ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ರೈಲಿನಲ್ಲಿ ವಿದೇಶಿ ಮಹಿಳೆಗೆ ಕಿರುಕುಳ: ಶೌಚಾಲಯದವರೆಗೂ ಹಿಂಬಾಲಿಸಿ ಬಾಗಿಲು ತೆರೆಯಲು ಯತ್ನಿಸಿದ ಕಾಮುಕರು!

Viral Video: ದಿನ ನಿತ್ಯ ಮಹಿಳೆಯರ ಕಿರುಕುಳಕ್ಕೆ ಸಂಬಂಧ ಪಟ್ಟ ಪ್ರಕರಣಗಳು ಸುದ್ದಿಯಾಗುತ್ತಲೇ ಇದೆ. ಇದಕ್ಕೆ ಸಾಕ್ಷಿ ಎಂಬಂತೆ ಪ್ರವಾಸ ಬಂದಿದ್ದ ಪೋರ್ಚುಗೀಸ್ ಮಹಿಳೆಯೊಬ್ಬರಿಗೆ ಅಪರಿಚಿತ ವ್ಯಕ್ತಿಗಳ ಗುಂಪೊಂದು ರೈಲಿನಲ್ಲಿಯೇ ಕಿರುಕುಳ ನೀಡಿದ್ದಾರೆ. ಅಷ್ಟೇ ಅಲ್ಲದೆ ಶೌಚಾಲಯಕ್ಕೆ ತೆರಳು ವಾಗಲೂ ಹಿಂಬಾಲಿಸಿ ಬಾಗಿಲು ತೆರೆಯಲು ಪ್ರಯತ್ನಿಸಿದ್ದಾರೆ ಎಂದು ಮಹಿಳೆ ದೂರಿದ್ದಾರೆ. ಆಕೆ ತನ್ನ ವೀಡಿಯೊದಲ್ಲಿ ಕೆಲವು ದೃಶ್ಯಗಳನ್ನು ಶೇರ್ ಮಾಡಿಕೊಂಡಿದ್ದಾರೆ...

ರೈಲಿನಲ್ಲಿ ಮಹಿಳಾ ಪ್ರವಾಸಿಗೆ ಕಿರುಕುಳ

ನವದೆಹಲಿ, ಮಾ.11: ಮಹಿಳಾ ಸಬಲಿಕರಣ, ಮಹಿಳಾ ಸುರಕ್ಷತೆ ಎಂದು ಎಷ್ಟೂ ಬಿಂಬಿಸಿದರೂ ಮಹಿಳೆ ದೌರ್ಜನ್ಯ ಪ್ರಕರಣಗಳು ಕಡಿಮೆಯಾಗಿಲ್ಲ. ದಿನ ನಿತ್ಯ ಮಹಿಳೆಯರ ಕಿರುಕುಳಕ್ಕೆ ಸಂಬಂಧ ಪಟ್ಟ ಪ್ರಕರಣಗಳು ಸುದ್ದಿಯಾಗುತ್ತಲೇ ಇದೆ. ಇದಕ್ಕೆ ಸಾಕ್ಷಿ ಎಂಬಂತೆ ಪ್ರವಾಸ ಬಂದಿದ್ದ ಪೋರ್ಚುಗೀಸ್ ಮಹಿಳೆಯೊಬ್ಬರಿಗೆ ಅಪರಿಚಿತ ವ್ಯಕ್ತಿಗಳ ಗುಂಪೊಂದು ರೈಲಿನಲ್ಲಿಯೇ ಕಿರುಕುಳ ನೀಡಿದ್ದಾರೆ. ಅಷ್ಟೇ ಅಲ್ಲದೆ ಶೌಚಾಲಯಕ್ಕೆ ತೆರಳುವಾಗಲೂ ಹಿಂಬಾಲಿಸಿ ಬಾಗಿಲು ತೆರೆಯಲು ಪ್ರಯತ್ನಿಸಿದ್ದಾರೆ ಎಂದು ಮಹಿಳೆ ದೂರಿದ್ದಾರೆ. ಆಕೆ ತನ್ನ ವೀಡಿಯೊದಲ್ಲಿ ಕೆಲವು ದೃಶ್ಯಗಳನ್ನು ಶೇರ್ (Viral Video) ಮಾಡಿಕೊಂಡಿದ್ದಾರೆ.

