Viral Video: ಪಾಕಿಸ್ತಾನಿ ಮದುವೆಯಲ್ಲಿ ಧುರಂಧರ್ ಸಿನಿಮಾದ ಹವಾ; ಟೈಟಲ್ ಸಾಂಗ್‌ಗೆ ಭರ್ಜರಿ ಸೆಪ್ಟ್ ಹಾಕಿದ ಯುವಕರು
ಧುರಂಧರ್ ಸಿನಿಮಾದ ಅಬ್ಬರ ಜೋರಾಗಿದ್ದು ರಣವೀರ್ ಸಿಂಗ್ ಅಭಿನಯಕ್ಕೆ ಪ್ರೇಕ್ಷಕರು ಫಿದಾ ಆಗಿ ದ್ದಾರೆ. ಸಿನಿಮಾ ಕೇವಲ ಭಾರತದಲ್ಲಿ ಮಾತ್ರವಲ್ಲದೆ ಜಾಗತಿಕವಾಗಿ ಕೂಡ ಅಬ್ಬರಿಸುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಪಾಕಿಸ್ತಾನದಲ್ಲೂ ಕೂಡ ಈ ಚಿತ್ರ ಜನಪ್ರಿಯತೆ ಗಳಿಸಿದೆ. ಪಾಕಿಸ್ತಾನದ ಲಾಹೋರ್‌ನಲ್ಲಿ ನಡೆದ ಮದುವೆಯೊಂದರಲ್ಲಿ ಮೂವರು ಯುವಕರು ಧುರಂಧರ್ ಚಿತ್ರದ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ್ದು ಅಲ್ಲಿನ ಜನರು ಕೂಡ ಫಿದಾ ಆಗಿದ್ದಾರೆ..
ಧುರಂಧರ್ ಹಾಡಿಗೆ ಭರ್ಜರಿ ಸೆಪ್ಟ್ ಹಾಕಿದ ಯುವಕರು -
ದೆಹಲಿ, ಡಿ.11: ಬಾಲಿವುಡ್‌ನಲ್ಲಿ ಬಿಗ್ ಬಜೆಟ್ ಸಿನಿಮಾ 'ಧುರಂಧರ್' (Dhurandhar) ರಿಲೀಸ್ ಆಗಿದೆ. ಸದ್ಯ ಎಲ್ಲೆಡೆ ಸಿನಿಮಾದ ಅಬ್ಬರ ಜೋರಾಗಿದ್ದು ರಣವೀರ್ ಸಿಂಗ್ (Ranveer Singh) ಅಭಿನಯಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಸಿನಿಮಾ ಕೇವಲ ಭಾರತದಲ್ಲಿ ಮಾತ್ರವಲ್ಲದೆ ಜಾಗತಿಕವಾಗಿ ಕೂಡ ಅಬ್ಬರಿಸುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಪಾಕಿಸ್ತಾನದಲ್ಲೂ ಕೂಡ ಈ ಚಿತ್ರ ಜನಪ್ರಿಯತೆ ಗಳಿಸಿದೆ. ಪಾಕಿಸ್ತಾನದ ಲಾಹೋರ್‌ನಲ್ಲಿ ನಡೆದ ಮದುವೆಯೊಂದರಲ್ಲಿ ಮೂವರು ಯುವಕರು ಧುರಂಧರ್ ಚಿತ್ರದ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ್ದು ಅಲ್ಲಿನ ಜನರು ಕೂಡ ಫಿದಾ ಆಗಿದ್ದಾರೆ. ಸದ್ಯ ಡ್ಯಾನ್ಸ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral Video) ಆಗಿದೆ.
ಪಾಕಿಸ್ತಾನದ ಲಾಹೋರ್‌ನಲ್ಲಿ ವಿವಾಹ ಕಾರ್ಯಕ್ರಮವೊಂದು ನಡೆದಿದೆ. ಈ ಸಮಾರಂಭದಲ್ಲಿ ಒಂದೇ ರೀತಿಯ ಡ್ರೇಸ್ ಕೋಡ್ ಧರಿಸಿದ ಮೂವರು ಯುವಕರು 'ಧುರಂಧರ್' ಹಾಡಿಗೆ ಸ್ಟೆಪ್ ಹಾಕಿದ್ದಾರೆ. ಯುವಕರು ಬ್ಲಾಕ್ ಸೂಟ್ ಧರಿಸಿದ್ದು ಅವರ ಕಾನ್ಫಿಡೆನ್ಸ್ ಮತ್ತು ಡ್ಯಾನ್ಸ್ ಸ್ಟೈಲ್ ಗೆ ಮದುವೆಗೆ ಬಂದ ಅತಿಥಿಗಳಿಂದ ಭಾರೀ ಮೆಚ್ಚುಗೆ ಸಿಕ್ಕಿದೆ. ಪ್ರದರ್ಶನದ ಆರಂಭದಲ್ಲಿ ಮೂವರು ಕೈಯಲ್ಲಿ ಗ್ಲಾಸ್‌ಗಳನ್ನು ಹಿಡಿದು ಕುಡಿದವರಂತೆ ನಟಿಸಿ ಹಾಸ್ಯಮಯ ವಾತಾವರಣ ಸೃಷ್ಟಿಸಿದರು.
