ಮುಂಬೈ,ಆ.7: ಮಹಿಳೆಯರ ಸುರಕ್ಷತೆ ಎಂದು ಎಷ್ಟೇ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೂ ಮಹಿಳೆಯರ ದೌರ್ಜನ್ಯ ಹಾಗೂ ಕಿರುಕುಳಕ್ಕೆ ಕಡಿವಾಣ ಬಿದ್ದಿಲ್ಲ. ದಿನನಿತ್ಯ ಒಂದಾದರೂ ಇಂತಹ ಪ್ರಕರಣಗಳು ವರದಿಯಾಗುತ್ತಿವೆ. ಇದಕ್ಕೆ ಸಾಕ್ಷಿ ಎನ್ನುವಂತೆ ಮುಂಬೈ ನ ಲೋಕಲ್ ಟ್ರೈನ್ ನಲ್ಲಿ ವ್ಯಕ್ತಿಯೊಬ್ಬ ಮಹಿಳೆಯ ಮೇಲೆ ಬೆಲ್ಟ್ ನಿಂದಲೇ ಹಲ್ಲೆಯನ್ನು (Viral News) ನಡೆಸಿದ್ದಾನೆ. ಬೋಗಿಯಲ್ಲಿ ಸಹಪ್ರಯಾಣಿಕರು ಇದ್ದರೂ ಯಾವುದೇ ರೀತಿಯಲ್ಲಿ ಸಹಾಯಕ್ಕೆ ಧಾವಿಸಿರಲಿಲ್ಲ. ಅಲ್ಲಿದ್ದ ಜನರ ಮನಸ್ಥಿತಿಯ ಬಗ್ಗೆಯೂ ನೆಟ್ಟಿಗರು ಕಿಡಿಕಾರಿದ್ದಾರೆ.
ಇಂದು ಸಾರ್ವಜನಿಕ ಸ್ಥಳದಲ್ಲೇ ಮಹಿಳೆಯರಿಗೆ ದೌರ್ಜನ್ಯವನ್ನು ಎಸಗುತ್ತಿದ್ದಾರೆ. ವೈರಲ್ ವೀಡಿಯೊದ ಪ್ರಕಾರ, ಪುರುಷ ಪ್ರಯಾಣಿಕನು ಮಹಿಳೆಯ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದು ಆಕೆ ಸೀಟ್ ಮೇಲೆ ಕುಳಿತಿದ್ದಳು. ಚಲಿಸುವ ರೈಲಿನೊಳಗೆ ಇಬ್ಬರೂ ತೀವ್ರ ವಾಗ್ವಾದದಲ್ಲಿ ತೊಡಗಿದ್ದನ್ನು ದೃಶ್ಯಗಳು ತೋರಿಸುತ್ತವೆ. ನಂತರ ಆ ವ್ಯಕ್ತಿ ಮಹಿಳೆಯ ಮೇಲೆ ಸರಿಯಾಗಿ ದಾಳಿಯನ್ನು ನಡೆಸುತ್ತಾನೆ.
ವಿಡಿಯೋ ನೋಡಿ:
ಮುಂಬೈನ ವಾಡಾಲಾ ಸಮೀಪದಲ್ಲಿ ಹೋಗುತ್ತಿದ್ದ ರೈಲಿನಲ್ಲಿ ಈ ಘಟನೆ ನಡೆದಿದೆ. ಇಬ್ಬರ ನಡುವೆ ಮೊದಲಿಗೆ ವಾಗ್ವಾದಗಳಾಗಿದ್ದು ಸಾರ್ವಜನಿಕರ ಮುಂದೆಯೇ ಬೆಲ್ಟ್ ನಿಂದ ಹಲ್ಲೆ ನಡೆಸಿದ್ದಾನೆ. ಈ ಘಟನೆಯು ಆನ್‌ಲೈನ್‌ನಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ಹಲ್ಲೆ ನಡೆದಾಗ ಸಹ ಪ್ರಯಾಣಿಕರು ಮಹಿಳೆಗೆ ಸಹಾಯ ಮಾಡಲು ಏಕೆ ಮುಂದಾಗಲಿಲ್ಲ ಎಂದು ಹಲವಾರು ಪ್ರಶ್ನೆ ಮಾಡಿದ್ದಾರೆ.
Viral Video: ನೆರೆಮನೆಯ ಯುವಕನಿಂದನೇ ಕಿರುಕುಳ; ವಿಡಿಯೊ ಮಾಡಿ ಕಣ್ಣೀರು ಹಾಕಿದ ಅಪ್ರಾಪ್ತ ಬಾಲಕಿ
ವೀಡಿಯೊದಲ್ಲಿ ಆರೋಪಿಯು ತನ್ನ ಬೆಲ್ಟ್ ತೆಗೆದು ಮಹಿಳೆಗೆ ಬೆದರಿಕೆ ಹಾಕುತ್ತಿದ್ದಾನೆ. ಕ್ಲಿಪ್‌ನ ಕೊನೆಯಲ್ಲಿ, ಆತ ದೂರ ಸರಿದು ಮತ್ತೊಂದು ಸೀಟಿನಲ್ಲಿ ಕುಳಿತಿರುವುದು ಕಂಡುಬರುತ್ತದೆ.ಈ ವಾಗ್ವಾದಕ್ಕೆ ಕಾರಣವೇನು? ಎಂಬುವುದನ್ನು ಅಧಿಕಾರಿಗಳು ಇನ್ನೂ ದೃಢಪಡಿಸಿಲ್ಲ. ಹಾಗೂ ಯಾವುದೇ ದೂರು ದಾಖಲಾ ಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಈ ವಿಡಿಯೊ ವೈರಲ್ ಆಗು ತ್ತಿದ್ದಂತೆ ನೆಟ್ಟಿಗರು ನಾನಾ ಬಗೆಯ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಬಳಕೆದಾರರೊಬ್ಬರು ಆತ ಅಷ್ಟು ಕ್ರೂರವಾಗಿ ಹಲ್ಲೆ ನಡೆಸಿದರೂ ಯಾರು ನೆರವಿಗೆ ಧಾವಿಸಲ್ಲ ಎಂತ ಮನುಷ್ಯರು? ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಮತ್ತೊಬ್ಬರು ಈ ವ್ಯಕ್ತಿಯ ವಿರುದ್ಧ ಸರಿಯಾದ ಕ್ರಮ ಕೈಗೊಳ್ಳಬೇಕು ಎಂದು ಕಾಮೆಂಟ್ ಮಾಡಿದ್ದಾರೆ.