ಪೋರ್ಚುಗೀಸ್ ವ್ಲಾಗರ್ ಒಬ್ಬರು ಭಾರತದಲ್ಲಿ ಉಂಟಾದ ಕಹಿ ಅನುಭವವನ್ನು ಹಂಚಿ ಕೊಂಡಿದ್ದಾರೆ. ಭಾರತಕ್ಕೆ ಪ್ರವಾಸ ಬಂದಿದ್ದ ಇವರಿಗೆ ಜೋಧ್‌ಪುರಕ್ಕೆ ಪ್ರಯಾಣಿಸುವಾಗ ರೈಲಿನಲ್ಲಿ ಅಪರಚಿತ ವ್ಯಕ್ತಿಗಳ ಗುಂಪು ಕಿರುಕುಳ ಎಸಗಿದ್ದಾರೆ. ಶೇರ್ ಮಾಡಲಾದ ಪೋಸ್ಟ್ ನಲ್ಲಿ 3AC ಕೋಚ್‌ನಲ್ಲಿ ತನ್ನ ಪಕ್ಕದಲ್ಲಿ ಕುಳಿತಿದ್ದ ಪುರುಷರ ಗುಂಪು ಪದೇ ಪದೇ ಅವರನ್ನು ದಿಟ್ಟಿಸಿ ನೋಡು ತ್ತಿದ್ದರು. ತನ್ನನ್ನು ಆತಂಕಕ್ಕೀಡುಮಾಡುವ ರೀತಿಯಲ್ಲಿ ವರ್ತಿಸಿದರು ಎಂದು ಮಹಿಳೆ ಹೇಳಿಕೊಂಡಿದ್ದಾರೆ.

ವೀಡಿಯೊ ನೋಡಿ:



ನಾವು ಭಾರತದಲ್ಲಿ 3AC ರೈಲಿನಲ್ಲಿದ್ದೇವು. ಆದರೆ ಈ ಸವಾರಿಯ ಸಮಯದಲ್ಲಿ, ನಮ್ಮ ಎದುರು ಕುಳಿತಿದ್ದ ಹುಡುಗರ ಗುಂಪು ದಿಟ್ಟಿಸುತ್ತಲೇ ಇತ್ತು, ಆಸನಗಳನ್ನು ಬದಲಾಯಿಸುತ್ತಾ ಮತ್ತು ನಿರಂತರವಾಗಿ ನಮ್ಮನ್ನು ನೋಡುತ್ತಲೇ ಇತ್ತು. ನಾನು ಶೌಚಾಲಯಕ್ಕೆ ಹೋದಾಗ ಆ ಗುಂಪಿ ನಲ್ಲಿದ್ದ ಒಬ್ಬ ಯುವಕ ತನ್ನನ್ನು ಹಿಂಬಾಲಿಸಿಕೊಂಡು ಬಂದಿದ್ದಾನೆ‌. ನಾನು ಟ್ಲಾಯೆಟ್ ಒಳಗಡೆ ಹೋದ ಕೇವಲ 30 ಸೆಕೆಂಡುಗಳಲ್ಲಿ ಆತ ಹೊರಗಿನಿಂದ ಬಾಗಿಲು ತೆರೆಯಲು ಪ್ರಯತ್ನಿಸಿದ್ದಾನೆ. ತನ್ನ ಸ್ನೇಹಿತೆ ಇದನ್ನು ಗಮನಿಸಿ ಕೂಡಲೇ ಶೌಚಾಲಯದ ಬಳಿ ಬಂದಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ ಎಂದಿದ್ದಾರೆ.

Viral News: ಗರ್ಲ್‌ಫ್ರೆಂಡ್‌ ಪೋಷಕರನ್ನು ಮೆಚ್ಚಿಸಲು ಹೋಗಿ ಪ್ರಾಣವನ್ನೇ ಬಿಟ್ಟ ಯುವಕ

ನಂತರ ಇಬ್ಬರೂ ರೈಲಿನ ಟಿಕೆಟ್ ಪರೀಕ್ಷಕರಿಗೆ (ಟಿಟಿಇ) ವರದಿ ಮಾಡಿದ್ದು ಅವರನ್ನು ಮತ್ತೊಂದು ಕೋಚ್‌ಗೆ ಸ್ಥಳಾಂತರಿಸಿದರು. ರೈಲ್ವೆ ಸಿಬ್ಬಂದಿಯ ಈ ಸಹಾಯಕ್ಕೆ ಮಹಿಳೆ ಧನ್ಯವಾದ ಹೇಳಿದ್ದಾರೆ. ಸದ್ಯ ಈ ವೀಡಿಯೊ ಭಾರೀ ವೈರಲ್ ಆಗಿದ್ದು ನೆಟ್ಟಿಗರು ಕಿಡಿಕಾರಿದ್ದಾರೆ. ಬಳಕೆದಾರರೊಬ್ಬರು ಇದು ವಿದೇಶಿ ಪ್ರಯಾಣಿಕರು ಮಾತ್ರವಲ್ಲ ಅನೇಕ ಭಾರತೀಯ ಮಹಿಳೆಯರು ಇದನ್ನು ಅನುಭವಿಸಿರುತ್ತಾರೆ ಎಂದಿದ್ದಾರೆ..ಇಂತಹ ಕಾಮುಕರಿಗೆ ಸರಿಯಾದ ಶಿಕ್ಷೆ ವಿಧಿಸಬೇಕೆಂದು ಹಲವಾರು ಕಾಮೆಂಟ್ ಮಾಡಿದ್ದಾರೆ.