ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ರೈಲು ಬೋಗಿಯೊಳಗೆ ಚಡ್ಡಿ ಒಣಗಿಸಿದ ಭೂಪ; ಶಾಕಿಂಗ್‌ ವಿಡಿಯೊ ಫುಲ್‌ ವೈರಲ್‌!

Only Happens in India: ರೈಲಿನಲ್ಲಿ ಪ್ರಯಾಣಿಸುವಾಗ ಅನೇಕ ದೃಶ್ಯಗಳನ್ನು ನೋಡಬಹುದು. ಆದರೀಗ ರೈಲಿನೊಳಗೆ ಒಂದು ಅಸಾಮಾನ್ಯ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ಮೇಲಿನ ಬರ್ತ್‍ನಲ್ಲಿ ತನ್ನ ಒಳಉಡುಪನ್ನು ಒಣಗಿಸಲು ಹಾಕಿದ್ದಾನೆ. ಇಂಥದ್ದೆಲ್ಲಾ ಈ ಭಾರತದಲ್ಲಿ ಮಾತ್ರ ನಡೆಯೋದು ಎಂದು ನೆಟ್ಟಿಗರು ಹಾಸ್ಯಚಟಾಕಿ ಹಾರಿಸಿದ್ದಾರೆ.

ರೈಲು ಬೋಗಿಯೊಳಗೆ ಚಡ್ಡಿ ಒಣಗಿಸಿದ ಭೂಪ!

-

Priyanka P Priyanka P Sep 27, 2025 12:36 PM

ಜೈಪುರ: ಕಿಕ್ಕಿರಿದ ರೈಲಿನಲ್ಲಿ ಪ್ರಯಾಣಿಸುವುದು ಸ್ವಲ್ಪ ಕಷ್ಟವೇ ಸರಿ. ಕೋಚ್ ಅಥವಾ ಬೋಗಿಗಳ ಒಳಗೆ ಎಲ್ಲಾ ದೃಶ್ಯಗಳು ನೋಡಲು ಆಹ್ಲಾದಕರವಾಗಿರುವುದಿಲ್ಲ. ಬೆಂಗಳೂರು-ಜೈಪುರ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌ನಲ್ಲಿ (Bangalore-Jaipur super fast express) ತೆಗೆದ ಫೋಟೋವೊಂದರಲ್ಲಿ, ಪ್ರಯಾಣಿಕರೊಬ್ಬರು ಮೇಲಿನ ಬರ್ತ್‌ನಲ್ಲಿ ತಮ್ಮ ಒಳ ಉಡುಪುಗಳನ್ನು (Inner wears) ಒಣಗಿಸಲು ಹಾಕಿದ್ದಾರೆ. ಇದು ರೈಲು ಶಿಷ್ಟಾಚಾರದ ಬಗ್ಗೆ ಚರ್ಚೆಗಳನ್ನು ಹುಟ್ಟುಹಾಕಿದೆ.

ಸಾಮಾಜಿಕ ಮಾಧ್ಯಮದಲ್ಲಿ ಈ ಫೋಟೋ ವೈರಲ್ ಆಗುತ್ತಿದ್ದಂತೆ (Viral News), ಹಲವರನ್ನು ಇದು ಆಘಾತಗೊಳಿಸಿದೆ. ಅದೇ ಸಮಯದಲ್ಲಿ ಕೆಲವರನ್ನು ರಂಜಿಸಿದೆ. ಚಿತ್ರವನ್ನು ಹಂಚಿಕೊಂಡ ವ್ಯಕ್ತಿಯೊಬ್ಬರು, ತಮ್ಮ ಸಹ-ಪ್ರಯಾಣಿಕನಿಗೆ ಎಸಿ ಟಿಕೆಟ್ ಸಿಗದಿದ್ದರೂ, ಅವರು ಇನ್ನೂ ಉಚಿತ ಲಾಂಡ್ರಿ ಸೇವೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಮಾಷೆ ಮಾಡಿದ್ದಾರೆ. ಅನೇಕರು ಪರಿಸ್ಥಿತಿಯನ್ನು ಹಾಸ್ಯಮಯವಾಗಿ ನೋಡಿದರೆ, ಇತರರು ನಾಗರಿಕ ಪ್ರಜ್ಞೆಯ ಕೊರತೆ ಎಂದು ಟೀಕಿಸಿದ್ದಾರೆ.

ರೆಡ್ಡಿಟ್ ಪೋಸ್ಟ್ ಪ್ರಕಾರ, ಈ ಚಿತ್ರವನ್ನು ಬೆಂಗಳೂರು (SBC) - ಜೈಪುರ (JP) ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌ನಲ್ಲಿ ಆಗಸ್ಟ್ 15, 2025 ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಸೆರೆಹಿಡಿಯಲಾಗಿದೆ. ಇದು ಭಾರತೀಯ ರೈಲ್ವೆಯಲ್ಲಿ ಮಾತ್ರ. ಎಸಿ ಟಿಕೆಟ್ ಸಿಗಲಿಲ್ಲ, ಆದರೆ ಉಚಿತ ಲಾಂಡ್ರಿ ಸೇವೆ ದೊರಕಿತು ಎಂದು ಶೀರ್ಷಿಕೆ ನೀಡಿ ವ್ಯಕ್ತಿಯೊಬ್ಬರು ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: Viral Video: ಟ್ರಕ್ ಓಡಿಸುತ್ತಲೇ 2 ನಿಮಿಷ ನಿದ್ದೆಗೆ ಜಾರಿದ ಚಾಲಕ! ಆಮೇಲೆ ನಡೆದಿದ್ದು ಘನಘೋರ ಘಟನೆ

