇ ಅಂಗವೈಕಲ್ಯವಿದೆ ಎಂದು ಹೇಳಲು ಪ್ರಾರಂಭಿಸಿದ. ಮಗುವಿನ ಔಷಧಿಗಳು ಮತ್ತು ಚಿಕಿತ್ಸೆಗೆ ಪ್ರತಿ ತಿಂಗಳು ಸುಮಾರು 10 ಸಾವಿರ ಖರ್ಚಾಗುತ್ತದೆ. ಆತ ಹೇಗೆ ನಿರ್ವಹಿಸುತ್ತಾನೆ ಎಂದು ನಾನು ಅವನನ್ನು ಕೇಳಿದೆ, ಅವನು ಬೆಳಿಗ್ಗೆ ಸುಮಾರು 6 ರಿಂದ 9 ರವರೆಗೆ ರಾಪಿಡೋ ಓಡಿಸುತ್ತಾನೆ, 10 ರಿಂದ 6:30 ರವರೆಗೆ ತನ್ನ ಕಚೇರಿ ಕೆಲಸವನ್ನು ಮಾಡುತ್ತಾನೆ, ನಂತರ ಮತ್ತೆ ಬೈಕ್ ಹತ್ತಿ ರಾತ್ರಿ 10 ಅಥವಾ 11 ರವರೆಗೆ ಮತ್ತೆ ರಾಪಿಡೋ ಎಂದು ಹೇಳಿದನು.

Viral Video: ಭಕ್ತರಿಗೆ 'ತಿಲಕ' ಇಟ್ಟು 3 ಗಂಟೆಗಳಲ್ಲಿ 2,350 ರುಪಾಯಿ ಗಳಿಸಿದ ಯುವಕ

ಐದು ಜನರ ಜೀವನ ನಡೆಸುವುದು ಕಷ್ಟ. ಅದಕ್ಕಾಗಿಯೇ ಈ ಕೆಲಸ ಅಂದಿದ್ದಾನೆ. ಎಲ್ಲ ದೇವರ ಇಚ್ಚೆ ಎಂದು ಹೇಳಿ ಆ ರೈಡರ್ ಮುಖದಲ್ಲಿ ಸಣ್ಣದೊಂದು ನಗು ಬೀರಿದ್ದಾನೆ. ಈ ಬಗ್ಗೆ ಪೋಸ್ಟ್ ಶೇರ್ ಮಾಡಿದ ಶಿಖರ್ ತಾವು ಕೇವಲ ಆಫೀಸ್, ಟ್ರಾಫಿಕ್ ಎಂದು ಸಣ್ಣ ವಿಚಾರಕ್ಕೆ ಕಷ್ಟ ಅನ್ನುತೇವೆ‌. ಆದರೆ ಜೀವನದಲ್ಲಿನ ಎಲ್ಲಾ ತೊಂದರೆಗಳಲ್ಲಿ ಇವರು ನಗುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಮಾಡಿದ್ದಾರೆ. ಬಳಕೆದಾರರೊಬ್ಬರು ನಿಜಕ್ಕೂ ಇವರು ಪ್ರತಿಯೊಬ್ಬರಿಗೂ ಸ್ಪೂರ್ತಿ ಎಂದು ಬರೆದಿದ್ದಾರೆ. ಮತ್ತೊಬ್ಬರು ಜೀವನದಲ್ಲಿ ಕಷ್ಟ ಅನುಭವಿಸುವ ವ್ಯಕ್ತಿಗಳು ಹೀಗೆ ನಗುತ್ತಾ ಜೀವನದ ಬಂಡಿ ಸಾಗಿಸುತ್ತಾರೆ ಎಂದರು.