ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಪುಟಾಣಿ ಕೋತಿ ಪಂಚ್‌ನ ಇನ್ನೊಂದು ವಿಡಿಯೊ ವೈರಲ್: ಪ್ರವಾಸಿಗರಿಗೆ ಕೈ ಎತ್ತಿ ಬೈ- ಬೈ ಹೇಳಿದ ಕ್ಯೂಟ್ ದೃಶ್ಯ!

Viral Video: ಪಂಚ್ ಈಗ ಇಡೀ ವಿಶ್ವದ ಗಮನ ಸೆಳೆಯುತ್ತಿದೆ. ಈ ಹಿಂದೆ ಕಣ್ಣೀರು ಹಾಕಿಸಿದ್ದ ಈ ಜೀವಿ, ಈಗ ತನ್ನ ಮುದ್ದಾದ 'ಟಾಟಾ' ಮಾಡುವ ಸನ್ನೆಯ ಮೂಲಕ ಗಮನ ಸೆಳೆದಿದೆ. ಹುಟ್ಟಿನಿಂದಲೇ ತಾಯಿ ಪ್ರೀತಿ ಕಳೆದುಕೊಂಡಿದ್ದ ಕೋತಿ ಗೊಂಬೆಯನ್ನೇ ತಾಯಿ ಎಂದು ಭಾವಿಸಿ ಜೀವಿಸುತ್ತಿತ್ತು. ಈ ಭಾರೀ ಪಂಚ್ ಮತ್ತೊಮ್ಮೆ ನೆಟ್ಟಿಗರ ಮನ ಗೆದ್ದಿದೆ. ಈಗ ಅದು ಸಂದರ್ಶಕರಿಗೆ ಕ್ಯೂಟ್ ಆಗಿ ಬೈ- ಬೈ ಹೇಳುವ ಮೂಲಕ ಮುಖದಲ್ಲೊಂದು ನಗು ಮುಡಿಸುವಂತೆ ಮಾಡಿದೆ.

ಪ್ರವಾಸಿಗರಿಗೆ ಬೈ- ಬೈ ಹೇಳಿದ ಪಂಚ್; ಕ್ಯೂಟ್ ವಿಡಿಯೊ ನೋಡಿ

ಪ್ರವಾಸಿಗರಿಗೆ ಬೈ- ಬೈ ಹೇಳಿದ ಪಂಚ್ -

Profile
Pushpa Kumari Mar 5, 2026 12:27 PM

ಟೋಕಿಯೋ,ಮಾ.5: ಜಪಾನ್ ನ ಚಿಬಾದಲ್ಲಿರುವ ಇಚಿಕಾವಾ ಮೃಗಾಲಯದಲ್ಲಿನ ಪಂಚ್ ಕೋತಿಯ ವಿಡಿಯೋ ವ್ಯಾಪಕ ವೈರಲ್ (Viral Video) ಆಗಿತ್ತು. ಹುಟ್ಟಿನಿಂದಲೇ ತಾಯಿ ಪ್ರೀತಿ ಕಳೆದುಕೊಂಡಿದ್ದ ಕೋತಿ ಗೊಂಬೆಯನ್ನೇ ತಾಯಿ ಎಂದು ಭಾವಿಸಿ ಜೀವಿಸುತ್ತಿತ್ತು.ಈ ಭಾರೀ ಪಂಚ್ ಮತ್ತೊಮ್ಮೆ ನೆಟ್ಟಿಗರ ಮನ ಗೆದ್ದಿದೆ. ಈಗ ಅದು ಸಂದರ್ಶಕರಿಗೆ ಕ್ಯೂಟ್ ಆಗಿ ಬೈ- ಬೈ ಹೇಳುವ ಮೂಲಕ ಮುಖದಲ್ಲೊಂದು ನಗು ಮುಡಿಸುವಂತೆ ಮಾಡಿದೆ.

