ಟೋಕಿಯೊ, ಮಾ. 19: ಜಪಾನ್‌ನ ಇಚಿಕಾವಾ ಸಿಟಿ ಮೃಗಾಲಯದ ಮುದ್ದಾದ ಕೋತಿ ಮರಿ ಪಂಚ್ (Punch) ಜಗತ್ತಿನಾದ್ಯಂತ ಕೆಲವು ದಿನಗಳಿಂದ ಭಾರಿ ಸುದ್ದಿಯಲ್ಲಿದೆ. ಗುಂಪಿನಿಂದ, ತಾಯಿಯಿಂದ ದೂರವಾಗಿದ್ದ ಈ ಕೋತಿ ಮರಿಯ ಬಗ್ಗೆ ಅನೇಕರು ಮರುಕ ವ್ಯಕ್ತಪಡಿಸಿದ್ದರು. ಇದೀಗ ಪಂಚ್‌ಗೆ ಗರ್ಲ್ ಫ್ರೆಂಡ್ ಸಿಕ್ಕಿದ್ದಾಳೆ. ಈ ಜೋಡಿಯ ವಿಡಿಯೊ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ.
ಹೌದು, ಹುಟ್ಟಿದ ನಂತರ ತಾಯಿಯಿಂದ ತಿರಸ್ಕರಿಸಲ್ಪಟ್ಟ ಈ ಮಂಗವು, ಆಟಿಕೆ ಗೊಂಬೆಯೊಂದಿಗೆ ಕಾಲ ಕಳೆಯುತ್ತದೆ. ಅದನ್ನೇ ತನ್ನ ತಾಯಿಯ ರೀತಿ ತಬ್ಬಿಕೊಳ್ಳುತ್ತದೆ. ಈ ದೃಶ್ಯವು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಎಲ್ಲರ ಕಣ್ಣಲ್ಲೂ ನೀರು ತರಿಸಿತ್ತು. ಇದೀಗ ಮಕಾಕ್ ಮೊಮೊ-ಚಾನ್ ಎಂಬ ಹೆಣ್ಣು ಕೋತಿಯನ್ನು ಭೇಟಿಯಾದಾಗ ಪಂಚ್‌ನ ಜೀವನಕ್ಕೆ ತಿರುವು ಸಿಕ್ಕಿದೆ. ಇವರಿಬ್ಬರು ಈಗ ಜತೆಯಾಗಿಯಾಗಿ ಜತೆಯಲ್ಲಿ ಓಡಾಡುತ್ತಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ವಿಡಿಯೊದಲ್ಲಿ, ಈ ಜೋಡಿಯು ಮುದ್ದಾಡುವುದು, ಆಟವಾಡುವುದು ಮತ್ತು ಚುಂಬನಗಳನ್ನು ಹಂಚಿಕೊಳ್ಳುವುದು ಕಂಡು ಬಂದಿದೆ.
ವಿಡಿಯೊ ವೀಕ್ಷಿಸಿ:
ಪಂಚ್ ಮತ್ತು ಮುದ್ದಾದ ಹೆಣ್ಣು ಕೋತಿಯ ವಿಡಿಯೊ ವೈರಲ್ ಆಗುತ್ತಿದ್ದಂತೆ ಎಲ್ಲರ ಹೃದಯವನ್ನು ತಟ್ಟಿದೆ. ಮೊಮೊ-ಚಾನ್‌ಗೆ ಪಂಚ್‌ನ ಗೆಳತಿ ಎಂಬ ಬಿರುದು ಸಿಕ್ಕಿದೆ. ಇತ್ತೀಚೆಗೆ, ಪಂಚ್ ಮರಿ ಮಂಗವು ಮೋ ಎಂಬ ಕೋತಿಯನ್ನು ತನ್ನ ಗೆಳತಿಯನ್ನಾಗಿ ಮಾಡಿಕೊಂಡಿದೆ. ಇವರಿಬ್ಬರು ತಮ್ಮ ಎಲ್ಲ ಸಮಯವನ್ನು ಒಟ್ಟಿಗೆ ಕಳೆದಿದ್ದಾರೆ. ಮೋ ಪಂಚ್‌ಗಿಂತ ಸ್ವಲ್ಪ ದೊಡ್ಡವಳು. ಆದರೆ ಅವರು ಸಂಪೂರ್ಣವಾಗಿ ಬೇರ್ಪಡಿಸಲಾಗದವರು ಎಂದು ಬಿಯಾಂಡ್ ದಿ ವೈಲ್ಡ್‌ಲೈಫ್ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಹಂಚಿಕೊಂಡ ವಿಡಿಯೊಗೆ ಶೀರ್ಷಿಕೆ ನೀಡಲಾಗಿದೆ.
