ನವದೆಹಲಿ, ಮೇ 7: ಪಶ್ಚಿಮ ಬಂಗಾಳದಲ್ಲಿ BJP ಪಕ್ಷ ಈ ಭಾರಿ ಮುನ್ನಡೆಯನ್ನು ಸಾಧಿಸಿದೆ. ಭರ್ಜರಿ ಜಯಗಳಿಸುವ ಮೂಲಕ ಹೊಸ ಇತಿಹಾಸ ಬರೆದಿದೆ. ಈ ನಡುವೆ ದೇಶಾದ್ಯಂತ ಬಿಜೆಪಿ ಬೆಂಬಲಿಗರು ಮತ್ತು ಕಾರ್ಯಕರ್ತರು ವಿಜಯೋತ್ಸವವನ್ನು ಆಚರಿಸಿದ್ದು ಸಂಭ್ರಮ ಮನೆ ಮಾಡಿದೆ.ಇದೀಗ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಕೂಡ "ಜೈ ಶ್ರೀ ರಾಮ್” ಮತ್ತು “ಭಾರತ್ ಮಾತಾ ಕಿ ಜೈ” ನಂತಹ ಘೋಷಣೆಗಳನ್ನು ಕೂಗುತ್ತಾ ಸಂಭ್ರಮಾಚರಣೆ ಮಾಡಿದ್ದಾರೆ. ಈ ವೀಡಿಯೊ ಈಗ ಆನ್ ಲೈನ್‌ನಲ್ಲಿ ಭಾರೀ ವೈರಲ್(Viral Video) ಆಗಿದ್ದು ಪರ ವಿರೋಧದ ಚರ್ಚೆ ಶುರುವಾಗಿದೆ.
ವಿಧಾನಸಭಾ ಚುನಾವಣೆಯಲ್ಲಿ ಫಲಿತಾಂಶ ಹೊರ ಬರುತ್ತಿದ್ದಂತೆ ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ಮೊಬೈಲ್ ಕ್ಯಾಮರಾದಲ್ಲಿ ವಿಡಿಯೊ ಮಾಡುತ್ತಾ ಜೈ ಶ್ರೀ ರಾಮ್ ಎಂದು ಘೋಷಣೆ ಕೂಗಿದ್ದಾರೆ. ಈ ಸಂದರ್ಭದಲ್ಲಿ ಆತನ ಸುತ್ತಲೂ ಕುಳಿತಿದ್ದ ಇತರ ಪ್ರಯಾಣಿಕರು ಬೆಂಬಲವನ್ನು ಸೂಚಿಸಿದ್ದಾರೆ. ಅವರು "ಜೈ ಶ್ರೀ ರಾಮ್," "ಹರ್ ಹರ್ ಮಹಾದೇವ್," "ಜೈ ದುರ್ಗಾ," "ಜೈ ಬಾಂಗ್ಲಾ," ಮತ್ತು "ಭಾರತ್ ಮಾತಾ ಕಿ ಜೈ" ಸೇರಿದಂತೆ ಘೋಷಣೆ ಗಳನ್ನು ಜೋರಾಗಿ ಕೂಗುತ್ತಾ ರೆಕಾರ್ಡ್ ಮಾಡಿಕೊಳ್ಳುವುದನ್ನು ಕಾಣಬಹುದು.
ವಿಡಿಯೋ ನೋಡಿ:
ಇಂಡಿಗೋ ವಿಮಾನದೊಳಗೆ ಈ ವೀಡಿಯೊವನ್ನು ರೆಕಾರ್ಡ್ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಆದರೆ ಸಾರ್ವಜನಿಕವಾಗಿ ಇಂತಹ ವರ್ತನೆ ಸರಿಯಲ್ಲ ಎಂದು ಕೆಲವರು ಕಿಡಿಕಾರಿದ್ದಾರೆ. ಬಳಕೆದಾರರೊಬ್ಬರು ವಿಮಾನಗಳಲ್ಲಿ ಇಂತಹ ಆಚರಣೆಯನ್ನು ಅನುಮತಿಸಲಾಗಿದೆಯೇ?" ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೊಬ್ಬರು "ಸಾರ್ವಜನಿಕ ಸ್ಥಳಗಳಲ್ಲಿ ಪ್ರಯಾಣಿಕರ ನೆಮ್ಮದಿಗೆ ಕಿರಿ ಕಿರಿ ಉಂಟು ಮಾಡುವ ಇಂತಹ ವರ್ತನೆ ಸರಿಯಲ್ಲ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Viral Video: ಪಾಕಿಸ್ತಾನಿ ಮದುವೆಯಲ್ಲಿ ಧುರಂಧರ್ ಸಿನಿಮಾದ ಹವಾ; ಟೈಟಲ್ ಸಾಂಗ್‌ಗೆ ಭರ್ಜರಿ ಸೆಪ್ಟ್ ಹಾಕಿದ ಯುವಕರು
ಇಂಡಿಗೋ ಸಂಸ್ಥೆಯನ್ನು ಕೆಲವರು ಟೀಕೆ ಮಾಡಿದ್ದು ವಿಮಾನಯಾನ ಸಂಸ್ಥೆಗಳು ಇದಕ್ಕೆ ಅನುಮತಿಸಬಾರದು. ಸಂಸ್ಥೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಹಲವಾರು ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಇಂಡಿಗೋ ಸಂಸ್ಥೆಯಾಗಲಿ ಅಥವಾ ನಾಗರಿಕ ವಿಮಾನಯಾನ ನಿಯಂತ್ರಣ ಸಂಸ್ಥೆಯಾಗಲಿ ಯಾವುದೇ ಸ್ಪಷ್ಟನೆ ನೀಡಿಲ್ಲ.