ಪಂಚ್ ಈಗ ಇಡೀ ವಿಶ್ವದ ಗಮನ ಸೆಳೆಯುತ್ತಿದೆ. ಈ ಹಿಂದೆ ಕಣ್ಣೀರು ಹಾಕಿಸಿದ್ದ ಈ ಜೀವಿ, ಈಗ ತನ್ನ ಮುದ್ದಾದ 'ಟಾಟಾ' ಮಾಡುವ ಸನ್ನೆಯ ಮೂಲಕ ಗಮನ ಸೆಳೆದಿದೆ. ಮೃಗಾಲಯದಲ್ಲಿ ಇತರ ಕೋತಿಗಳೊಂದಿಗೆ ಹೊಂದಿಕೊಳ್ಳಲು ಪಂಚ್ ಗೆ ಕಷ್ಟವಾಗಿತ್ತು. ಮರಿ ಮಂಗವು ಹುಟ್ಟಿದ ಸ್ವಲ್ಪ ದಿನದಲ್ಲೇ ಅದರ ತಾಯಿಯಿಂದ ಬೇರ್ಪಟ್ಟಿತ್ತು, ಇದರಿಂದಾಗಿ ಆರೈಕೆದಾರರು ಮಧ್ಯಪ್ರವೇಶಿಸಿ ಅದನ್ನು ಬೆಳೆಸಬೇಕಾಯಿತು.

ವಿಡಿಯೋ ನೋಡಿ:

ಆ ಸಮಯದಲ್ಲಿ ಒಂಟಿತನ ಮರೆಯಲು ಪಂಚ್ ಗೊಂಬೆಯನ್ನೇ ಅಪ್ಪಿಕೊಂಡು ಸಮಯ ಕಳೆಯುತ್ತಿತ್ತು. ಇದರ ವೈರಲ್ ಫೋಟೋ, ವಿಡಿಯೊ ನೋಡಿ ಅನೇಕರು ಬೇಸರ ವ್ಯಕ್ತ ಪಡಿಸಿದ್ದರು. ಆದರೆ ಈಗ ಪಂಚ್ ಹೊಂದಿಕೊಳ್ಳುಲು ಆರಂಭಿಸಿದೆ. ಇತರ ಪ್ರಾಣಿಗಳ ಜೊತೆ ಒಡನಾಟ, ಪ್ರವಾಸಿಗರ ಜೊತೆ ಸನ್ನೆಗಳ ಮೂಲಕ ಪ್ರತಿಕ್ರಿಯೆ ನೀಡುತ್ತಿದ್ದಾನೆ‌

Viral Video: 282 ಅಡಿ ಎತ್ತರದ ಟವರ್ ಮೇಲೆ ಅಪಾಯಕಾರಿ ಸ್ಟಂಟ್; ಯುವಕ ಪೊಲೀಸ್ ವಶಕ್ಕೆ

ಈಗ, ಪಂಚ್ ಹೆಚ್ಚು ಆತ್ಮವಿಶ್ವಾಸ ಮತ್ತು ಲವಲವಿಕೆಯಿಂದ ಕಾಣಿಸಿಕೊಳ್ಳುತ್ತದೆ. ಇತ್ತೀಚೆಗೆ ಹಂಚಿಕೊಂಡ ವೀಡಿಯೊದಲ್ಲಿ ಪಂಚ್ ತನ್ನ ಕೈಯನ್ನು ಎತ್ತಿ ತನ್ನನ್ನು ನೋಡುತ್ತಿರುವ ಜನರ ಕಡೆಗೆ ಬೀಸುತ್ತಿದ್ದಾನೆ. ಪ್ರವಾಸಿಗರಿಗೆ ತನ್ನ ಪುಟ್ಟ ಕೈಯನ್ನು ಎತ್ತಿ 'ಬೈ-ಬೈ' ಹೇಳುವಂತೆ ಸನ್ನೆ ಮಾಡುತ್ತಿದ್ದಾನೆ.

ಈ ವೀಡಿಯೊ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದ್ದು ತ್ವರಿತವಾಗಿ ಆಕರ್ಷಣೆಯನ್ನು ಗಳಿಸಿದೆ. ಇದು ಒಂದು ದಿನದೊಳಗೆ 408,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ದಾಟಿದೆ. ಸಾಮಾಜಿಕ ಜಾಲತಾಣ ಗಳಲ್ಲಿ ಜನರು ಪಂಚ್‌ನ ಧೈರ್ಯವನ್ನು ಕೊಂಡಾಡಿದ್ದು ಒಂಟಿಯಾಗಿದ್ದ ಪಂಚ್ ಈಗ ಎಷ್ಟು ಬೆಳೆದಿದ್ದಾನೆ ನೋಡಿ ಎಂದು ಹೆಮ್ಮೆಯ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.