ಜೆರುಸಲೇಂ, ಡಿ.27: ನಮಾಜ್ ಮಾಡುತ್ತಿದ್ದ ಪ್ಯಾಲೆಸ್ಟೀನಿಯನ್ ವ್ಯಕ್ತಿಯೊಬ್ಬರ ಮೇಲೆ ರೈಫಲ್ ಹಿಡಿದುಕೊಂಡು ಇಸ್ರೇಲಿ ಮೀಸಲು ಪಡೆಯ ಸೈನಿಕನೊಬ್ಬ(Israeli Soldier) ತನ್ನ ವಾಹನವನ್ನು ಡಿಕ್ಕಿ ಹೊಡೆಯುತ್ತಿರುವ ಆಘಾತಕಾರಿ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್(viral video) ಆಗಿದೆ.
ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಹರಿದಾಡುತ್ತಿದ್ದು, ಇದರಲ್ಲಿ ಸೈನಿಕ ವಾಹನವು ಉದ್ದೇಶಪೂರ್ವಕವಾಗಿಯೇ ವ್ಯಕ್ತಿಗೆ ಡಿಕ್ಕಿ ಹೊಡೆದಂತೆ ಕಂಡುಬರುತ್ತಿದೆ ಎಂದು ಮಾನವ ಹಕ್ಕುಗಳ ಕಾರ್ಯಕರ್ತರು ಆರೋಪಿಸಿದ್ದಾರೆ.
ಈ ವೀಡಿಯೊದಲ್ಲಿ, ನಾಗರಿಕ ಉಡುಪಿನಲ್ಲಿ ಭುಜದ ಮೇಲೆ ಬಂದೂಕನ್ನು ಇಟ್ಟುಕೊಂಡು ವ್ಯಕ್ತಿಯೊಬ್ಬರು ರಸ್ತೆಯ ಬದಿಯಲ್ಲಿ ಪ್ರಾರ್ಥಿಸುತ್ತಿದ್ದ ವ್ಯಕ್ತಿಯ ಮೇಲೆ ಆಫ್-ರೋಡ್ ವಾಹನವನ್ನು ಓಡಿಸುತ್ತಿರುವುದನ್ನು ತೋರಿಸುತ್ತದೆ. ನಂತರ ಸೈನಿಕನು ಕೂಗುತ್ತಾ ಆ ಪ್ರದೇಶವನ್ನು ಬಿಟ್ಟು ಹೋಗುವಂತೆ ಸನ್ನೆ ಮಾಡುತ್ತಿರುವುದನ್ನು ಕಾಣಬಹುದು.
ಮೀಸಲು ಪಡೆಯ ಅಧಿಕಾರಿ "ತನ್ನ ಅಧಿಕಾರದ ತೀವ್ರ ಉಲ್ಲಂಘನೆ" ಮಾಡಿದ್ದಾರೆ ಮತ್ತು ಅವರ ಆಯುಧವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಸೇನೆ ತಿಳಿಸಿದೆ. ಸ್ಥಳೀಯ ಮಾಧ್ಯಮಗಳ ಪ್ರಕಾರ, ಆರೋಪಿಯನ್ನು ಗೃಹಬಂಧನದಲ್ಲಿ ಇರಿಸಲಾಗಿದೆ.
ಜೂನ್‌ನಲ್ಲಿ ಇಸ್ರೇಲ್ ಮತ್ತು ಇರಾನ್ ನಡುವೆ ಯುದ್ಧ ನಡೆಯಿತು. ಇದೀಗ ಇಸ್ರೇಲ್ ಸೇನೆಯು ಇರಾನ್ ಬೆಂಬಲಿತ ಲೆಬನಾನ್‌ನ ಮೇಲೆ ಪ್ರತಿದಿನ ದಾಳಿ ನಡೆಸುತ್ತಿದೆ. ಲೆಬನಾನ್‌ನಲ್ಲಿರು ಉಗ್ರಗಾಮಿ ಗುಂಪು ಹೆಜ್ಬೊಲ್ಲಾದ ಪುನರ್‌ನಿರ್ಮಾಣವನ್ನು ತಡೆಯುವ ಪ್ರಯತ್ನ ಇದು ಎಂದು ಇಸ್ರೇಲ್ ಹೇಳಿದೆ. ಅಮೆರಿಕದ ಮಧ್ಯಸ್ಥಿಕೆಯಲ್ಲಿ 2024ರ ನವೆಂಬರ್‌ನಲ್ಲಿ ಇಸ್ರೇಲ್ ಮತ್ತು ಲೆಬ್‌ನಾನ್‌ನ ಹೆಜ್ಬೊಲ್ಲಾ ಗುಂಪಿನ ನಡುವಿನ ಒಂದು ವರ್ಷಕ್ಕೂ ಹೆಚ್ಚು ಕಾಲ ನಡೆದ ಸಂಘರ್ಷಕ್ಕೆ ತೆರೆ ಬಿದ್ದಿತ್ತು. ಜತೆಗೆ ಎರಡೂ ಕಡೆ ನಿಶ್ಯಸ್ತ್ರ ಒಪ್ಪಂದ ಪಾಲಿಸಬೇಕೆಂದು ಸಹಿ ಹಾಕಲಾಗಿತ್ತು.
ಕದನ ವಿರಾಮಕ್ಕೆ ಇಸ್ರೇಲ್-ಸಿರಿಯಾ ಒಪ್ಪಿಗೆ
ಜುಲೈಯಲ್ಲಿ ಇಸ್ರೇಲ್ ಮತ್ತು ಸಿರಿಯಾದ ನಾಯಕರು ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿದ್ದರು. ಇಸ್ರೇಲ್‌ನ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಮತ್ತು ಸಿರಿಯಾದ ನೂತನ ನಾಯಕ ಅಹ್ಮದ್ ಅಲ್-ಶರಾ ಈ ಒಪ್ಪಂದಕ್ಕೆ ಸಹಿ ಹಾಕಿದ್ದರು.