ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅಬ್ಬಬ್ಬಾ ಲಾಟರಿ: ಬಡ ಮಹಿಳೆಗೆ ಒಲಿದ 1 ಕೋಟಿ ರೂಪಾಯಿ; 7 ರೂಪಾಯಿಗೆ ಟಿಕೆಟ್‌ ಖರೀದಿಸಿದ ಪಂಜಾಬ್ ಕುಟುಂಬದ ಭವಿಷ್ಯವೇ ಬದಲಾಯ್ತು

Viral News: ಮಕ್ಕಳಿಗೆ ಬಟ್ಟೆ ಖರೀದಿಸಲು ಮಾರುಕಟ್ಟೆಗೆ ತೆರಳಿದ್ದ ಬಡ ಮಹಿಳೆಯೊಬ್ಬರಿಗೆ ಅದೃಷ್ಟದ ಬಾಗಿಲು ತೆರೆದಿದೆ. ಕೇವಲ ಏಳು ರೂಪಾಯಿ ಲಾಟರಿ ಟಿಕೆಟ್‌ಗೆ 1 ಕೋಟಿ ರೂಪಾಯಿ ಜ್ಯಾಕ್‌ಪಾಟ್ ಹೊಡೆದಿದೆ. ಈ ಘಟನೆಯೂ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಇಂತವರಿಗೆ ಲಾಟರಿ ಹೊಡೆಯ ಬೇಕು, ನಿಜಕ್ಕೂ ದೇವರು ಕಣ್ಣು ತೆರೆದಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಸಾಂದರ್ಭಿಕ ಚಿತ್ರ. ಒಳಚಿತ್ರದಲ್ಲಿ ಬಿಮ್ಲಾ ದೇವಿ

ಚಂಡೀಗಢ, ಅ. 25: ಕೆಲವೊಮ್ಮೆ ಅದೃಷ್ಟ ಅನ್ನೋದು ಯಾವಾಗ ನಮ್ಮ ಕೈ ಹಿಡಿಯುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಇದಕ್ಕೆ ಪೂರಕವಾಗಿ ಮಕ್ಕಳಿಗೆ ಬಟ್ಟೆ ಖರೀದಿಸಲು ಮಾರುಕಟ್ಟೆಗೆ ತೆರಳಿದ್ದ ಬಡ ಮಹಿಳೆಯೊಬ್ಬರಿಗೆ ಅದೃಷ್ಟದ ಬಾಗಿಲು ತೆರೆದಿದೆ. ಕೇವಲ ಏಳು ರೂಪಾಯಿ ಲಾಟರಿ ಟಿಕೆಟ್‌ಗೆ 1 ಕೋಟಿ ರೂಪಾಯಿ ಜ್ಯಾಕ್‌ಪಾಟ್ ಹೊಡೆದಿದೆ. ಈ ಘಟನೆ ವೈರಲ್ (Viral News) ಆಗುತ್ತಿದ್ದಂತೆ ನೆಟ್ಟಿಗರು ಇಂತವರಿಗೆ ಲಾಟರಿ ಹೊಡೆಯ ಬೇಕು, ನಿಜಕ್ಕೂ ದೇವರು ಕಣ್ಣು ತೆರೆದಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಪಂಜಾಬ್‌ನ ಫರೀದ್‌ಕೋಟ್ ಜಿಲ್ಲೆಯ ಕೊಟ್ಕಾಪುರ ನಿವಾಸಿ ಬಿಮ್ಲಾ ದೇವಿ ಈ ಬಂಪರ್ ಬಹುಮಾನ ಗೆದ್ದ ಮಹಿಳೆ. ಅವರು ತಮ್ಮ ಮಕ್ಕಳಿಗಾಗಿ ಶಾಪಿಂಗ್ ಮಾಡುತ್ತಿದ್ದಾಗ ಕೇವಲ 7 ರೂಪಾಯಿ ನೀಡಿ ಲಾಟರಿ ಟಿಕೆಟ್ ಖರೀದಿಸಿದ್ದರು.‌ ಅದರಲ್ಲಿ ಅವರಿಗೆ 1 ಕೋಟಿ ರೂಪಾಯಿ ಬಹುಮಾನ ಲಭಿಸಿದೆ.

