ಜೈಪುರ,ಸೆ. 29: ಇಂದು ದೇಶದಲ್ಲಿ ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ.ಇದೀಗ ದೇವಾಲಯ ದಲ್ಲಿ ಜೋರಾಗಿ ಭಕ್ತಿ ಗೀತೆ ಹಾಕಿದ್ದಾರೆ ಎನ್ನುವ ಕಾರಣಕ್ಕೆ ಅರ್ಚಕರ ಮೇಲೆ ಹಲ್ಲೆ ನಡೆಸಿರುವ ಅಘಾತಕಾರಿ ಘಟನೆಯೊಂದು (Viral News) ನಡೆದಿದೆ. ಜೈಪುರದ ನಿವಾರೂ ರಸ್ತೆಯ ಗಣೇಶ್ ನಗರ ಮೇನ್‌ನಲ್ಲಿರುವ ದೇವಾಲಯದೊಳಗೆ ಪೂಜೆ ನಡೆಯುತ್ತಿರುವ ವೇಳೆ ಅರ್ಚಕರಾದ ಪಂಡಿತ್ ರಾಮಕೃಷ್ಣ ಅವರ ಮೇಲೆ ಭೀಕರ ಹಲ್ಲೆ ನಡೆದಿದೆ.
ನಿವಾರು ರಸ್ತೆಯ ಗಣೇಶ ನಗರ ಮೈನ್‌ನಲ್ಲಿರುವ ಶಿವ ದೇವಾಲಯದಲ್ಲಿ ಶುಕ್ರವಾರ ಸಂಜೆ 7.45 ರ ಸುಮಾರಿಗೆ ಈ ಘಟನೆಯೂ ನಡೆದಿದೆ. ದೇವಾಲಯದಲ್ಲಿ ಜೋರಾಗಿ ಭಕ್ತಿಗೀತೆಗಳನ್ನು ಹಾಕಲಾಗುತ್ತಿತ್ತು. ಇದನ್ನು ನೆರೆಮನೆಯ ಯುವಕನೊಬ್ಬ ವಿರೋಧಿಸಿದ್ದು, ಈ ವೇಳೆ ನಡೆದ ವಾಗ್ವಾದ ದೈಹಿಕ ಹಲ್ಲೆಯವರೆಗೆ ಮಾರ್ಪಟ್ಟಿದೆ.
ವಿಡಿಯೋ ನೋಡಿ:
ಸಿಸಿಟಿವಿಯಲ್ಲಿ ಹಿಂಸಾತ್ಮಕ ದಾಳಿ ಸೆರೆಯಾಗಿದೆ. ವ್ಯಕ್ತಿಯೊಬ್ಬ ಅರ್ಚಕ ರಾಮಕೃಷ್ಣ ಅವರನ್ನು ಕೆಡವಿ ಪದೇ ಪದೇ ಒದ್ದು ಗುದ್ದು ತ್ತಿರುವುದನ್ನು ತೋರಿಸಲಾಗಿದೆ. ವ್ಯಕ್ತಿಯೊಬ್ಬ ಅರ್ಚಕರನ್ನು ಕೆಳಗೆ ತಳ್ಳಿ, ಅವರ ಬಟ್ಟೆ ಹರಿದು , ಮುಷ್ಟಿಯಿಂದ ಹೊಡೆ ಯುತ್ತಿರುವುದು ಕಂಡುಬಂದಿದೆ. ಕೂಡಲೇ ಅಲ್ಲಿದ್ದ ಮಹಿಳೆಯೊಬ್ಬರು ಹಾಗೂ ಇತರ ಸ್ಥಳೀಯರು ಮಧ್ಯಪ್ರವೇಶಿಸಿ ಅರ್ಚಕರನ್ನು ರಕ್ಷಿಸಿದ್ದಾರೆ.
Viral Video: ರೈಲು ಹಳಿಗೆ ಬಿದ್ದ ಮಕ್ಕಳನ್ನು ರಕ್ಷಿಸಲು ದೇಹವನ್ನೇ ರಕ್ಷಾ ಕವಚವಾಗಿಸಿದ ತಾಯಿ! ಹೃದಯಸ್ಪರ್ಶಿ ದೃಶ್ಯ
ಸದ್ಯ ಅರ್ಚಕರು ಸಲ್ಲಿಸಿದ ದೂರಿನ ಆಧಾರದ ಮೇಲೆ ಶಾಂತಿ ಕದಡುವ ಆರೋಪದ ಮೇಲೆ ಹರೀಶ್ ಮತ್ತು ದೇವಾಂಶ್ ಅವರನ್ನು ನಂತರ ಬಂಧಿಸಲಾಗಿದೆ .ಆರೋಪಿ ಕುಟುಂಬದ ಸದಸ್ಯರು ಸಲ್ಲಿಸಿದ ದೂರನ್ನು ಸಹ ಪೊಲೀಸರು ದಾಖಲಿಸಿ ದ್ದಾರೆ. ಪೊಲೀಸರು ವಿವಾದಕ್ಕೆ ಸಂಬಂಧಿಸಿದಂತೆ ಎರಡು ಕಡೆಯವರನ್ನು ಪರಿಶೀಲನೆ ನಡೆಸುತ್ತಿದ್ದಾರೆ.