ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ರಸ್ತೆ ಬದಿ ನಿಲ್ಲಿಸಿದ ಕಾರಿನ ಗಾಜು ಒಡೆದ ಪೊಲೀಸರು: ವಿಡಿಯೊದ ಅಸಲಿಯತ್ತೇನು?

Viral Video: ಪೊಲೀಸರ ಗುಂಪೊಂದು ಕಾರಿನ ಗ್ಲಾಸ್ ಅನ್ನು ಒಡೆಯುತ್ತಿರುವ ದೃಶ್ಯವೊಂದು ಭಾರಿ ವೈರಲ್ ಆಗಿದೆ. ಶ್ರೀ ವಿಜಯಪುರದ ಸೀಶೋರ್‌ನಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರಿನ ಗ್ಲಾಸನ್ನು ಪೊಲೀಸರು ಒಡೆಯುತ್ತಿದ್ದರು. ಈ ದೃಶ್ಯ ನೋಡಿದ ಅನೇಕರು ಪೊಲೀಸರ ಬಗ್ಗೆ ಕಿಡಿಕಾರಿದ್ದರು. ಕೊನೆಗೂ ಈ ವಿಡಿಯೊದ ಅಸಲಿ ಸತ್ಯ ಹೊರಬಿದ್ದಿದೆ.

ಕಾರಿನ ಗಾಜು ಒಡೆದ ಪೊಲೀಸರು

ಶ್ರೀವಿಜಯಪುರಂ, ಮಾ. 15: ಇತ್ತೀಚೆಗೆ ಪೊಲೀಸರ ಗುಂಪೊಂದು ಕಾರಿನ ಗ್ಲಾಸ್ ಒಡೆಯುತ್ತಿರುವ ದೃಶ್ಯವೊಂದು ಭಾರಿ ವೈರಲ್ (Viral Video) ಆಗಿದೆ. ಅಂಡಮಾನ್‌ನ ಶ್ರೀವಿಜಯಪುರಂನ ಸೀಶೋರ್‌ನಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರಿನ ಗ್ಲಾಸನ್ನು ಪೊಲೀಸರು ಒಡೆದಿದ್ದಾರೆ. ಈ ದೃಶ್ಯ ನೋಡಿದ ಅನೇಕರು ಪೊಲೀಸರ ಬಗ್ಗೆ ಕಿಡಿಕಾರಿದ್ದರು. ಕೊನೆಗೂ ಈ ವಿಡಿಯೊದ ಅಸಲಿ ಸತ್ಯ ಹೊರಬಿದ್ದಿದೆ.

ಪೊಲೀಸ್ ಅಧಿಕಾರಿಗಳ ಪ್ರಕಾರ, ಕಾರು ಸೀಶೋರ್ ರಸ್ತೆಯಲ್ಲಿ ದೀರ್ಘಕಾಲದವರೆಗೆ ನಿಂತಿತ್ತು. ಆ ಪ್ರದೇಶದಲ್ಲಿ ನಿಯಮಿತ ಕಣ್ಗಾವಲು ನಡೆಸುತ್ತಿದ್ದ ಪೊಲೀಸರಿಗೆ ಈ ಕಾರು ನಿಂತಿರುವುದು ಕಂಡು ಬಂದಿದೆ. ಈ ಸಮಯದಲ್ಲಿ ಪೊಲೀಸ್ ತಂಡವು ಕಾರಿನ ಹತ್ತಿರ ಹೋಗಿ ಪರಿಶೀಲನೆಯನ್ನು ನಡೆಸಿದೆ.‌ ಆಗ ಕಾರಿನೊಳಗೆ ಮೂವರು ವ್ಯಕ್ತಿಗಳು ಇರುವುದು ಕಂಡು ಬಂದಿದ್ದು ಪೊಲೀಸರು ಎಷ್ಟೇ ಬಾರಿ ಕಿಟಕಿ ಬಡಿದರೂ ಯಾವುದೇ ಪ್ರತಿಕ್ರಿಯೆಯನ್ನು ನೀಡಿರಲಿಲ್ಲ.

ವಿಡಿಯೊ ನೋಡಿ:



ಕಾರಿನಲ್ಲಿ ಇದ್ದವರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಪೊಲೀಸರು ಒಳಗಿರುವವರೊಂದಿಗೆ ಸಂವಹನ ನಡೆಸಲು ಪ್ರಯತ್ನಪಟ್ಟರು. ಪೊಲೀಸರು ಕಿಟಕಿಗಳನ್ನು ಹಲವು ಬಾರಿ ಬಡಿದು ವಾಹನದಲ್ಲಿದ್ದವರನ್ನು ಕರೆದರು ಲಾಕ್ ಮಾಡಲಾದ ಕಾರಿನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಕಿಟಕಿ ಒಡೆಯುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಎಲ್‌ಪಿಜಿ ಕೊರತೆ ಬಗ್ಗೆ 5 ತಿಂಗಳ ಹಿಂದೆಯೇ ಭವಿಷ್ಯ ನುಡಿದಿದ್ದ ಜ್ಯೋತಿಷಿ

ಒಳಗಿದ್ದ ವ್ಯಕ್ತಿಗಳು ಪ್ರಜ್ಞಾಹೀನರಾಗಿರಬಹುದು ಅಥವಾ ಉಸಿರುಗಟ್ಟುವಿಕೆಯಿಂದ ಬಳಲುತ್ತಿರ ಬಹುದು ಎಂದು ಪೊಲೀಸರು ಕಾರಿನ ಗ್ಲಾಸ್ ಒಡೆಯುವ ಪ್ರಯತ್ನ ಮಾಡಿದ್ದಾರೆ‌. ಆದರೆ ಕಾರನ್ನು ತೆರೆದ ನಂತರ, ಒಳಗೆ ಮೂವರು ವ್ಯಕ್ತಿಗಳು ತೀವ್ರ ಮಾದಕ ವ್ಯಸನಿಯಾಗಿರುವುದು ತಿಳಿದು ಬಂದಿದೆ. ಕುಡಿದ ಅಮಲಿನಲ್ಲಿ ಅವರಿಗೆ ಪೊಲೀಸರು ಬಾಗಿಲು ಬಡಿದದ್ದು ಕೂಡ ತಿಳಿದಿರಲಿಲ್ಲ. ಈ ಬಗ್ಗೆ ಪತ್ತೆ ಹಚ್ಚಿದ ಪೊಲೀಸರು ಮುಂದಿನ ಕಾನೂನು ಕ್ರಮಕ್ಕಾಗಿ ಅವರನ್ನು ಹತ್ತಿರದ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ‌.