ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ದೇಗುಲದ ಒಳಗೆ ವೃದ್ಧಅಸ್ವಸ್ಥ; ಸಾವಿನ ಕೊನೆಯ ಕ್ಷಣದ ವಿಡಿಯೊ ವೈರಲ್!

ದೇವಸ್ಥಾನ ಒಂದರಲ್ಲಿ ಪೂಜೆಗೆಂದು ಬಂದ ವೃದ್ಧರೊಬ್ಬರು ಕುಸಿದು ಬಿದ್ದು ಅಸ್ವಸ್ಥರಾದ ಘಟನೆಯ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವೃದ್ಧರೊಬ್ಬರು ಹಲವಾರು ನಿಮಿಷಗಳ ಕಾಲ ಸ್ತಬ್ಧವಾಗಿ ನಿಂತು, ಬಳಿಕ ಗರ್ಭಗುಡಿಯ ಒಂದು ಬದಿಯಲ್ಲಿ ಕುಳಿತು ಕೊಂಡಿದ್ದಾರೆ. ಇದೇ ವೇಳೆ ಅವರು ಉಸಿರಾಟದ ಸಮಸ್ಯೆಗೆ ಒಳಗಾಗಿದ್ದು, ಸದ್ಯ ಈ ಘಟನೆಯ ವಿಡಿಯೋ ಆನ್‌ಲೈನ್‌ನಲ್ಲಿ ನೆಟ್ಟಿಗರಿಗೆ ಆಶ್ಚರ್ಯ ಮೂಡುವಂತೆ ಮಾಡಿದೆ.

ದೇಗುಲದ ಒಳಗೆ ವೃದ್ಧ ಅಸ್ವಸ್ಥ

ಲಖನೌ: ದಿನ ನಿತ್ಯ ನಡೆಯುವ ಅನೇಕ ಘಟನೆಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ ವೈರಲ್ ಆಗುತ್ತಲೇ ಇರುತ್ತದೆ‌‌‌. ದೇವರಿಗೆ ವಿಭಿನ್ನವಾಗಿ ಪೂಜೆ ಮಾಡುವುದು, ದೇವರ ಮಂತ್ರ ಪಠಣ ವನ್ನು ಸಿನಿಮಾ ಶೈಲಿಯ ಹಾಡಿನಂತೆ ಹಾಡುವುದು, ದೇವಸ್ಥಾನದಲ್ಲಿ ಪವಾಡ ಹೀಗೆ ಹಲವು ವಿಡಿಯೋ ವೈರಲ್ ಆಗುತ್ತವೆ. ಅಂತೆಯೇ ದೇವಸ್ಥಾನ ಒಂದರಲ್ಲಿ ಪೂಜೆಗೆಂದು ಬಂದ ವೃದ್ಧ ರೊಬ್ಬರು (Elder man) ಕುಸಿದು ಬಿದ್ದು ಅಸ್ವಸ್ಥರಾದ ಘಟನೆಯ ವಿಡಿಯೋ ಒಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ (Viral Video) ಆಗುತ್ತಿದೆ. ವೃದ್ಧರೊಬ್ಬರು ಹಲವಾರು ನಿಮಿಷಗಳ ಕಾಲ ಸ್ತಬ್ಧವಾಗಿ ನಿಂತು, ಬಳಿಕ ಗರ್ಭಗುಡಿಯ ಒಂದು ಬದಿಯಲ್ಲಿ ಕುಳಿತುಕೊಂಡಿದ್ದಾರೆ. ಇದೇ ವೇಳೆ ಅವರು ಉಸಿರಾಟದ ಸಮಸ್ಯೆಗೆ ಒಳಗಾಗಿದ್ದು ಸದ್ಯ ಈ ಘಟನೆಯ ವಿಡಿಯೋ ಆನ್‌ಲೈನ್‌ನಲ್ಲಿ ನೆಟ್ಟಿಗರಿಗೆ ಆಶ್ಚರ್ಯ ಮೂಡುವಂತೆ ಮಾಡಿದೆ.