ಪೋಸ್ಟ್‌ಗೆ ಪ್ರತಿಕ್ರಿಯಿಸುತ್ತಾ, ಚಡ್ಡಿ ಒಣ ಹಾಕಿದ ವ್ಯಕ್ತಿ ಏನನ್ನಾದರೂ ಧರಿಸಿದ್ದಾನೆಂದು ಭಾವಿಸುತ್ತೇನೆ ಎಂದು ಒಬ್ಬ ಬಳಕೆದಾರರೊಬ್ಬರು ಬರೆದಿದ್ದಾರೆ. ವಿದೇಶಗಳಲ್ಲಿಯೂ ಸಹ ಬಹಳಷ್ಟು ಜನರಿಗೆ ನಾಗರಿಕ ಪ್ರಜ್ಞೆಯ ಸಮಸ್ಯೆಗಳಿವೆ. ಆದರೆ, ಇದು ಭಾರತದಲ್ಲಿ ಮಾತ್ರ ಸಂಭವಿಸುವ ವಿಷಯ ಎಂದು ಮತ್ತೊಬ್ಬ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. ನನ್ನ ದೇಶ ಬದಲಾಗುತ್ತಿದೆ, ಮುಂದುವರಿಯುತ್ತಿದೆ ಎಂದು ಮಗದೊಬ್ಬರು ಹೇಳಿದರು.

ಭಾರತೀಯ ರೈಲ್ವೆ ವಿಶೇಷ ಸ್ವಚ್ಛತಾ ಅಭಿಯಾನ

ಭಾರತೀಯ ರೈಲ್ವೆಯು ಪ್ರಯಾಣಿಕರಿಗೆ ಅಶುಚಿಯಾದ ಬೋಗಿಗಳ ಬಗ್ಗೆ ವರದಿ ಮಾಡಲು ಸಹಾಯವಾಣಿ ಸಂಖ್ಯೆಗಳನ್ನು ನೀಡುತ್ತದೆ. ಇದೀಗ ರೈಲ್ವೇಯು ವಿಶೇಷ ಸ್ವಚ್ಛತಾ ಅಭಿಯಾನ 5.0 ಅನ್ನು ಪ್ರಾರಂಭಿಸಲು ಸಜ್ಜಾಗುತ್ತಿದೆ. ಈ ಅಭಿಯಾನವು ಸಾರ್ವಜನಿಕ ಕುಂದುಕೊರತೆಗಳು, ರೆಕಾರ್ಡಿಂಗ್, ಸ್ವಚ್ಛತಾ ಅಭಿಯಾನಗಳು, ಇ-ತ್ಯಾಜ್ಯ ನಿರ್ವಹಣೆ ಮತ್ತು ಸ್ಕ್ರ್ಯಾಪ್ ವಿಲೇವಾರಿ ಮೂಲಕ ಆದಾಯ ಉತ್ಪಾದನೆ ಸೇರಿದಂತೆ ಬಾಕಿ ಇರುವ ಸಾರ್ವಜನಿಕ ದೂರುಗಳನ್ನು ಪರಿಹರಿಸುವತ್ತ ಗಮನಹರಿಸುತ್ತದೆ.

ಸ್ವಚ್ಛತಾ ಅಭಿಯಾನಗಳು ಈಗಾಗಲೇ ಅನೇಕ ರೈಲ್ವೆ ನಿಲ್ದಾಣಗಳು ಮತ್ತು ಸಚಿವಾಲಯದ ಕಚೇರಿಗಳಲ್ಲಿ ನಡೆಯುತ್ತಿದ್ದು, ಅಭಿಯಾನಕ್ಕೆ ಉತ್ತಮ ಆರಂಭವನ್ನು ಸೂಚಿಸುತ್ತಿವೆ. ರೈಲ್ವೆ ಮಂಡಳಿಯ ಅಧ್ಯಕ್ಷರು ಮತ್ತು ಸಿಇಒ, ಹಿರಿಯ ಅಧಿಕಾರಿಗಳೊಂದಿಗೆ, ಸುಗಮ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ನಿಯಮಿತ ಪರಿಶೀಲನಾ ಸಭೆಗಳ ಮೂಲಕ ಸಿದ್ಧತೆಗಳನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಸಾರ್ವಜನಿಕ ಜಾಗೃತಿ ಮೂಡಿಸುವ ಸಲುವಾಗಿ ವಿವಿಧ ರೈಲ್ವೆ ನಿಲ್ದಾಣಗಳಲ್ಲಿ ರೈಲ್ ಚೌಪಾಲ್ ಮತ್ತು 105 ಅಮೃತ್ ಭಾರತ್ ನಿಲ್ದಾಣಗಳಲ್ಲಿ ಅಮೃತ್ ಸಂವಾದ್‍ನಂತಹ ನಾಗರಿಕ ಕೇಂದ್ರಿತ ಉಪಕ್ರಮಗಳನ್ನು ಸಹ ಯೋಜಿಸಲಾಗುತ್ತಿದೆ.