ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʼವಂದೇ ಭಾರತ್‌ʼ ರೈಲಿನಲ್ಲಿ ಎಲ್ಲೆಂದರಲ್ಲಿ ಕಸ ಎಸೆದ ಪ್ರಯಾಣಿಕರು: ದಿನದಿಂದ ದಿನಕ್ಕೆ ಕ್ಷೀಣಿಸುತ್ತಿರುವ ನಾಗರಿಕ ಪ್ರಜ್ಞೆಯ ಬಗ್ಗೆ ನೆಟ್ಟಿಗರು ಕಿಡಿ

Viral News: ಇತ್ತೀಚೆಗೆ ನಾಗರಿಕ ಪ್ರಜ್ಞೆ ಮರೆಯಾಗಿ ಬಿಟ್ಟಿದೆ. ಸಾರ್ವಜನಿಕ ಸ್ಥಳದಲ್ಲಿ ಅನೇಕರು ಅಶಿಸ್ತು ಮೆರೆಯುತ್ತಿದ್ದಾರೆ. ಎಲ್ಲೆಂದರಲ್ಲಿ ಕಸ ಹಾಕುವುದು, ಪ್ರವಾಸಿ ಸ್ಥಳದಲ್ಲಿ ವಸ್ತುಗಳನ್ನು ಮುಟ್ಟಿ ಹಾನಿಗೊಳಿಸುವುದು ಹೀಗೆ ದಿನಕ್ಕೊಂದು ಘಟನೆ ವರದಿಯಾಗುತ್ತಲೇ ಇವೆ. ಇದೀಗ ಉದ್ಯಮಿ ಹರ್ಷ್ ಗೋಯೆಂಕಾ 'ವಂದೇ ಭಾರತ್' ರೈಲಿನಲ್ಲಿ ಪ್ರಯಾಣಿಕರು ಕಸ ಎಸೆದು ಹೋಗಿರುವ ವಿಡಿಯೊ ಮಾಡಿ ಶೇರ್ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ.

ವಂದೇ ಭಾರತ್ ರೈಲಿನಲ್ಲಿ ಎಲ್ಲೆಂದರಲ್ಲಿ ಕಸ ಎಸೆದ ಪ್ರಯಾಣಿಕರು

ನವದೆಹಲಿ, ಸೆ. 26: ಇತ್ತೀಚೆಗೆ ನಾಗರಿಕ ಪ್ರಜ್ಞೆ ಮರೆಯಾಗಿ ಬಿಟ್ಟಿದೆ. ಸಾರ್ವಜನಿಕ ಸ್ಥಳದಲ್ಲೂ ಅನೇಕರು ಅಶಿಸ್ತು ಮೆರೆಯುತ್ತಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವುದು, ಪ್ರವಾಸಿ ಸ್ಥಳದಲ್ಲಿ ವಸ್ತುಗಳನ್ನು ಮುಟ್ಟಿ ಹಾನಿಗೊಳಿಸುವುದು ಹೀಗೆ ದಿನಕ್ಕೊಂದು ಘಟನೆ ವರದಿಯಾಗುತ್ತಲೇ ಇದೆ. ಇದೀಗ ಉದ್ಯಮಿ ಹರ್ಷ್ ಗೋಯೆಂಕಾ 'ವಂದೇ ಭಾರತ್' ರೈಲಿನಲ್ಲಿ ಪ್ರಯಾಣಿಕರು ಕಸ ಎಸೆದು ಹೋಗಿರುವ ವಿಡಿಯೊ (Viral News) ಶೇರ್ ಮಾಡಿದ್ದಾರೆ. ಈ ಮೂಲಕ  ಭಾರತೀಯರ 'ನಾಗರಿಕ ಪ್ರಜ್ಞೆ' ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ʼವಂದೇ ಭಾರತ್ʼ ರೈಲು ಆಧುನಿಕ ಸೌಲಭ್ಯಗಳಿಗೆ, ಸ್ವಚ್ಛತೆಗೆ ಹೆಸರುವಾ. ಆದರೆ ಇಂತಹ ಸೌಕರ್ಯಗಳನ್ನು ನೀಡಿದರೂ ಜನ ತಮ್ಮಿಷ್ಟದಂತೆ ವರ್ತಿಸುತ್ತಿದ್ದಾರೆ. ಒಂದು ಕಡೆ ರೈಲಿನಲ್ಲಿ ನೀಡಲಾಗುವ ಆಧುನಿಕ ಸೌಲಭ್ಯಗಳು, ಆಹಾರ ಮತ್ತು ಶುಚಿತ್ವವನ್ನು ತೋರಿಸಿದರೆ, ಇನ್ನೊಂದೆಡೆ ಪ್ರಯಾಣಿಕರು ಬಿಟ್ಟು ಹೋಗಿರುವ ಪ್ಲಾಸ್ಟಿಕ್ ಕವರ್ ಹಾಗೂ ಪೇಪರ್‌ಗಳನ್ನು ಸೀಟುಗಳ ಮೇಲೆಯೇ ಇಟ್ಟು ಹೋಗಿರುವ ದೃಶ್ಯವನ್ನು ವಿಡಿಯೊ ಮೂಲಕ ವಿವರಿಸಿದ್ದಾರೆ.

ವಿಡಿಯೊ ನೋಡಿ:



ʼವಂದೇ ಭಾರತ್ʼ ರೈಲು ದೇಶದ ಅತ್ಯುತ್ತಮ ವಿನ್ಯಾಸದ ರೈಲುಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿವೆ. ಇವು ಆಧುನಿಕ ವಿನ್ಯಾಸ, ಸ್ವಚ್ಛತೆ ಮತ್ತು ಪ್ರಯಾಣದ ವೇಳೆ ಸಿಗುವ ಸೇವೆಗಳಿಗೆ ಜನಪ್ರಿಯ. ಆದರೆ ಪ್ರಯಾಣಿಕರು ಮಾತ್ರ ಗುಣಮಟ್ಟವನ್ನು ಕಾಯ್ದುಕೊಳ್ಳದೆ ಅಶಿಸ್ತು ಮೆರೆಯುತ್ತಿದ್ದಾರೆ ಎಂದು  ಕೈಗಾರಿಕೋದ್ಯಮಿ ಹರ್ಷ್ ಗೋಯೆಂಕಾ ಅವರು ಕಳವಳ ವ್ಯಕ್ತಪಡಿಸಿದ್ದಾರೆ.

20 ಅಡಿ ಎತ್ತರದ ಫ್ಲೈಓವರ್ ನಡುವೆ ಸಿಲುಕಿದ ಕಾರ್‌! ಚಾಲಕ ಪವಾಡ ಸದೃಶ ಪಾರು

ʼʼವಂದೇ ಭಾರತ್‌ʼನಲ್ಲಿ ಪ್ರಯಾಣ ಮಾಡುವವರು ಹೆಚ್ಚಾಗಿ ವಿದ್ಯಾವಂತರು. ಅಕ್ಷರಸ್ಥರೆ ಹೀಗೆ ಮಾಡಿದರೆ ಹೇಗೆ? ಸಾರ್ವಜನಿಕ ಸ್ಥಳದಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳುವುದು ಮುಖ್ಯʼʼ ಎಂದು ಬರೆದಿದ್ದಾರೆ. ಇಂತಹ ಘಟನೆಗಳನ್ನು ತಡೆಯಲು ರೈಲುಗಳಲ್ಲಿ ಕಸ ಎಸೆಯುವವರಿಗೆ ಕಟ್ಟುನಿಟ್ಟಿನ ದಂಡ ವಿಧಿಸಬೇಕು ಎಂದು ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