ಶಿಲಾಂಗ್, ಆ. 20: ಮೇಘಾಲಯದ ಶಿಲ್ಲಾಂಗ್‌ನಲ್ಲಿ ಖಾಸಿ ವಿದ್ಯಾರ್ಥಿ ಒಕ್ಕೂಟ (ಕೆಎಸ್‌ಯು) ನಡೆಸಿದ ಕಪ್ಪು ಬಾವುಟದ ಬೈಕ್ ರ್‍ಯಾಲಿ ಹಿಂಸಾಚಾರಕ್ಕೆ ತಿರುಗಿದೆ. ಪ್ರತಿಭಟನಾಕಾರರು ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದು ಹಲವರು ಗಾಯಗೊಂಡಿದ್ದಾರೆ. ಈ ನಡುವೆ ಪ್ರವಾಸಿಗರ ವಾಹನವೊಂದರ ಮೇಲೆ ಪ್ರತಿಭಟನಾಕಾರರು ದಾಳಿ ನಡೆಸಿದ್ದು ಮಗುವೊಂದು ಗಾಯಗೊಂಡಿದೆ. ಈ ಆಘಾತಕಾರಿ ಘಟನೆಯ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು (Viral News) ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.
ಈ ಭುಗಿಲೆದ್ದ ಹಿಂಸಾಚಾರಕ್ಕೆ ಕಾರ್‌ನಲ್ಲಿದ್ದ ಪ್ರವಾಸಿ ಕುಟುಂಬವೊಂದು ದಾಳಿಗೆ ಸಿಲುಕಿದೆ. ಪ್ರತಿಭಟನಾಕಾರರು ವಾಹನದ ಕಿಟಕಿ ಗಾಜುಗಳನ್ನು ಒಡೆದು ಗಂಭೀರ ದಾಳಿ ಮಾಡಿದ್ದಾರೆ. ವಾಹನದ ಕಿಟಕಿಗಳು ಸಂಪೂರ್ಣವಾಗಿ ಪುಡಿಪುಡಿಯಾಗಿದೆ.
ವಿಡಿಯೊ ನೋಡಿ:
ಅಸ್ಸಾಂ ನೋಂದಣಿಯ ಪ್ರವಾಸಿಗರ ವಾಹನವೊಂದರ ಮೇಲೆ ಪ್ರತಿಭಟನಾಕಾರರು ದಾಳಿ ಮಾಡಿದ್ದಾರೆ. ಕಾರಿನಲ್ಲಿದ್ದ ಕುಟುಂಬವು ತೀವ್ರ ಭಯಗೊಂಡಿದ್ದು ಮಗುವೊಂದಕ್ಕೆ ಗಾಜಿನ ಚೂರುಗಳು ತಗುಲಿ ಗಾಯಗಳಾಗಿವೆ. ಚಾಲಕ ತಕ್ಷಣವೇ ಚಾಣಕ್ಷತನದಿಂದ ಕಾರ್ ಚಲಾಯಿಸಿ ಕುಟುಂಬವನ್ನು ಭಾರಿ ಅಪಾಯದಿಂದ ಪಾರು ಮಾಡಿದ್ದಾನೆ
ʼʼಇಡೀ ಕಾರು ಜಖಂಗೊಂಡಿದ್ದು ನಾವೆಲ್ಲರೂ ಪ್ರಯಾಣಿಸುತ್ತಿದ್ದೆವು. ಮೇಘಾಲಯದಲ್ಲಿ ಪ್ರತಿಭಟನೆ ನಡೆಯುತ್ತಿದೆ ಎಂದು ಗೊತ್ತಿರಲಿಲ್ಲ. ಇದ್ದಕ್ಕಿದ್ದಂತೆ ಯಾವುದೇ ಕಾರಣವಿಲ್ಲದೆ ಚಲಿಸುತ್ತಿದ್ದ ಕಾರಿನ ಮೇಲೆ ದಾಳಿ ಮಾಡಿದ್ದಾರೆʼʼ ಎಂದು ಪ್ರವಾಸಿಗರು ಹೇಳಿದ್ದಾರೆ. ಕಾರಿನೊಳಗೆ ಮಗುವಿದ್ದರೂ ಕರುಣೆ ತೋರದೆ ಗಾಜುಗಳನ್ನು ಒಡೆದು ಹಾಕಿದ್ದಾರೆ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.
ಆಗ್ರಾದಲ್ಲಿ ಫ್ರಿಜ್ ಒಳಗೆ ಮೂಡಿ ಬಂದ ಹಿಮ ಶಿವಲಿಂಗ
ಶಿಲ್ಲಾಂಗ್‌ನಾದ್ಯಂತ ಕೆಎಸ್‌ಯು ಆಯೋಜಿಸಿದ್ದ ಕಪ್ಪು ಧ್ವಜ ರ್‍ಯಾಲಿ ಸಂದರ್ಭದಲ್ಲಿ ಹಿಂಸಾಚಾರದ ನಡುವೆ ಈ ಘಟನೆ ಸಂಭವಿಸಿದೆ. ಹಲವು ವಾಹನಗಳನ್ನು ಧ್ವಂಸ ಮಾಡಲಾಗಿದೆ, ಜನರ ಮೇಲೆ ಹಲ್ಲೆ ಮಾಡಲಾಗಿದೆ ಮತ್ತು ಸರ್ಕಾರಿ ವಾಹನಕ್ಕೆ ಬೆಂಕಿ ಹಚ್ಚಲಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೊ ಪ್ರತಿಭಟನಾಕಾರರು ವಾಹನಗಳ ವಿಂಡ್ ಷೀಲ್ಡ್‌ಗಳನ್ನು ರಾಡ್ ಬಳಸಿ ಒಡೆದು ಹಾಕುತ್ತಿರುವುದನ್ನು ತೋರಿಸುತ್ತದೆ.
ಇನ್ನು ಆರ್‌ಆರ್ ಕಾಲೋನಿಯಲ್ಲಿ, ಸ್ವಾಮಿ ವಿವೇಕಾನಂದ ಪ್ರತಿಮೆಯ ಸುತ್ತಲಿನ ಗಾಜಿನ ಆವರಣವನ್ನು ಧ್ವಂಸ ಮಾಡಲಾಗಿದೆ. ಬೇಡಿಕೆಗಳನ್ನು ಪರಿಹರಿಸದಿದ್ದರೆ ತನ್ನ ಆಂದೋಲನವನ್ನು ತೀವ್ರಗೊಳಿಸುವುದಾಗಿ ಸಂಘಟನೆಯು ಸರ್ಕಾರಕ್ಕೆ ಮತ್ತೆ ಎಚ್ಚರಿಕೆ ನೀಡಿದೆ.