ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ದೂರದ ಜಪಾನ್‌ ಅಲ್ಲ ನಮ್ಮ ದೇಶದಲ್ಲೇ ಇದೆ ಪಿಂಕ್ ಟ್ರಂಪೆಟ್ ಹೂವಿನ ಹಾದಿ; ನಿಸರ್ಗ ಸೌಂದರ್ಯಗೆ ಮನಸೋತ ನೆಟ್ಟಿಗರು

Viral Video: ಮುಂಬೈ ನಗರದ ವಿಖ್ರೋಲಿ ಮತ್ತು ಘಾಟ್ಕೋಪರ್ ನಡುವಿನ ಪೂರ್ವ ಎಕ್ಸ್‌ಪ್ರೆಸ್ ಹೆದ್ದಾರಿಯು ಇದೀಗ ಸಂಪೂರ್ಣವಾಗಿ ಗುಲಾಬಿ ಬಣ್ಣದ ಹೂವುಗಳಿಂದ ಆವೃತವಾಗಿದ್ದು, ಪ್ರಯಾಣಿಕರ ಕಣ್ಣಿಗೆ ತಂಪು ನೀಡುತ್ತಿದೆ. ಈ ಸೊಬಗಿನ ಡ್ರೋನ್ ವಿಡಿಯೊ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮುಂಬೈನಲ್ಲಿ ಕಣ್ಮನ ಸೆಳೆದ ದೃಶ್ಯ

ಮುಂಬೈ, ಫೆ. 4: ಸಾಮಾನ್ಯವಾಗಿ ನಗರ ಪ್ರದೇಶದ ರಸ್ತೆಗಳಲ್ಲಿ ವಾಹನಗಳೇ ತುಂಬಿ ತುಳುಕುತ್ತವೆ. ಆದರೆ ಈಗ ಮಾಯಾನಗರಿ ಮುಂಬೈ ಜಪಾನ್‌ನ 'ಚೆರ್ರಿ ಬ್ಲಾಸಮ್' ಹಬ್ಬವನ್ನು ನೆನಪಿಸುವಂತೆ ಮಾಡಿದೆ. ನೈಸರ್ಗಿಕ ಸೌಂದರ್ಯದಿಂದ ಈ ಹೆದ್ದಾರಿ ಕಂಗೊಳಿಸುತ್ತಿದ್ದು ಗುಲಾಬಿ ಬಣ್ಣದ ಹೂವುಗಳಿಂದ ತುಂಬಿ ಹೋಗಿದೆ. ಮುಂಬೈ ನಗರದ ವಿಖ್ರೋಲಿ ಮತ್ತು ಘಾಟ್ಕೋಪರ್ ನಡುವಿನ ಪೂರ್ವ ಎಕ್ಸ್‌ಪ್ರೆಸ್ ಹೆದ್ದಾರಿಯು ಇದೀಗ ಸಂಪೂರ್ಣವಾಗಿ ಗುಲಾಬಿ ಬಣ್ಣದ ಹೂವುಗಳಿಂದ ಆವೃತ ವಾಗಿದ್ದು, ಪ್ರಯಾಣಿಕರ ಕಣ್ಣಿಗೆ ತಂಪು ನೀಡುತ್ತಿದೆ. ಈ ಸೊಬಗಿನ ಡ್ರೋನ್ ವಿಡಿಯೊಗಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿವೆ.

ಇದನ್ನು ಸಾಮಾನ್ಯವಾಗಿ ಪಿಂಕ್ ಟ್ರಂಪೆಟ್ ಮರಗಳು ಎಂದು ಕರೆಯಲಾಗುತ್ತದೆ. ಇವುಗಳನ್ನು ಮುಂಬೈನ ಚೆರ್ರಿ ಬ್ಲಾಸಮ್‌ಗಳೆಂದೇ ಕರೆಯಲಾಗುತ್ತದೆ. ತಂಪಾದ ಹವಾಮಾನ ಚೆರ್ರಿ ಹೂವುಗಳಿಗೆ ಅಗತ್ಯ ಇರುತ್ತದೆ. ಆದರೆ ಈ ಪಿಂಕ್ ಟ್ರಂಪೆಟ್ ಮರಗಳು ಮಬೈನ ಬೆಚ್ಚಗಿನ ಆರ್ದ್ರ ಪ್ರದೇಶಗಳಲ್ಲಿ ಚೆನ್ನಾಗಿ ಬೆಳೆದಿವೆ. ಸಾಮಾನ್ಯವಾಗಿ ಚಳಿಗಾಲದ ಅಂತ್ಯ ಮತ್ತು ವಸಂತ ಕಾಲದ ಆರಂಭದಲ್ಲಿ ಅರಳುವ ಈ ಮರಗಳು ಮುಂಬೈನ ರಸ್ತೆಯಲ್ಲಿ ಕಣ್ಮನ ಸೆಳೆಯುವಂತೆ ಮಾಡಿವೆ.

ವಿಡಿಯೊ ನೋಡಿ:



ರಸ್ತೆಯ ಇಡೀ ಮಾರ್ಗಗಳು ಹೂವುಗಳ ದಳದಿಂದ ಗುಲಾಬಿ ಬಣ್ಣದ ಹಾಸಿಗೆಯಂತೆ ಕಾಣುತ್ತಿವೆ. ಇತ್ತೀಚೆಗೆ, ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಡ್ರೋನ್ ದೃಶ್ಯ ಹೆದ್ದಾರಿಯ ಉದ್ದಕ್ಕೂ ಇರುವ ಅದ್ಭುತವಾದ ಗುಲಾಬಿ ಬಣ್ಣದ ಹೂವಿನ ದೃಶ್ಯ ಸೆರೆಹಿಡಿದಿದೆ. ಸೋಶಿಯಲ್ ಮೀಡಿಯಾ ಬಳಕೆದಾರರು ಈ ದೃಶ್ಯಗಳನ್ನು ಶ್ಲಾಘಿಸಿದ್ದು, ಇದು ನಗರದ ರಸ್ತೆಗಳಲ್ಲಿ ಉಲ್ಲಾಸದ ಅನುಭವ ನೀಡುತ್ತದೆ ಎಂದಿದ್ದಾರೆ.

ಇದೆಂಥ ಕೃತ್ಯ? ಕೈಕಾಲುಗಳಿಗೆ ಸಂಕೋಲೆ ಬಿಗಿದಿದ್ದರೂ ದುಡಿಯುತ್ತಿರುವ ಕಾರ್ಮಿಕನ ವಿಡಿಯೊ ವೈರಲ್

ಈ ಬಗ್ಗೆ ನೆಟ್ಟಿಗರು ಕೂಡ ಕಮೆಂಟ್ ಮಾಡಿದ್ದು, ʼʼಗುಲಾಬಿ ಬಣ್ಣದ ಹೂವುಗಳು ಶಾಂತ ಮತ್ತು ಸೌಂದರ್ಯದ ಕ್ಷಣವನ್ನು ಹೆಚ್ಚಿಸಿದೆʼʼ ಎಂದಿದ್ದಾರೆ. ಮತ್ತೊಬ್ಬರು, ʼʼಇಂತಹ ದೃಶ್ಯಗಳು ನಗರ ಪ್ರದೇಶದಲ್ಲಿ ನಿಜವಾಗಿಯೂ ಬೇಕು. ಅದ್ಬುತʼʼ ಎಂದು ಬರೆದುಕೊಂಡಿದ್ದಾರೆ.