ಹೈದರಾಬಾದ್,ಜೂ. 2: ಇತ್ತೀಚೆಗೆ ಹೆಚ್ಚಿನವರು ರೈಲು ಪ್ರಯಾಣಕ್ಕೆ ಆಧ್ಯತೆಯನ್ನು ನೀಡುತ್ತಾರೆ. ಆದರೆ ಇಂತಹ ಸೌಕರ್ಯವನ್ನು ಜನ ಬಳಕೆ ಮಾಡಿಕೊಂಡರೂ ನಾಗರಿಕ ಪ್ರಜ್ಞೆಯನ್ನು ಮಾತ್ರ ಮರೆತು ಬಿಟ್ಟಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಸ್ವಚ್ಛತೆ ಕಾಪಾಡದೇ ಬಳಸಿದ ಕಪ್ ಮತ್ತು ತಿಂಡಿ ಪ್ಯಾಕೆಟ್‌ಗಳನ್ನು ಕಸದ ಬುಟ್ಟಿಗೆ ಹಾಕುವ ಬದಲಾಗಿ ರೈಲಿನ ಮೇಲೆಯೇ ಎಲ್ಲೆಂದರಲ್ಲಿ ಹರಡಿ ಹೋಗುತ್ತಾರೆ. ಇಂತಹ ಅಶಿಸ್ತಿನ ವರ್ತನೆಯ ಅನೇಕ ವಿಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತವೆ. ಇದಕ್ಕೆ ಸಾಕ್ಷಿ ಎಂಬಂತೆ ಮೆಟ್ರೋದಲ್ಲಿ ವ್ಯಕ್ತಿಯೊಬ್ಬ ಎರಡು ಸೀಟುಗಳನ್ನು ಆಕ್ರಮಿಸಿಕೊಂಡು ಸೀಟಿನ ಮೇಲೆಯೆ ಕಾಲಿಟ್ಟು ಕುಳಿತಿದ್ದಾನೆ.ಇದರಿಂದ ಸಹ ಪ್ರಯಾಣಿಕರು ಆ ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಹೈದರಾಬಾದ್ ಮೆಟ್ರೋದ ದೃಶ್ಯ ಇದಾಗಿದ್ದು ನಾಗರಿಕ ಪ್ರಜ್ಞೆ ಮತ್ತು ಪ್ರಯಾಣಿಕರ ಶಿಷ್ಟಾಚಾರದ ಕುರಿತು ಚರ್ಚೆಗೆ ಕಾರಣ ವಾಗಿದೆ. ಯುವಕನೊಬ್ಬ ಸಹಪ್ರಯಾಣಿಕನಿಗೆ ತೊಂದರೆಯಾಗುವಂತೆ ಸೀಟಿನ ಮೇಲೆ ಕಾಲಿಟ್ಟು ಕುಳಿತುಕೊಂಡಿದ್ದಾನೆ. ಇದನ್ನು ಗಮನಿಸಿದ ಸಹ ಪ್ರಯಾಣಿಕರು ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ವಿಡಿಯೋ ನೋಡಿ:
ವೀಡಿಯೊದಲ್ಲಿ ಮೆಟ್ರೋ ಕೋಚ್ ಒಳಗೆ ಒಬ್ಬ ಪ್ರಯಾಣಿಕನು ಒಂದು ಕಾಲನ್ನು ಚಾಚಿ ಪಕ್ಕದ ಸೀಟಿನ ಮೇಲೆ ಇರಿಸಿ, ಇತರ ಪ್ರಯಾಣಿಕರು ಇದ್ದರೂ ಎರಡು ಆಸನಗಳನ್ನು ಪರಿಣಾಮ ಕಾರಿಯಾಗಿ ಬಳಸಿಕೊಂಡಿರುವುದು ತೋರಿಸುತ್ತದೆ. ಆತನ ಈ ನಡವಳಿಕೆ ಬಗ್ಗೆ ಪಕ್ಕದಲ್ಲೇ ಇದ್ದ ಪ್ರಯಾಣಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Viral Video: ಅಯ್ಯಯ್ಯೋ! ಅಂತ್ಯಕ್ರಿಯೆ ವೇಳೆ ಶವಪೆಟ್ಟಿಗೆಯಿಂದ ಜೀವಂತವಾಗಿ ಎದ್ದು ಬಂದ ಮಹಿಳೆ: ವಿಡಿಯೋ ನೋಡಿ
ಯುವಕನೊಬ್ಬ ಅವನ ನಡವಳಿಕೆಯನ್ನು ಪ್ರಶ್ನಿಸಿ, ಆಸನದಿಂದ ಪಾದವನ್ನು ತೆಗೆಯುವಂತೆ ಕೇಳಿಕೊಂಡ. ಆದರೆ ಆತ ಅದನ್ನು ಪಾಲಿಸುವ ಬದಲು ಅಹಂಕಾರದಿಂದ ಪ್ರತಿಕ್ರಿಯೆ ನೀಡಿದ್ದಾನೆ.. ಆ ವ್ಯಕ್ತಿ ಮಾತ್ರ, "ನಾನು ಸುಮ್ಮನೆ ಕುಳಿತಿದ್ದೇನೆ, ನಿಮಗೇನು ತೊಂದರೆ?" ಎಂದು ತನ್ನ ನಡವಳಿಕೆಯನ್ನೇ ಸಮರ್ಥಿಸಿಕೊಂಡಿದ್ದಾನೆ.
ಗಲಾಟೆ ಜೋರಾಗುತ್ತಿದ್ದಂತೆ ಅಲ್ಲಿದ್ದ ಅನೇಕ ಪ್ರಯಾಣಿಕರು ಈ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಈ ನಡವಳಿಕೆಯನ್ನು ಅಗೌರವ ಎಂದು ಟೀಕಿಸಿದ್ದಾರೆ. ಸಾರ್ವ ಜನಿಕ ಸ್ಥಳಗಳಲ್ಲಿ ಕನಿಷ್ಠ ನಾಗರಿಕ ಪ್ರಜ್ಞೆ ಇರಬೇಕು ಎಂದು ಆಕ್ರೋಶ ವ್ಯಕ್ತಪಡಿ ಸುತ್ತಿದ್ದಾರೆ. ಬಳಕೆದಾರರೊಬ್ಬರು ಈ ವ್ಯಕ್ತಿಗೆ ಇನ್ಮುಂದೆ ಪ್ರಯಾಣವೇ ನಿರ್ಬಂಧ ಮಾಡಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಇಂತಹ ವ್ಯಕ್ತಿಗಳಿಂದಲೇ ಭಾರತಕ್ಕೆ ಕೆಟ್ಟ ಹೆಸರು ಎಂದು ಪ್ರತಿಕ್ರಿಯೆ ನೀಡಿದ್ದಾರೆ.