ಅಂದಹಾಗೆ, ಪಂಚ್‌ನ ಒಡನಾಟದ ಹಾದಿ ಸುಲಭವಾಗಿರಲಿಲ್ಲ. ಅವನು ಪ್ರಬಲ ಕೋತಿಗಳಿಂದ ತಿರಸ್ಕಾರ, ಬೆದರಿಕೆ ಇತ್ಯಾದಿಯಿಂದ ತುಂಬಾ ಒದ್ದಾಡಿದ್ದ. ಆದರೆ ಸಮಯ ಮತ್ತು ತಾಳ್ಮೆಯಿಂದ ಸಂಬಂಧಗಳನ್ನು ಬೆಳೆಸಲು ಕಲಿತನು. ಆಟಿಕೆ ಇದ್ದರೂ ಸಹ ಇದೀಗ ಪಂಚ್‌ನ ಗಮನವು ಅವನ ಹೊಸ ಸ್ನೇಹಿತೆ ಮೊಮೊ-ಚಾನ್ ಕಡೆಗೆ ತಿರುಗಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ವಿಡಿಯೊಗೆ ತರಹೇವಾರಿ ಪ್ರತಿಕ್ರಿಯೆ ನೀಡಿದ್ದಾರೆ.
ವಿಶ್ವವನ್ನೇ ಭಾವುಕವಾಗಿಸಿದ ಜಪಾನ್‌ನ ಕೋತಿ ʼಪಂಚ್ʼ ಈಗ ಸಾರ್ವಜನಿಕ ಜಾಗೃತಿಯ ರಾಯಭಾರಿ
ಪಂಚ್‌ಗೆ ಗೆಳತಿ ಸಿಕ್ಕಳು. ಆದರೆ ತಾನಿನ್ನೂ ಒಂಟಿಯಾಗಿದ್ದೀನಿ ಎಂದು ನೆಟ್ಟಿಗರೊಬ್ಬರು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. ಅವನು ಪ್ರಸಿದ್ಧನಾಗಿರುವುದರಿಂದ ಮಾತ್ರ ಅವಳು ಅವನೊಂದಿಗಿದ್ದಾಳೆ ಎಂದು ಮತ್ತೊಬ್ಬರು ಹಾಸ್ಯ ಚಟಾಕಿ ಹಾರಿಸಿದ್ದಾರೆ.
ಪ್ರವಾಸಿಗರಿಗೆ ಕೈ ಎತ್ತಿ ಬೈ- ಬೈ ಹೇಳಿದ್ದ ಕ್ಯೂಟ್ ಪಂಚ್
ಇತ್ತೀಚೆಗೆ ಪಂಚ್ ಪ್ರವಾಸಿಗರಿಗೆ ಕ್ಯೂಟ್ ಆಗಿ ಬೈ- ಬೈ ಹೇಳುವ ಮೂಲಕ ಮುಖದಲ್ಲೊಂದು ನಗು ಮೂಡಿಸಿತ್ತು. ಅದಾದ ಬಳಿಕ ಪಂಚ್ ಇಡೀ ವಿಶ್ವದ ಗಮನ ಸೆಳೆಯುತ್ತಿದೆ. ಈ ಹಿಂದೆ ಕಣ್ಣೀರು ಹಾಕಿಸಿದ್ದ ಈ ಜೀವಿ, ತನ್ನ ಮುದ್ದಾದ 'ಟಾಟಾ' ಮಾಡುವ ಸನ್ನೆಯ ಮೂಲಕ ಗಮನ ಸೆಳೆದಿತ್ತು. ಮೃಗಾಲಯದಲ್ಲಿ ಇತರ ಕೋತಿಗಳೊಂದಿಗೆ ಹೊಂದಿಕೊಳ್ಳಲು ಪಂಚ್‌ಗೆ ಕಷ್ಟವಾಗಿತ್ತು. ಮರಿ ಮಂಗವು ಹುಟ್ಟಿದ ಸ್ವಲ್ಪ ದಿನದಲ್ಲೇ ಅದರ ತಾಯಿಯಿಂದ ಬೇರ್ಪಟ್ಟಿತ್ತು, ಇದರಿಂದಾಗಿ ಆರೈಕೆದಾರರು ಮಧ್ಯಪ್ರವೇಶಿಸಿ ಅದನ್ನು ಬೆಳೆಸಬೇಕಾಯಿತು.