ತಿರುವನಂತಪುರ, ಜ. 23: ಪ್ರಧಾನಿ ನರೇಂದ್ರ ಮೋದಿ (Narendra Modi) ವಿಶ್ವದ ಪ್ರಭಾವಿ ನಾಯಕರಲ್ಲಿ ಒಬ್ಬರು. ಯಶಸ್ವಿ ರಾಜಕಾರಣಿ ಎನಿಸಿಕೊಂಡಿರುವ ಅವರಿಗೆ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಅಭಿಮಾನಿಗಳಿದ್ದಾರೆ. ಇಡೀ ವಿಶ್ವವೇ ಭಾರತದ ಕಡೆಗೆ ತಿರುಗಿ ನೋಡುವಂತೆ ಮಾಡಿದ್ದಾರೆ. ಮೋದಿ ಶುಕ್ರವಾರ ಕೇರಳಕ್ಕೆ ಆಗಮಿಸಿದ ವೇಳೆ ಅಪರೂಪದ ಘಟನೆಯೊಂದು ನಡೆಯಿತು. ತಿರುವನಂತಪುರಂನಲ್ಲಿ ಆಯೋಜಿಸಿದ್ದ ಬೃಹತ್ ರ‍್ಯಾಲಿಯಲ್ಲಿ ಅವರು ಪಾಲ್ಗೊಂಡರು. ಈ ಸಮಾವೇಶದಲ್ಲಿ ಪ್ರಧಾನಿ ಮೋದಿ ತಮ್ಮ ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿ ಪುಟ್ಟ ಬಾಲಕನೊಬ್ಬನ ಜತೆ ಸಂವಹನ ನಡೆಸಿದರು. ಸದ್ಯ ಅಪರೂಪದ ಕ್ಷಣದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
ಈ ಸಮಾವೇಶದಲ್ಲಿ ಭಾಗವಹಿಸಿದ ಬಾಲಕ ನೀಲಿ ಸೂಟ್ ಮತ್ತು ಬಹು ಬಣ್ಣದ ಪೇಟದಲ್ಲಿರುವ ಮೋದಿಯ ಚಿತ್ರವನ್ನು ಬಿಡಿಸಿ ಅದನ್ನು ಪ್ರದರ್ಶಿಸುತ್ತಿದ್ದ. ತುಂಬ ಹೊತ್ತು ಆ ಬಾಲಕ ತನ್ನ ಚಿತ್ರವನ್ನು ಕೈಯಲ್ಲಿ ಹಿಡಿದುಕೊಂಡು ನಿಂತಿರುವುದನ್ನು ಗಮನಿಸಿದ ಮೋದಿ ಆತನ ಮಾತನಾಡಿದರು.
ವಿಡಿಯೊ ನೋಡಿ:
ʼʼನೀನು ತುಂಬ ಸಮಯದಿಂದ ನಿಂತಿದ್ದಿ. ಸುಸ್ತಾಗಿರುತ್ತದೆ. ಆ ಚಿತ್ರದ ಹಿಂದೆ ಹೆಸರು, ವಿಳಾಸ ಬರೆದು ಕೊಡು. ನಾನು ನಿನಗೆ ಪತ್ರ ಬರೆಯುತ್ತೇನೆʼʼ ಎಂದು ಮೋದಿ ಹೇಳಿದ್ದಾರೆ. ಬಳಿಕ ವಿಶೇಷ ರಕ್ಷಣಾ ಗುಂಪು (ಎಸ್‌ಪಿಜಿ) ಸಿಬ್ಬಂದಿಗೆ ಚಿತ್ರವನ್ನು ಪಡೆಯುವಂತೆ ಅವರು ಸೂಚಿಸಿದ್ದಾರೆ. ''ಇದು ಈ ಮಗುವಿನ ಪ್ರೀತಿ ಮತ್ತು ಆಶೀರ್ವಾದಗಳನ್ನು ಹೊಂದಿದೆ. ದಯವಿಟ್ಟು ಅದನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಿ” ಎಂದು ಪ್ರಧಾನಿ ಭಾಷಣ ಮಧ್ಯೆಯೇ ಹೇಳಿದ್ದಾರೆ.
Viral Video: ಹುಚ್ಚಾಟ ಮೆರೆದು ಸಿಂಹಿಣಿಯ ದಾಳಿಗೆ ಪ್ರಾಣ ಕಳೆದುಕೊಂಡ ಯುವಕ: ಎದೆ ಝಲ್ ಎನಿಸುತ್ತೆ ಈ ದೃಶ್ಯ!
ಸದ್ಯ ಈ ದೃಶ್ಯ ವೈರಲ್ ಆಗಿದ್ದು ಪ್ರಧಾನಿ ನಡೆಗೆ ಹಲವರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ನೆಟ್ಟಿಗರೊಬ್ಬರು ಇಂತಹ ಪ್ರಧಾನಿ ಬಗ್ಗೆ ಹೆಮ್ಮೆ ಎನಿಸುತ್ತಿದೆ ಎಂದಿದ್ದಾರೆ. ಮಗುವನ್ನು ಗಮನಿಸಿದ ಮೋದಿ ನಿಜವಾಗಿಯೂ ಈ ಪ್ರೀತಿಗೆ ಪಾತ್ರರು ಎಂದು ಮತ್ತೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