ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬಿಹಾರದ ನವರಾತ್ರಿ ಜಾಗರಣೆ ವೇಳೆ ವಾಗ್ವಾದ: ನರ್ತಕಿಗೆ ಹೊಡೆದು ಜನರತ್ತ ಪಿಸ್ತೂಲ್ ಗುರಿಯಿಟ್ಟ ಪೊಲೀಸ್ ಇನ್ಸ್‌ಪೆಕ್ಟರ್‌!

Viral Video: ಪೊಲೀಸ್ ಇನ್ಸ್‌ಪೆಕ್ಟರ್‌ ಸಾರ್ವಜನಿಕರ ಎದುರೇ ನರ್ತಕಿಗೆ ಕಪಾಳಮೋಕ್ಷ ಮಾಡಿದ ಘಟನೆ ಬಿಹಾರದಲ್ಲಿ ನಡೆದಿದೆ. ಉದ್ವಿಗ್ನತೆ ಹೆಚ್ಚಾದಾಗ ಅಧಿಕಾರಿ ಪಿಸ್ತೂಲ್ ಅನ್ನು ಜನಸಮೂಹದತ್ತ ತೋರಿಸಿದ್ದಾರೆ. ಈ ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಆಗ್ರಹಿಸಿದ್ದಾರೆ.

ಬಿಹಾರದ ಬೇಗುಸರಾಯ್ ಜಿಲ್ಲೆಯ ನವರಾತ್ರಿ ಕಾರ್ಯಕ್ರಮದ ವೇಳೆ ಪೊಲೀಸ್ ಇನ್ಸ್‌ಪೆಕ್ಟರ್‌ನಿಂದ ನರ್ತಕಿಗೆ ಕಪಾಳಮೋಕ್ಷ

ಪಟ್ನಾ, ಅ. 22: ದಸರಾ ಸಂಭ್ರಮದ ವೇಳೆ ಬಿಹಾರದಲ್ಲಿ ಪೊಲೀಸ್ ಸಿಬ್ಬಂದಿ ಹಾಗೂ ಸ್ಥಳೀಯರ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಇನ್ಸ್‌ಪೆಕ್ಟರ್‌ ಒಬ್ಬರು ನರ್ತಕಿಗೆ ಕಪಾಳಮೋಕ್ಷ ಮಾಡಿದ ಘಟನೆ ನಡೆದಿದೆ. ಉದ್ವಿಗ್ನತೆ ಹೆಚ್ಚಾದಾಗ ಅಧಿಕಾರಿ ತಮ್ಮ ಪಿಸ್ತೂಲ್ ಅನ್ನು ಜನಸಮೂಹದತ್ತ ತೋರಿಸಿದ್ದಾರೆ. ಈ ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತಿದ್ದಂತೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ನೆಟ್ಟಿಗರು ಆಗ್ರಹಿಸಿದ್ದಾರೆ.

ಬೇಗುಸರಾಯ್ ಜಿಲ್ಲೆಯ ಮುಫಸಿಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಪಂಗಾಚ್ಚಿ ಚೌಕ್ ಬಳಿಯ ವೈಷ್ಣವಿ ದುರ್ಗಾ ಪೂಜಾ ಪೆಂಡಲ್‌ನಲ್ಲಿ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ತಡರಾತ್ರಿಯಾದರೂ ಕಾರ್ಯಕ್ರಮ ಮುಂದುವರಿದ ಕಾರಣ ನಿಲ್ಲಿಸುವಂತೆ ಪೊಲೀಸರು ಆಯೋಜಕರಿಗೆ ಸೂಚನೆ ನೀಡಿದ್ದರು. ಈ ವೇಳೆ ತೀವ್ರ ಮಾತಿನ ಚಕಮಕಿಗಳು ನಡೆದಿವೆ.

ವಿಡಿಯೊ ನೋಡಿ:



ಜಾಗರಣೆ ಕಾರ್ಯಕ್ರಮವು ತಡರಾತ್ರಿಯವರೆಗೂ ನಡೆದಿದ್ದು ಈ ಭದ್ರತೆಯನ್ನು ನಿರ್ವಹಿಸಲು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ತಡವಾದ ಸಮಯವನ್ನು ಉಲ್ಲೇಖಿಸಿ ಇನ್ಸ್‌ಪೆಕ್ಟರ್ ಒಬ್ಬರು ಪ್ರದರ್ಶನವನ್ನು ನಿಲ್ಲಿಸುವಂತೆ ಸಂಘಟಕರನ್ನು ಕೇಳಿದ್ದರು.

ಗದ್ದೆಯಲ್ಲಿದ್ದ ಆನೆಗೆ ಟಾರ್ಚ್ ತೋರಿಸಿ ಕೆರಳಿಸಿದ ಜನ; ನುಗ್ಗಿ ದಾಳಿ ಮಾಡಿದ ಒಂಟಿ ಸಲಗ

ಅಧಿಕಾರಿ ವೇದಿಕೆಯ ಮೇಲೆ ಹೋಗಿ ಸಂಘಟಕರನ್ನು ಪ್ರಶ್ನಿಸಿದಾಗ ಪರಿಸ್ಥಿತಿ ಉಲ್ಬಣಗೊಂಡಿತು. ವೇದಿಕೆಯಲ್ಲಿದ್ದ ಕಲಾವಿದೆ ಡ್ಯಾನ್ಸ್‌ ನಿಲ್ಲಿಸಿ ಇಳಿಯಲು ಸಿದ್ಧಳಾಗಿದ್ದರೂ, ಇನ್ಸ್‌ಪೆಕ್ಟರ್ ಸಾರ್ವಜನಿಕವಾಗಿ ಕಪಾಳಮೋಕ್ಷ ಮಾಡಿದ್ದಾರೆ ಎಂದು ಎನ್ನುವ ಆರೋಪ ಕೇಳಿ ಬಂದಿದೆ. ಅಷ್ಟೇ ಅಲ್ಲದೆ ಗಲಾಟೆ ಹೆಚ್ಚಾದಾಗ ಇನ್‌ಸ್ಪೆಕ್ಟರ್ ಜನಸಮೂಹದತ್ತ ಪಿಸ್ತೂಲ್ ತೋರಿಸಿದ್ದಾರೆ. ಹಲವರು ಇನ್ಸ್‌ಪೆಕ್ಟರ್ ನಡೆಯನ್ನು ಪ್ರಶ್ನಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ದೃಶ್ಯ ವೈರಲ್ ಆಗುತ್ತಿದ್ದಂತೆ ಬೇಗುಸರಾಯ್ ಪೊಲೀಸ್ ವರಿಷ್ಠಾಧಿಕಾರಿ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.

​ತನಿಖಾ ವರದಿ ಬಂದ ಕೂಡಲೇ ತಪ್ಪು ಮಾಡಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಪಿ ಭರವಸೆ ನೀಡಿದ್ದಾರೆ. ಪೊಲೀಸ್ ನ ಅತಿರೇಕದ ವರ್ತನೆ ಬಗ್ಗೆ ನೆಟ್ಟಿಗರು ಕಿಡಿಕಾರಿದ್ದಾರೆ.