ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ವಿದೇಶಕ್ಕೆ ತೆರಳುವ ಮುನ್ನ ಸ್ಕಾರ್ಪಿಯೋ ಗೆ ಹೈ ಸೆಕ್ಯುರಿಟಿ: ಟೆರೇಸ್ ಮೇಲೆಯೇ ಕಾರ್ ಪಾರ್ಕ್ ಮಾಡಿದ ಮಾಲೀಕ!

Viral Video: ಇಲ್ಲೊಬ್ಬ ವ್ಯಕ್ತಿ ವಿದೇಶಕ್ಕೆ ತೆರಳುವ ಮುನ್ನ ತನ್ನ ಎಸ್ ಯುವಿ ಕಾರನ್ನು ಕಳ್ಳರಿಂದ ರಕ್ಷಣೆ ಮಾಡಲು ಹರಸಾಹಸ ಪಟ್ಟಿದ್ದಾರೆ. ಕಾರನ್ನು ಹೊರಗೆ ನಿಲ್ಲಿಸುವ ಬದಲು, ಮಾಲೀಕರು ಸ್ಕಾರ್ಪಿಯೋ ವನ್ನು ಕ್ರೇನ್ ಮೂಲಕ ಎತ್ತಿ ತಮ್ಮ ಮನೆಯ ಛಾವಣಿಯ ಮೇಲೆ ಇರಿಸಿದ್ದಾರೆ. ಬಿಹಾರದಲ್ಲಿ ಈ ಘಟನೆ ನಡೆದಿದ್ದು ಟೆರೇಸ್ ಮೇಲೆ ಕಾರನ್ನು ಪಾರ್ಕ್ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

ಟೆರೇಸ್ ಮೇಲೆಯೇ ಕಾರ್ ಪಾರ್ಕ್ ಮಾಡಿದ ಮಾಲೀಕ

ಬಿಹಾರ,ಸೆ.4: ಪ್ರತಿಯೊಬ್ಬರಿಗೂ ಕೆಲವೊಂದು ನೆಚ್ಚಿನ ವಸ್ತುಗಳ ಬಗ್ಗೆ ವಿಷೇಷ ಕಾಳಜಿ ಇರುತ್ತದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಇಲ್ಲೊಬ್ಬ ವ್ಯಕ್ತಿ ವಿದೇಶಕ್ಕೆ ತೆರಳುವ ಮುನ್ನ ತನ್ನ ಎಸ್ ಯುವಿ ಕಾರನ್ನು ಕಳ್ಳರಿಂದ ರಕ್ಷಣೆ ಮಾಡಲು ಹರಸಾಹಸ ಪಟ್ಟಿದ್ದಾರೆ. ಕಾರನ್ನು ಹೊರಗೆ ನಿಲ್ಲಿಸುವ ಬದಲು, ಮಾಲೀಕರು ಸ್ಕಾರ್ಪಿಯೋವನ್ನು ಕ್ರೇನ್ ಮೂಲಕ ಎತ್ತಿ ತಮ್ಮ ಮನೆಯ ಛಾವಣಿಯ ಮೇಲೆ ಇರಿಸಿದ್ದಾರೆ. ಬಿಹಾರದಲ್ಲಿ ಈ ಘಟನೆ ನಡೆದಿದ್ದು ಟೆರೇಸ್ ಮೇಲೆ ಕಾರನ್ನು ಪಾರ್ಕ್ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral News) ಆಗಿದೆ.

ಸ್ಕಾರ್ಪಿಯೋ ಮಾಲೀಕರೊಬ್ಬರು ವಿದೇಶಕ್ಕೆ ತೆರಳುವ ಮುನ್ನ ತನ್ನ ಕಾರನ್ನು ಜೋಪಾನವಾಗಿ ಇರಿಸಬೇಕೆಂದು ಈ ಪ್ಲಾನ್ ಮಾಡಿಕೊಂಡಿದ್ದಾರೆ‌‌. ಕಾರನ್ನು ಹೊರಗಡೆ ಪಾರ್ಕ್ ಮಾಡಿದರೆ ಕಳ್ಳತನವಾಗಬಹುದು ಎನ್ನುವ ಭಯದಿಂದ ಎರಡು ಅಂತಸ್ತಿನ ಟೆರೇಸ್ ಮೇಲೆ ಇರಿಸಿದ್ದಾರೆ.

ವಿಡಿಯೋ ನೋಡಿ:



ಈ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್ ಅನ್ನು ನಿಧಾನವಾಗಿ ಕ್ರೇನ್ ಮೂಲಕ ಮೇಲಕ್ಕೆತ್ತಿ ಮೇಲ್ಛಾವಣಿಯ ಮೇಲೆ ಇರಿಸುವುದನ್ನು ತೋರಿಸುತ್ತದೆ. ಎರಡು ಮಹಡಿಯಷ್ಟು ಎತ್ತರದಲ್ಲಿರುವ ಕಾರನ್ನು ಕದಿಯಲು ಕಷ್ಟ ಎಂದು ಈ ಪ್ಲಾನ್ ಮಾಡಿದ್ದಾರೆ‌. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಬಹಳಷ್ಟು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ.

Viral Video: ಮಹಾರಾಷ್ಟ್ರದಲ್ಲಿ ಭೀಕರ ಅಪಘಾತ; ನಿದ್ದೆಯ ಮಂಪರಿನಲ್ಲಿ ಬೈಕ್ ಸವಾರನನ್ನು ಅರ್ಧ ಕಿಲೋ ಮೀಟರ್ ಎಳೆದೊಯ್ದ ಉಬರ್ ಚಾಲಕ

​ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್ ಕಾರಿನ ತೂಕ ಹೆಚ್ಚು ಇರುತ್ತದೆ. ಸಾಮಾನ್ಯ ವಸತಿ ಮನೆಗಳ ಕಾಂಕ್ರೀಟ್ ಗೆ ಇಷ್ಟೊಂದು ತೂಕದ ವಸ್ತುವನ್ನು ಒಂದೇ ಕಡೆ ನಿಲ್ಲಿಸಬಾರದು. ಕಟ್ಟಡಗಳಿಗೆ ಹಾನಿಯಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಕೆಲವು ವೀಕ್ಷಕರು ವಾಹನ-ಭದ್ರತೆಗೆ ಒಂದು ಉತ್ತಮ ಪ್ಲಾನ್ ಎಂದು ನೋಡಿದರೆ ಇನ್ನು ಕೆಲವರು ಅಭಾರವಾದ ವಾಹನವನ್ನು ಕಟ್ಟಡದ ಮೇಲೆ ಇರಿಸಲು ಸುರಕ್ಷತೆ ಬಗ್ಗೆ ಪ್ರಶ್ನಿಸಿದ್ದಾರೆ.