ನವದೆಹಲಿ, ಫೆ. 3: ಕೆಲವೊಮ್ಮೆ ತಪ್ಪು ಮಾಡಿದಾಗ ಕರ್ಮ ರಿಟರ್ನ್ಸ್ ಅನ್ನೋ ಪದವನ್ನು ಹೆಚ್ಚಿನವರು ಬಳಸುತ್ತಾರೆ. ಈ ಮಾತು ನಿಜ ಎನ್ನುವುದಕ್ಕೆ ಈ ಘಟನೆಯೊಂದು ಸಾಕ್ಷಿ. ಕಳ್ಳನೊಬ್ಬ ಬಸ್‌ನಲ್ಲಿದ್ದ ಪ್ರಯಾಣಿಕನ ಮೊಬೈಲ್ ಕದಿಯಲು ಮುಂದಾಗಿದ್ದಾನೆ. ಚಲಿಸುವ ಬಸ್‌ನ ಕಿಟಕಿಯಲ್ಲೇ ಸಿಲುಕಿಕೊಂಡು, ಸುಮಾರು ದೂರದವರೆಗೆ ನೇತಾಡಿದ್ದಾನೆ. ಬಸ್ ಚಲಿಸುತ್ತಿರುವಾಗ ಕಿಟಕಿಯ ಮೂಲಕ ಪ್ರಯಾಣಿಕನ ಮೊಬೈಲ್ ಫೋನ್ ಕಸಿದುಕೊಳ್ಳಲು ಯತ್ನಿಸಿದ್ದಾನೆ. ಆದರೆ ಚಲಿಸುವ ಬಸ್ಸಿನ ಹೊರಗೆ ನೆತಾಡುತ್ತಾ ಪ್ರಯಾಣಿಕರ ಕೈಗೆ ಕಳ್ಳ ಸಿಕ್ಕಿಬಿದ್ದಿದ್ದಾನೆ. ಸದ್ಯ ಇದರ ವಿಡಿಯೊ ವೈರಲ್ (Viral Video) ಆಗಿದ್ದು, ತಕ್ಷಣದ ನ್ಯಾಯ ಸಿಕ್ಕಿದೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ
ಬಸ್ ಚಲಿಸುತ್ತಿರುವಾಗ ಆ ವ್ಯಕ್ತಿ ಕಿಟಕಿಯ ಮೂಲಕ ಪ್ರಯಾಣಿಕನ ಮೊಬೈಲ್ ಫೋನ್ ಕಸಿದುಕೊಳ್ಳಲು ಪ್ರಯತ್ನಿಸಿದ್ದಾನೆ. ಇದರಿಂದ ಅವನು ಸುಲಭವಾಗಿ ತಪ್ಪಿಸಿಕೊಳ್ಳಬಹುದು ಎಂದು ಭಾವಿಸಿದ್ದನು. ಆದರೆ ಅವನ ಪ್ಲಾನ್ ತಕ್ಷಣವೇ ಹಿಮ್ಮೆಟ್ಟಿದೆ. ಬಸ್ಸಿನೊಳಗಿನ ಪ್ರಯಾಣಿಕರು ವೇಗವಾಗಿ ಪ್ರತಿಕ್ರಿಯಿಸಿ ಅವನ ಕೈಗಳನ್ನು ಕಿಟಕಿಯಿಂದಲೇ ಹಿಡಿದುಕೊಂಡಿದ್ದಾರೆ.
ವಿಡಿಯೊ ನೋಡಿ:
ಬಸ್ ಚಲಿಸುತ್ತಿದ್ದರೂ ಪ್ರಯಾಣಿಕರು ಅವನನ್ನು ಬಿಡದೆ ಹಿಡಿದುಕೊಂಡಿದ್ದರಿಂದ, ಆತ ಬಸ್ಸಿನ ಹೊರಭಾಗದಲ್ಲಿ ಕಾಲುಗಳನ್ನು ಆಡಿಸುತ್ತಾ ಹರಸಾಹಸ ಪಡಬೇಕಾಯಿತು. ಬಸ್‌ನ ಹೊರಗೆ ಕೂಡ ಜನರು ಜಮಾಯಿಸಿದ್ದು, ಕೆಲವರು ಕಳ್ಳನು ಜಾರಿ ಬೀಳದಂತೆ ತಡೆಯಲು ಅವನ ಕಾಲುಗಳನ್ನು ಹಿಡಿಯಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು.
ಬಾಂಗ್ಲಾದೇಶದ ಶಾಂತಿಗಾಗಿ ಭಾರತ ತುಂಡು ತುಂಡಾಗಬೇಕು; ವಿವಾದ ಹೊತ್ತಿಸಿದ ಮಾಜಿ ಸೇನಾ ಜನರಲ್
ಈ ವಿಡಿಯೊ ವೈರಲ್ ಆಗಿದ್ದು, ಜನರು ನಾನಾ ರೀತಿಯ ಕಮೆಂಟ್ ಮಾಡುತ್ತಿದ್ದಾರೆ. ನೆಟ್ಟಿಗರೊಬ್ಬರು "ತಕ್ಷಣ ನ್ಯಾಯ, FIR ಇಲ್ಲ, ನ್ಯಾಯಾಲಯಗಳಿಲ್ಲ" ಎಂದು ಬರೆದಿದ್ದಾರೆ. ಮತ್ತೊಬ್ಬರು, ʼʼಇಂತವರಿಗೆ ಇದು ಸರಿಯಾದ ಶಿಕ್ಷೆʼʼ ಎಂದು ಬರೆದುಕೊಂಡಿದ್ದಾರೆ. ಇತ್ತೀಚೆಗೆ ರಾಜಸ್ಥಾನದ ಕೋಟಾದಲ್ಲೂ ಇದೇ ರೀತಿಯ ಘಟನೆ ವರದಿಯಾಗಿತ್ತು. ಅಲ್ಲಿ ಆರೋಪಿಯು ಕಳವು ಮಾಡಲು ಮನೆಗೆ ಪ್ರವೇಶಿಸಲು ಪ್ರಯತ್ನಿಸುವಾಗ ಅಡುಗೆ ಮನೆಯ ಎಕ್ಸಾಸ್ಟ್ ಫ್ಯಾನ್ ಇರುವ ರಂಧ್ರದಲ್ಲಿ ಸಿಲುಕಿಕೊಂಡು ಪರದಾಡಿದ ಘಟನೆ ನಡೆದಿದೆ.