ದ್ವಿಚಕ್ರ ವಾಹನ ಅಪಘಾತ,ಸ್ಥಳದಲ್ಲೇ ಇಬ್ಬರು ಸಾವು
ದ್ಚಿಚಕ್ರವಾಹನ ರಸ್ತೆಯ ಬದಿಯ ಗುಣಿಗೆ ಬಿದ್ದು ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿರುವ ಘಟನೆ ಕೆಂಚಾರ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಚಾರ್ಹಳ್ಳಿ ಸರ್ಕಾರಿ ಪ್ರೌಢಶಾಲೆ ಬಳಿ ಭಾನುವಾರ ರಾತ್ರಿ ನಡೆದಿದೆ. ದ್ವಿಚಕ್ರ ವಾಹನದಿಂದಿ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿರುವವರು ಚಿಂತಾಮಣಿ ತಾಲೂಕು ಪಲಿಗಡ್ಡ ಗ್ರಾಮದ ನಿವಾಸಿ ಹಾಗೂ ಹಾಲಿ ಚಿಂತಾಮಣಿ ನಗರದ ವೆಂಕಟಗಿರಿಕೋಟೆಯಲ್ಲಿ ವಾಸವಾಗಿರುವ ಪ್ರಭಾಕರ ಆಚಾರಿ, ಹಾಗೂ ಪಲ್ಲಿಗಡ್ಡ ಗ್ರಾಮದ ವೆಂಕಟರವಣಪ್ಪರವರಾಗಿದ್ದಾರೆ.


ಚಿಂತಾಮಣಿ: ದ್ಚಿಚಕ್ರವಾಹನ ರಸ್ತೆಯ ಬದಿಯ ಗುಣಿಗೆ ಬಿದ್ದು ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿ ರುವ ಘಟನೆ ಕೆಂಚಾರ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಚಾರ್ಹಳ್ಳಿ ಸರ್ಕಾರಿ ಪ್ರೌಢಶಾಲೆ ಬಳಿ ಭಾನುವಾರ ರಾತ್ರಿ ನಡೆದಿದೆ. ದ್ವಿಚಕ್ರ ವಾಹನದಿಂದಿ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿರುವವರು ಚಿಂತಾಮಣಿ ತಾಲೂಕು ಪಲಿಗಡ್ಡ ಗ್ರಾಮದ ನಿವಾಸಿ ಹಾಗೂ ಹಾಲಿ ಚಿಂತಾಮಣಿ ನಗರದ ವೆಂಕಟಗಿರಿಕೋಟೆಯಲ್ಲಿ ವಾಸವಾಗಿರುವ ಪ್ರಭಾಕರ ಆಚಾರಿ, ಹಾಗೂ ಪಲ್ಲಿಗಡ್ಡ ಗ್ರಾಮದ ವೆಂಕಟರವಣಪ್ಪರವರಾಗಿದ್ದಾರೆ.
ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ಸೋಮವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ, ಭಾನುವಾರ ರಾತ್ರಿ ಚೇಳೂರು ಕಡೆಯಿಂದ ಚಿಂತಾಮಣಿಗೆ ಬರುತ್ತಿದ್ದ ವೇಳೆ ದ್ವಿಚಕ್ರವಾಹನ ಚಾಲಕನ ಹಿಡಿತ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದು ತಂದನಂತೆ ರಸ್ತೆಬದಿಯಲ್ಲಿನ ಗುಣಿಗೆ ದ್ವಿಚಕ್ರ ವಾಹನ ಸಮೇತ ಬಿದ್ದು, ಸಾವನ್ನಪ್ಪಿದ್ದಾರೆ ಎಂದು ಬಲಮೂಲಗಳಿಂದ ತಿಳಿದು ಬಂದಿದ್ದು, ಇನ್ನೂ ವಿಷಯ ತಿಳಿದ ಕೂಡಲೆ ಸ್ಥಳಕ್ಕೆ ಕೆಂಚಾರ್ಲಹಳ್ಳಿ ಪೊಲೀಸರು ಬೇಟಿ ನೀಡಿ ಸ್ಥಳ ಪರಿಶಿಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.