Viral Video: ಹುಚ್ಚಾಟ ಮೆರೆದು ಸಿಂಹಿಣಿಯ ದಾಳಿಗೆ ಪ್ರಾಣ ಕಳೆದುಕೊಂಡ ಯುವಕ: ಎದೆ ಝಲ್ ಎನಿಸುತ್ತೆ ಈ ದೃಶ್ಯ!
ಬ್ರೆಜಿಲ್‌ನ ಜಾವೊ ಪೆಸ್ಸೋದಲ್ಲಿರುವ ಮೃಗಾಲಯವಾದ 'ಬಿಕಾ'ದಲ್ಲಿ ದುರಂತ ಘಟನೆ ನಡೆದಿದ್ದು ಸಿಂಹಿಣಿಯ ಆವರಣಕ್ಕೆ ನುಗ್ಗಿ ಯುವಕ ಪ್ರಾಣ ಕಳೆದುಕೊಂಡಿದ್ದಾನೆ. ಯುವಕನು ತನ್ನ ಇಚ್ಚೆ ಯಿಂದಲೇ ಅಪಾಯಕಾರಿ ಪ್ರದೇಶ ಪ್ರವೇಶಿಸಿ, ಕೆಲವೇ ಕ್ಷಣಗಳಲ್ಲಿ ಪ್ರಾಣ ಕಳೆದುಕೊಂಡ ಘಟನೆ ಪ್ರವಾಸಿಗರ ಕಣ್ಣ ಮುಂದೆಯೆ ನಡೆದಿದೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯದಲ್ಲಿ ಭಾರೀ ವೈರಲ್ ಆಗುತ್ತಿದೆ.
ಸಿಂಹಿಣಿಯ ದಾಳಿಗೆ ಸಿಲುಕಿ ಪ್ರಾಣವೇ ಕಳೆದುಕೊಂಡ ಯುವಕ -
ಬ್ರೆಜಿಲ್: ನರಭಕ್ಷಕ ಕಾಡು ಪ್ರಾಣಿಗಳನ್ನು ನೋಡಿದಾಗ ಎಂಥವರಿಗೂ ಮೈ ಜುಮ್ ಎನಿಸುತ್ತದೆ. ಅದರಲ್ಲೂ ಪ್ರಾಣಿ ಸಂಗ್ರಾಲಯ, ಅನಿಮಲ್ ಸಫಾರಿ ಇತ್ಯಾದಿ ಪ್ರದೇಶಕ್ಕೆ ಭೇಟಿ ಕೊಡುವಾಗಲೂ ಬಹಳಷ್ಟು ಜಾಗೃತರಾಗಿರಬೇಕು. ಇದೀಗ 19 ವರ್ಷದ ಯುವಕನೊಬ್ಬ ಸಿಂಹದ ಮೃಗಾಲಯದ ಆವರಣಕ್ಕೆ ತೆರಳಿ ಪ್ರಾಣವೇ ಕಳೆದುಕೊಂಡಿದ್ದಾನೆ. ಬ್ರೆಜಿಲ್‌ನ ಜಾವೊ ಪೆಸ್ಸೋದಲ್ಲಿರುವ ಮೃಗಾ ಲಯವಾದ 'ಬಿಕಾ' ದಲ್ಲಿ ಈ ದುರಂತ ಘಟನೆ ನಡೆದಿದ್ದು ಸಿಂಹಿಣಿಯ ಆವರಣಕ್ಕೆ ನುಗ್ಗಿ ಪ್ರಾಣ ಕಳೆದುಕೊಂಡಿದ್ದಾನೆ. ಯುವಕನು ತನ್ನ ಇಚ್ಛೆಯಿಂದಲೇ ಅಪಾಯಕಾರಿ ಪ್ರದೇಶ ಪ್ರವೇಶಿಸಿ, ಕೆಲವೇ ಕ್ಷಣಗಳಲ್ಲಿ ಪ್ರಾಣ ಕಳೆದುಕೊಂಡ ಘಟನೆ ಪ್ರವಾಸಿಗರ ಕಣ್ಣ ಮುಂದೆಯೆ ನಡೆದಿದೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯದಲ್ಲಿ ಭಾರೀ ವೈರಲ್ (Viral Video) ಆಗುತ್ತಿದೆ.
ಮೃಗಾಲಯವು ಸಾರ್ವಜನಿಕರಿಗಾಗಿ ತೆರೆದಿರುವಾಗ ಈ ಭಯಾನಕ ಘಟನೆ ನಡೆದಿದೆ. ಪ್ರವಾಸಿಗರೊಬ್ಬರ ಹೇಳಿಕೆಯ ಪ್ರಕಾರ, ಯುವಕನು ಯಾವ ಕಾರಣಕ್ಕೆ ಈ ಅಪಾಯಕಾರಿ ಆವರಣಕ್ಕೆ ಪ್ರವೇಶಿಸಿದನು ಎಂಬುದು ಇನ್ನೂ ಕೂಡ ನಿಗೂಢವಾಗಿದೆ. ಆತನು ಭದ್ರತಾ ಬೇಲಿ ಮತ್ತು ನಿಷೇಧಿತ ಫಲಕಗಳನ್ನು ನೋಡಿಯೂ ಸಿಂಹಿಣಿಯ ಆವರಣದೊಳಗೆ ಪ್ರವೇಶ ಮಾಡಿದ್ದಾನೆ ಎಂದು ತಿಳಿಸಿ ದ್ದಾರೆ.