ಸಾರ್ವಜನಿಕರ ಮುಂದೆಯೇ ನದಿಗೆ ಕಸ ಎಸೆದ ದಂಪತಿ

ಅವರ ಪತಿ ದಿನಗೂಲಿ ನೌಕರ. ಈ ಅನಿರೀಕ್ಷಿತ ಅದೃಷ್ಟವನ್ನು ಕುಟುಂಬವು ಭಾಂಗ್ರಾ ನೃತ್ಯ ಮಾಡುವ ಮೂಲಕ ಮತ್ತು ಸಿಹಿತಿಂಡಿಗಳನ್ನು ಹಂಚಿಕೊಳ್ಳುವ ಮೂಲಕ ಸಂಭ್ರಮಿಸಿದೆ. ತಮ್ಮ ಕುಟುಂಬದ ಆರ್ಥಿಕತೆಯನ್ನು ಮತ್ತಷ್ಟು ಭದ್ರಗೊಳಿಸಲು ಹಾಗೂ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಲು ಸಣ್ಣ ಉದ್ಯಮವೊಂದನ್ನು ಪ್ರಾರಂಭಿಸುವ ಬಗ್ಗೆ ಅವರು ಪ್ಲ್ಯಾನ್‌ ಹಾಕಿಕೊಂಡಿದ್ದಾರೆ.

ಕೊಟ್ಕಾಪುರದ ರೈಲ್ವೆ ರಸ್ತೆಯ ಹತ್ತಿರ ಇರುವ 'ಸ್ಟಾರ್ ಲಾಟರಿ ಸ್ಟಾಲ್'ನಿಂದ ಬಿಮ್ಲಾ ದೇವಿ 7 ರೂಪಾಯಿ ಬೆಲೆಯ ಲಾಟರಿ ಟಿಕೆಟ್ ಆಕಸ್ಮಿಕವಾಗಿ ಖರೀದಿಸಿದ್ದರು. ಈ ಲಾಟರಿಯಲ್ಲಿ ತಾವೇ 1 ಕೋಟಿ ರೂಪಾಯಿ ಬಹುಮಾನ ಗೆಲ್ಲುತ್ತೇವೆ ಎಂಬ ಕಲ್ಪನೆಯೂ ಅವರಿಗಿರಲಿಲ್ಲ. ಈ ಸುದ್ದಿ ತಿಳಿಯುತ್ತಿದ್ದಂತೆಯೇ ಬಿಮ್ಲಾ ಮತ್ತು ಅವರ ಕುಟುಂಬದವರು ತಾವು ಗೆದ್ದಿದ್ದನ್ನು ಖಚಿತಪಡಿಸಿಕೊಳ್ಳಲು ಅಂಗಡಿಯತ್ತ ಧಾವಿಸಿದರು.

ಅಲ್ಪ ಆದಾಯದಲ್ಲಿ ಸಂಸಾರ ನಡೆಸುತ್ತಿದ್ದ ಬಿಮ್ಲಾ ಮತ್ತು ಅವರ ಕುಟುಂಬಕ್ಕೆ, ಈ ಬಹುಮಾನವು ದೊಡ್ಡ ನಿರಾಳತೆಯನ್ನು ತಂದಿದೆ. ಅವರ ಪತಿ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವುದರಿಂದ ದೈನಂದಿನ ಅಗತ್ಯಗಳನ್ನು ಪೂರೈಸುವುದು ಮತ್ತು ಮಕ್ಕಳ ಪಾಲನೆ ಕಷ್ಟವಾಗಿತ್ತು. ಈ ಅನಿರೀಕ್ಷಿತ ಲಾಟರಿ ನಿಜಕ್ಕೂ ಖುಷಿ ತಂದಿದೆ ಎಂದು ಪ್ರತಿಕ್ರಿಯಿಸಿದ್ದಾರೆ.