ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕಿಡ್ನಾಪರ್‌ ಬಳಿಯಿಂದ ತಪ್ಪಿಸಿಕೊಂಡು 17 ಕಿಲೋ ಮೀಟರ್‌ ನಡೆದು ಮನೆ ಸೇರಿದ 7 ಶ್ವಾನಗಳು

Viral Video: ಶ್ವಾನಗಳು ಬುದ್ಧಿವಂತ ಪ್ರಾಣಿಗಳು ಎನ್ನುವುದು ಮತ್ತೊಮ್ಮ ಸಾಬೀತಾಗಿದೆ. ಅಪಹರಣಕಾರರ ಬಳಿಯಿಂದ ತಪ್ಪಿಸಿಕೊಂಡ ಶ್ವಾನಗಳು ಮನೆಗೆ ತಲುಪಿವೆ. 7 ನಾಯಿಗಳು ತಪ್ಪಿಸಿಕೊಂಡು 2 ದಿನಗಳ ಕಾಲ ಸುಮಾರು 17 ಕಿಲೋ ಮೀಟರ್ ಪ್ರಯಾಣಿಸಿ ಮಾಲಕರ ಮಡಿಲಿಗೆ ಸೇರಿವೆ. ಸದ್ಯ ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಕಿಡ್ನಾಪರ್‌ಗಳಿಂದ ತಪ್ಪಿಸಿಕೊಂಡು ಮನೆ ಸೇರಿದ ಸಾಕು ನಾಯಿಗಳು

ಬೀಜಿಂಗ್‌, ಮಾ. 24: ಚೀನಾದ ಚಾಂಗ್ ಚುನ್‌ನಲ್ಲಿ ಜಗತ್ತನ್ನೇ ಅಚ್ಚರಿಗೆ ದೂಡಿದ ಘಟನೆಯೊಂದು ನಡೆದಿದೆ. ಮಾಂಸದ ಅಂಗಡಿಗೆ ಮಾರಾಟ ಮಾಡಲು ಅಪರಹಣಕಾರರು ಕೊಂಡೊಯ್ಯುತ್ತಿದ್ದ ಶ್ವಾನಗಳು ಚಾಣಾಕ್ಷ್ಯದಿಂದ ತಪ್ಪಿಸಿಕೊಂಡು ಬಂದಿವೆ. 7 ನಾಯಿಗಳು ತಪ್ಪಿಸಿಕೊಂಡು 2 ದಿನಗಳಲ್ಲಿ ಸುಮಾರು 17 ಕಿಲೋ ಮೀಟರ್ ಪ್ರಯಾಣಿಸಿ ಚಾಂಗ್‌ಚುನ್‌ನಲ್ಲಿ ತಮ್ಮ ಮಾಲಕರ ಜತೆ ಸೇರಿಕೊಂಡಿವೆ‌. ಸದ್ಯ ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗುತ್ತಿದೆ.

ಮಾರ್ಚ್ 16ರಂದು ಈ ಘಟನೆ ನಡೆದಿದ್ದು, ಅಪಹರಣಕಾರರು 7 ಸಾಕು ನಾಯಿಗಳನ್ನು ಮಾಂಸದ ಅಂಗಡಿಗೆ ಕರೆದೊಯ್ದಿದ್ದಾರೆ. ಇದರಲ್ಲಿ ಜರ್ಮನ್ ಶೆಫರ್ಡ್, ಗೋಲ್ಡನ್ ರಿಟ್ರೈವ್, ಲ್ಯಾಬ್ರಡಾರ್ ಹಾಗೂ ಕೋರ್ಗಿ ತಳಿಯ ನಾಯಿಗಳಿದ್ದವು.

ವಿಡಿಯೊ ನೋಡಿ:



ಇದರಲ್ಲಿ ಕೊರ್ಗಿ ಎಂಬ ನಾಯಿ ನಾಯಕತ್ವ ಮೆರೆದಿದ್ದು, ಅದು ಗುಂಪನ್ನು ಮುನ್ನಡೆಸುತ್ತಿರುವಂತೆ ಕಂಡುಬಂದಿದೆ. ಇಡೀ ತಂಡವನ್ನು ಪುಟ್ಟ 'ಕೋರ್ಗಿ' ನಾಯಿ ತಂಡವನ್ನು ಮುನ್ನಡೆಸಿದ್ದು ವಿಶೇಷ. ಅವು ಹೇಗೆ ತಪ್ಪಿಸಿಕೊಂಡವು ಎನ್ನುವುದು ತಿಳಿದು ಬಂದಿಲ್ಲ.

ಎಲ್‌ಪಿಜಿ ಕೊರತೆ ಬಗ್ಗೆ 5 ತಿಂಗಳ ಹಿಂದೆಯೇ ಭವಿಷ್ಯ ನುಡಿದಿದ್ದ ಜ್ಯೋತಿಷಿ

ಈ ನಾಯಿಗಳು ಹೊಲ ಗದ್ದೆಗಳ ಮೂಲಕ ಎರಡು ದಿನದವರೆಗೆ ಸುಮಾರು 17 ಕಿ.ಮೀ.ವರೆಗೆ ನಡೆದಿವೆ. ರಸ್ತೆ ಬದಿಯಲ್ಲಿ ಸಾಗುವಾಗ ಅವುಗಳು ಶಿಸ್ತಿನಿಂದ ಒಟ್ಟಿಗೆ ಸಾಗುವುದನ್ನು ಗಮನಿಸಬಹುದು. ದೊಡ್ಡ ನಾಯಿಗಳು ಅಲ್ಲಿದ್ದ ಇತರ ಮರಿ ನಾಯಿಗಳನ್ನು ರಕ್ಷಿಸುತ್ತಿದ್ದವು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಸ್ಥಳೀಯರು ಮತ್ತು ಸ್ವಯಂಸೇವಕರು ಇವುಗಳ ಚಲನವಲನವನ್ನು ಗಮನಿಸಿ, ಮಾಲಕರಿಗೆ ಮಾಹಿತಿ ನೀಡಿದರು.

7 ನಾಯಿಗಳನ್ನು ಈಗ ಪತ್ತೆ ಹಚ್ಚಲಾಗಿದ್ದು, ಆಯಾ ಮಾಲಕರಿಗೆ ಹಸ್ತಾಂತರಿಸಲಾಗಿದೆ. ಈ ವೇಳೆ ನಾಯಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿ ತಿಳಿಸಿದೆ.