ವಿಡಿಯೊ ವೀಕ್ಷಿಸಿ:
ಯುವಕ ಆವರಣದೊಳಗೆ ಕಾಲಿಟ್ಟಾಗ ಸಿಂಹಿಣಿ ತನ್ನ ಕಡೆಗೆ ಧಾವಿಸುತ್ತಿರುವುದನ್ನು ನೋಡಿದ ಯುವಕ, ಆವರಣದೊಳಗಿದ್ದ ಒಂದು ಮರವನ್ನು ಹತ್ತಿ ತಪ್ಪಿಸಿಕೊಳ್ಳಲು ಪ್ರಯತ್ನಪಟ್ಟಿದ್ದಾನೆ. ಈ ಸಂದರ್ಭದಲ್ಲಿ ಅಲ್ಲಿದ್ದ ಪ್ರವಾಸಿಗರು ಸಹಾಯಕ್ಕಾಗಿ ಕೂಗಲು ಪ್ರಾರಂಭಿಸಿದ್ದಾರೆ. ಆತ ಜೀವ ಭಯದಿಂದ ಮರದಲ್ಲಿ ನೇತಾಡುತ್ತಿದ್ದ ದೃಶ್ಯಗಳನ್ನು ಪ್ರವಾಸಿಗರು ಮೊಬೈಲ್ ಕ್ಯಾಮರಾ ದಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
Viral Video: ಸುರಂಗದಲ್ಲಿ ಕೆಟ್ಟು ನಿಂತ ಚೆನ್ನೈ ಮೆಟ್ರೋ ರೈಲು; ಪ್ರಯಾಣಿಕರು ಸುಸ್ತೋ ಸುಸ್ತು... ವಿಡಿಯೋ ನೋಡಿ
ದುರದೃಷ್ಟವಶಾತ್ ಆತ ಕೈ ಹಿಡಿತವನ್ನು ಕಳೆದುಕೊಂಡು ಜಾರಿ ಕೆಳಗೆ ಬಿದ್ದಿದ್ದಾನೆ. ಕೆಲವೇ ಸೆಕೆಂಡುಗಳಲ್ಲಿ ಸಿಂಹಿಣಿ ದಾಳಿ ಮಾಡಿ ಮಾರಣಾಂತಿಕವಾಗಿ ಗಾಯಗೊಳಿಸಿದೆ. ಮೃಗಾಲಯದ ಅಧಿ ಕಾರಿಗಳು ಮತ್ತು ಭದ್ರತಾ ತಂಡಗಳು ತಕ್ಷಣವೇ ಆವರಣಕ್ಕೆ ಧಾವಿಸಿದರು, ಆದರೆ ಗಾಯದ ತೀವ್ರತೆ ಹೆಚ್ಚಾಗಿದ್ದರಿಂದ ಯುವಕನನ್ನು ಉಳಿಸಲು ಸಾಧ್ಯವಾಗಲಿಲ್ಲ ಮತ್ತು ಸ್ಥಳದಲ್ಲೇ ಆತ ಮೃತ ಪಟ್ಟಿದ್ದಾನೆ ಎಂದು ದೃಢಪಡಿಸಲಾಗಿದೆ. ಈ ದುರಂತದ ಬೆನ್ನಲ್ಲೇ, ಮೃಗಾಲಯದ ಆಡಳಿತವು ಕೂಡಲೇ ಸಾರ್ವಜನಿಕರ ಭೇಟಿಯನ್ನು ಸ್ಥಗಿತಗೊಳಿಸಿದೆ.
ಸ್ಥಳೀಯ ಪೊಲೀಸರು ಮತ್ತು ಅಧಿಕಾರಿಗಳು ಘಟನೆಯ ಕುರಿತಂತೆ ತನಿಖೆ ಆರಂಭಿಸಿದ್ದಾರೆ. ಮೃಗಾಲಯವು ಕಟ್ಟುನಿಟ್ಟಿನ ಸುರಕ್ಷತಾ ಮಾನದಂಡಗಳನ್ನು ಪಾಲಿಸುತ್ತಿದ್ದರೂ, ಯುವಕನು ಆವರಣಕ್ಕೆ ಹೇಗೆ ನುಗ್ಗಿದ್ದಾನೆ ಎನ್ನುವ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಉಂಟಾಗಿದ್ದು ನೆಟ್ಟಿಗರು ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಮೃಗಾಲಯದ ಆವರಣದ ಒಳಗೆ ಏಕಾ ಏಕಿ ನುಗ್ಗಲು ಯುವಕನಿಗೆ ಏನಾಗಿತ್ತು ಎಂದು ಬಳಕೆದಾರರೊಬ್ಬರು ಪ್ರಶ್ನೆ ಮಾಡಿದ್ದಾರೆ. ಸದ್ಯ ,19 ವರ್ಷದ ಯುವಕನು ಸಿಂಹಿಣಿಯ ದಾಳಿಗೆ ಸಿಲುಕಿ ಪ್ರಾಣವೇ ಕಳೆದುಕೊಂಡಿದ್ದಾನೆ.