ವಿಡಿಯೋ ನೋಡಿ:
ಬಳಿಕ ಸನ್ ಗ್ಲಾಸ್ ಹಿಡಿದುಕೊಂಡು, ಇದ್ದಕ್ಕಿದ್ದಂತೆ ಲಸ್ಟೆಪ್ ಹಾಕಿ ಎಲ್ಲರನ್ನೂ ಮೋಡಿ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಡ್ಯಾನ್ಸ್ ಎಲ್ಲರ ಗಮನವನ್ನು ತಕ್ಷಣ ಸೆಳೆದಿದೆ. "ನೆಚ್ಚಿನ ಪ್ರದರ್ಶನ" ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೊಪೋಸ್ಟ್ ಮಾಡಿದ್ದು ಹಲವಷ್ಟು ಜನರು ಲೈಕ್ ಕಾಮೆಂಟ್ ಮಾಡಿ ಪ್ರತಿಕ್ರಿಯೆ ನೀಡಿದ್ದಾರೆ. ನೆಟ್ಟಿಗರೊಬ್ಬರು ಯುವಕರ ಎನರ್ಜಿ ಯನ್ನು ರಣವೀರ್ ಸಿಂಗ್‌ನ ಶಕ್ತಿಗೆ ಹೋಲಿಸಿದ್ದಾರೆ. ಒಬ್ಬ ಬಳಕೆದಾರರು 'ಧುರಂಧರ್‌ನ ಹವಾ' ಬರೆದಿದ್ದಾರೆ,.
Viral Video: ರೀಲ್ಸ್‌ಗಾಗಿ ಇದೆಂಥ ಹುಚ್ಚಾಟ? ಹಸುವಿಗೆ ಚಿಕನ್ ಮೋಮೋಸ್ ತಿನ್ನಿಸಿದ ಯುವಕ! ವ್ಯಾಪಕ ಆಕ್ರೋಶ
ಸದ್ಯ ಧುರಂಧರ್’ ಸಿನಿಮಾದ ಕ್ರೇಜ್ ಮುಂದುವರಿದಿದೆ. ಸಿನಿಮಾಗೆ ಉತ್ತಮ ವಿಮರ್ಶೆ ಸಿಕ್ಕಿ ರುವುದರಿಂದ ಜನರು ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ. ರಣವೀರ್ ಸಿಂಗ್, ಸಂಜಯ್ ದತ್, ಅರ್ಜುನ್ ರಾಂಪಾಲ್, ಅಕ್ಷಯ್ ಖನ್ನಾ, ಸಾರಾ ಅರ್ಜುನ್, ಆರ್. ಮಾಧವನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದು ಚಿತ್ರವು ಡಿಸೆಂಬರ್ 5ರಂದು ಬಿಡುಗಡೆಯಾಗಿದೆ. ಪಾಕಿಸ್ತಾನದ ಗ್ಯಾಂಗ್‌ಬೆಲ್ಲಿಯಲ್ಲಿ ನಡೆಯುವ ಅರೆ-ಕಾಲ್ಪನಿಕ ಸ್ಪೈ ಥ್ರಿಲ್ಲರ್ ಚಿತ್ರ ಇದಾಗಿದ್ದು, ನೈಜ ಘಟನೆಗಳಿಂದ ಹೆಚ್ಚು ಪ್ರೇರಿತ ವಾಗಿದೆ. ಸದ್ಯ ಪಾಕಿಸ್ತಾನದಲ್ಲೂ ಈ ಚಿತ್ರದ ಹಾಡಿಗೆ ಯುವಕರು ಭರ್ಜರಿಯಾಗಿ ಸ್ಟೆಪ್ ಹಾಕಿದ್ದಾರೆ.