ನವದೆಹಲಿ, ಏ. 13: ರೈಲು ಪ್ರಯಾಣವನ್ನು ಹೆಚ್ಚಿನವರು ಇಷ್ಟಪಡುತ್ತಾರೆ. ಕಡಿಮೆ ವೆಚ್ಚದ ಜತೆಗೆ ತಮ್ಮ ಸ್ಥಳಕ್ಕೆ ಬೇಗನೆ ಹೋಗಿ ತಲುಪಬಹುದು. ಆದರೆ ಇಲ್ಲೊಂದು ರೈಲು ಪ್ರಯಾಣದಲ್ಲಿ ಅಚ್ಚರಿಯ ಘಟನೆಯೊಂದು (Viral News) ನಡೆದಿದೆ. ರೈಲಿನ ಅಪ್ಪರ್ ಬರ್ತ್ ಅನ್ನು ದೇವಸ್ಥಾನವಾಗಿ ಪರಿವರ್ತಿಸಿದ ಘಟನೆ ನಡೆದಿದೆ. ದೇವರ ವಿಗ್ರಹ ಸ್ಥಾಪಿಸಿ ಹೂವಿನ ಹಾರದಿಂದ ಅಲಂಕರಿಸಲಾಗಿದೆ. ಜತೆಗೆ ಪ್ರಯಾಣದ ಮಧ್ಯದಲ್ಲಿ ಪೂಜೆಯನ್ನೂ ಸಲ್ಲಿಸಲಾಗಿದೆ.
ರೈಲು ಪ್ರಯಾಣಿಕರು ಚಲಿಸುವ ಕೋಚ್ ಒಳಗೆ ಪೂಜೆ ಸಲ್ಲಿಸಿದ ಈ ದೃಶ್ಯವು ಇದೀಗ ಆನ್‌ಲೈನ್‌ನಲ್ಲಿ ಚರ್ಚೆಗೆ ಕಾರಣವಾಗಿದೆ. ಪ್ರಯಾಣಿಕರು ಸ್ಲೀಪರ್ ಬರ್ತ್ ಅನ್ನು ತಾತ್ಕಾಲಿಕ ದೇವಾಲಯವನ್ನಾಗಿ ಪರಿವರ್ತಿಸುವುದನ್ನು ವಿಡಿಯೊ ಸೆರೆ ಹಿಡಿದಿದೆ.
ವಿಡಿಯೊ ನೋಡಿ:
ಈ ಘಟನೆ ರೈಲ್ವೆ ಸೇವೆಯಾದ ಭಾರತ್ ಗೌರವ್ ಪ್ರವಾಸಿ ರೈಲಿನಲ್ಲಿ ನಡೆದಿದೆ. ಭಾರತದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ರೀತಿಯಾಗಿ ವಿನ್ಯಾಸ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ದೃಶ್ಯಗಳಲ್ಲಿ, ಹಲವು ಪ್ರಯಾಣಿಕರು ಭಕ್ತಿ ಸ್ತುತಿಗೀತೆಗಳನ್ನು ಹಾಡಿದ್ದು ಧಾರ್ಮಿಕ ಆಚರಣೆಗಳಲ್ಲಿ ಭಾಗವಹಿಸಿರುವುದು ಕಂಡು ಬಂದಿದೆ. ಅಪ್ಪರ್ ಬರ್ತ್ ಅನ್ನು ಸಣ್ಣ ದೇವಾಲಯದಂತೆ ಅಲಂಕಾರ ಮಾಡಲಾಗಿದೆ. ಕೆಲವರು ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರೆ ಇನ್ನು ಕೆಲವರು ಇಂತಹ ಆಚರಣೆ ತಪ್ಪು ಎಂದು ಬರೆದಿದ್ದಾರೆ.
ಅವಹೇಳನ ಮೆಟ್ಟಿ ನಿಂತು ಯಶಸ್ಸು ಕಂಡ ಸಿಲೇಂದ್ರನ್ ಅರುಣಗಿರಿ
ವಿಡಿಯೊದಲ್ಲಿ ಪ್ರಯಾಣಿಕರು ಮೇಲಿನ ಬರ್ತ್‌ಗೆ ಹೂವಿನ ಹಾರಗಳನ್ನು ಹಾಕಿ, ದೇವರ ಫೋಟೊ ಇಟ್ಟು, ಆರತಿ ಮತ್ತು ಭಜನೆ ಮಾಡುತ್ತಿರುವ ದೃಶ್ಯ ಕಂಡುಬಂದಿದೆ. ಅನೇಕರು ಈ ದೃಶ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದರೆ, ಕೆಲವರು ಸುರಕ್ಷತೆಯ ಬಗ್ಗೆ ಪ್ರಶ್ನಿಸಿದ್ದಾರೆ. ಕಿರಿದಾದ ಭೋಗಿ ಒಳಗೆ ಜನಸಂದಣಿ ಮತ್ತು ಅಪಾಯಕಾರಿ ವಸ್ತುಗಳಿಂದ ಬರ್ತ್‌ಗಳನ್ನು ಅಲಂಕರಿಸುವುದು ಅಪಾಯವನ್ನುಂಟು ಮಾಡಬಹುದು ಎಂದಿದ್ದಾರೆ.