ನವೆಂಬರ್ 7ರಂದು ಬೆಳಗ್ಗೆ 10ಗಂಟೆ ಸುಮಾರಿಗೆ ವೃದ್ಧರೊಬ್ಬರು ದೇವರ ಸನ್ನಿಧಿಗೆ ಆಗಮಿಸಿದ್ದಾರೆ. ಬೇರೆ ಭಕ್ತರು ತಮ್ಮ ಪೂಜೆ, ಪ್ರಾರ್ಥನೆ ಸಲ್ಲಿಸುತ್ತಿದ್ದರೆ ಇವರು ಮಾತ್ರ ದೇವಸ್ಥಾನದ ಒಳಗೆ ಮೌನ ವಾಗಿ ನಿಂತಿದ್ದಾರೆ. ಬಳಿಕ ಒಂದು ಮೂಲೆಯಲ್ಲಿ ಗೊಡೆಗೆ ಒರಗಿ ಅವರು ಕುಳಿತಿದ್ದ ದೃಶ್ಯವನ್ನು ವೈರಲ್ ವಿಡಿಯೋ ಕಾಣಬಹುದು. ಬಳಿಕ ಇನ್ನೊಬ್ಬ ಅಪರಿಚಿತರು ಬಂದು ಆ ವೃದ್ಧರಿಗೆ ಏನಾಯಿತು ಎಂದು ಪರಿಶೀಲಿಸಲು ಮುಂದಾಗುವ ದೃಶ್ಯಗಳು ಕೂಡ ವಿಡಿಯೋದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ:Viral Video: ಅರೇ... ಇದೆಂಥಾ ವೆಡ್ಡಿಂಗ್‌ ಫೋಟೋಶೂಟ್‌! ನೋಡಿದ್ರೆ ನೀವೂ ಅಚ್ಚರಿ ಪಡ್ತೀರಾ

ದೇವಸ್ಥಾನದ ಒಳಗೆ ವೃದ್ಧ ಅಸ್ವಸ್ಥ; ವಿಡಿಯೊ ವೈರಲ್



ದೇವಾಲಯದ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾದ ವಿಡಿಯೊವನ್ನು ನೆಟ್ಟಿಗರೊಬ್ಬರು ಇನ್ ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಆದರೆ ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿ ರಬೇಕು ಎಂದು ವರದಿಯೊಂದರಲ್ಲಿ ತಿಳಿಸಲಾಗಿದೆ. ಈ ಕ್ಲಿಪ್ ಗೆ ನೆಟ್ಟಿಗರು ನಾನಾ ಬಗೆಯ ಪ್ರತಿ ಕ್ರಿಯೆ ನೀಡಿದ್ದಾರೆ. ಇದು ಅವರ ಕೊನೆಯ ಕ್ಷಣಗಳಾಗಿರಬಹುದು.

ದೇವಸ್ಥಾನದಲ್ಲಿ ಈ ರೀತಿಯಾಗುವುದು ಪುಣ್ಯವಂತರಿಗೆ ಸಿಗುವ ಒಂದು ಭಾಗ್ಯವಾಗಿದೆ ಎಂದು ವಿಡಿಯೋ ಕಂಡು ನೆಟ್ಟಿಗರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ಆ ವ್ಯಕ್ತಿಗೆ ಈ ಕ್ಷಣ ಬರುತ್ತದೆ ಎಂದು ಮೊದಲೇ ತಿಳಿದಂತಿದೆ. ಈ ಘಟನೆ ದೇವಸ್ಥಾನದಲ್ಲಿ ದೇವರ ಮುಂದೆಯೇ ನಡೆದಿದ್ದು, ಅವರ ಆತ್ಮ ಪರಮಾತ್ಮನಲ್ಲಿ ಐಕ್ಯವಾದಂತಿದೆ ಅವರು ಧನ್ಯರು. ಓಂ ಶಾಂತಿ ಎಂದು ಬಳಕೆದಾರರೊಬ್ಬರು ಕಾಮೆಂಟ್ ಹಾಕಿದ್ದಾರೆ.