ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಕಳ್ಳರು ಹೇಗೆ ನುಗ್ಗುತ್ತಾರೆ...ಭುಟ್ಟೋ ಹೇಳಿಕೆಯನ್ನು ಹಾಸ್ಯಾಸ್ಪದವಾಗಿ ನಕಲು ಮಾಡಿದ ಈ ನಟ ; ವಿಡಿಯೋ ನೋಡಿ

ಸಾರಾಭಾಯ್ ವರ್ಸಸ್ ಸಾರಾಭಾಯ್ ಸಿಟ್‌ಕಾಮ್‌ನಲ್ಲಿ ನಟಿಸಿ ಪ್ರಸಿದ್ಧಿ ಪಡೆದ ರಾಜೇಶ್ ಕುಮಾರ್ ರೋಸೆಶ್ ಪಾಕಿಸ್ತಾನದ ಮಾಜಿ (Viral Video) ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಅವರಂತೆಯೇ ನಟಿಸಿ ಟೀಕಿಸಿದ್ದಾರೆ. ಭುಟ್ಟೋ (Bilawal Bhutto) ಹೇಳಿದ್ದ ವಿಡಿಯೋ ವೈರಲ್‌ ಆದ ಬೆನ್ನಲ್ಲೇ ರಾಜೇಶ್ ಕುಮಾರ್ ರೋಸೆಶ್ ಈ ವಿಡಿಯೋವನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಮುಂಬೈ: ಸಾರಾಭಾಯ್ ವರ್ಸಸ್ ಸಾರಾಭಾಯ್ ಸಿಟ್‌ಕಾಮ್‌ನಲ್ಲಿ ನಟಿಸಿ ಪ್ರಸಿದ್ಧಿ ಪಡೆದ ರಾಜೇಶ್ ಕುಮಾರ್ ರೋಸೆಶ್ ಪಾಕಿಸ್ತಾನದ ಮಾಜಿ (Viral Video) ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಅವರಂತೆಯೇ ನಟಿಸಿ ಟೀಕಿಸಿದ್ದಾರೆ. ಭುಟ್ಟೋ (Bilawal Bhutto) ಹೇಳಿದ್ದ ವಿಡಿಯೋ ವೈರಲ್‌ ಆದ ಬೆನ್ನಲ್ಲೇ ರಾಜೇಶ್ ಕುಮಾರ್ ರೋಸೆಶ್ ಈ ವಿಡಿಯೋವನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಭಾರತ ಆಪರೇಷನ್‌ ಸಿಂದೂರ್‌ ಕಾರ್ಯಚರಣೆ ಮಾಡಿ ಪಾಕಿಸ್ತಾನ ಹಾಗೂ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಇರುವ ಉಗ್ರರ ತಾಣಗಳನ್ನು ನಾಶ ಪಡಿಸಿತ್ತು.

ಭಾರತದ ದಾಳಿಯನ್ನು ಖಂಡಿಸಿದ್ದ ಭುಟ್ಟೋ ಪಾಕಿಸ್ತಾನದ ಸಂಸತ್ತಿನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಯಾರು ರಾತ್ರಿಯಲ್ಲಿ ದಾಳಿ ಮಾಡುತ್ತಾರೆ. ಕಳ್ಳರು ರಾತ್ರಿಯಲ್ಲಿ ಕದ್ದು ಬರುತ್ತಾರೆ ಎಂದು ಭಾರತದ ಕುರಿತು ವ್ಯಂಗ್ಯವಾಡಿದ್ದರು. ಇದೀಗ ರಾಜೇಶ್ ಕುಮಾರ್ ರೋಸೆಶ್ ಅವರು ಅವರನ್ನು ಅಣುಕಿಸಿದ್ದಾರೆ. ಅವರದೇ ರೀತಿಯಲ್ಲಿ ಅದೇ ಧ್ವನಿಯಲ್ಲಿ ಮಾತನಾಡಿದ್ದಾರೆ. ಸದ್ಯ ನೆಟ್ಟಿಗರು ರೋಸೆಶ್ ಅವರ ಆಕ್ಟಿಂಗ್‌ಗೆ ಫಿದಾ ಆಗಿದ್ದಾರೆ. ಕಮೆಂಟ್‌ ಮಾಡಿ ನಕ್ಕು ನಕ್ಕು ಸುಸ್ತಾಯಿತು ಎಂದು ಹೇಳಿದ್ದಾರೆ.

ಬಳಕೆದಾರರು, "ವಾವ್. ಇದು ಇದುವರೆಗಿನ ಅತ್ಯುತ್ತಮ ರೀಲ್ ಆಗಲಿದೆ" ಎಂದು ಬರೆದಿದ್ದಾರೆ. ಒಬ್ಬರು ಹೇಳಿದರು, "ಭಾರತ್ ಮಾಮ್ಮಾ ಕೀ ಜೈ. ಇದು ತಮಾಷೆಯಾಗಿದೆ," ಒಬ್ಬರು ಹೇಳಿದರು. ಒಬ್ಬರು ಕಾಮೆಂಟ್ ಮಾಡಿದ್ದಾರೆ: "ಓ ದೇವರೇ. ನಮಗೆ ಇದು ಬೇಕಿತ್ತು." ಒಬ್ಬರು ಅದು ಸಂಪೂರ್ಣವಾಗಿ ಪರಿಪೂರ್ಣ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Viral Video: ಪಾಕಿಸ್ತಾನಕ್ಕೆ ಬೆಂಬಲ ಸೂಚಿಸಿದ ಇಬ್ಬರಿಗೆ ಪೊಲೀಸರು ವಿಧಿಸಿದ ಶಿಕ್ಷೆ ಹೇಗಿತ್ತು ಗೊತ್ತೇ

ಏ. 22 ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿ ನಡೆದಿತ್ತು. ಅದಕ್ಕೆ ಪ್ರತೀಕಾರಕ್ಕಾಗಿ ಭಾರತ ಆಪರೇಷನ್‌ ಸಿಂದೂರ್‌ ಮೂಲಕ ತಕ್ಕ ಪ್ರತ್ಯುತ್ತರ ನೀಡಿದೆ. ಪಾಕಿಸ್ತಾನ ಹಾಗೂ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿರುವ ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ನಡೆಸಿ 100 ಕ್ಕೂ ಅಧಿಕ ಉಗ್ರರನ್ನು ಹತ್ಯೆ ಮಾಡಲಾಗಿತ್ತು. ಆಪರೇಷನ್‌ ಸಿಂದೂರ್‌ ಬಳಿಕ ಪಾಕಿಸ್ತಾನ ಕದನ ವಿರಾಮಕ್ಕಾಗಿ ಅಂಗಲಾಚಿಕೊಂಡಿತ್ತು. ಇದೀಗ ಉಭಯ ದೇಶಗಳ ನಡುವೆ ಕದನ ವಿರಾಮ ಏರ್ಪಟ್ಟಿದೆ. ಭಾರತ ಮುಜಫರಾಬಾದ್, ಕೋಟ್ಲಿ, ಬಹವಾಲ್ಪುರ್, ರಾವಲಕೋಟ್, ಚಕ್ಸ್ವರಿ, ಭಿಂಬರ್, ನೀಲಂ ಕಣಿವೆ, ಝೇಲಂ ಮತ್ತು ಚಕ್ವಾಲ್‌ನಲ್ಲಿರುವ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿತ್ತು.