ರಾಜಸ್ಥಾನ,ಅ.2: ಸರಕಾರಿ ಶಾಲೆಯಲ್ಲಿ ಗುಣ ಮಟ್ಟದ ಶಿಕ್ಷಣ ಸಿಗುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಿರುತ್ತವೆ. ಇದೀಗ ರಾಜಸ್ಥಾನದ ರೌಲಿ ಜಿಲ್ಲೆಯ ತೊಡಾ ಭೀಮ್ ವ್ಯಾಪ್ತಿಯ ಭಂಡಾರಿ ಅಂಧ್ರೂನಿಯ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕರೊಬ್ಬರು ಶಾಲಾ ಸಮಯದಲ್ಲೆ ನಿದ್ರೆಗೆ ಜಾರಿರುವ ದೃಶ್ಯ ವೈರಲ್ (Viral News) ಆಗಿದೆ. ಶಾಲಾ ಕೆಲಸದ ಅವಧಿ ಯಲ್ಲಿಯೇ ಶಿಕ್ಷಕರೊಬ್ಬರು ಕೊಠಡಿಯೊಳಗೆ ಗಾಢ ನಿದ್ರೆಯಲ್ಲಿರುವುದು ಕಂಡುಬರುತ್ತದೆ. ಈ ವ್ಯಕ್ತಿಯನ್ನು ಆ ಶಾಲೆಯ ಪ್ರಾಂಶುಪಾಲರಾದ ಡ್ಯೋದಿರಾಮ್ ಮೀನಾ ಎಂದು ಗುರುತಿಸಲಾಗಿದೆ.
ಸದ್ಯ ಸರ್ಕಾರಿ ಶಾಲೆಗಳ ಆಡಳಿತ ವ್ಯವಸ್ಥೆಯ ಬಗ್ಗೆ ಆನ್‌ಲೈನ್ ನಲ್ಲಿ ಚರ್ಚೆಗೆ ಕಾರಣವಾಗಿದೆ. ಪೋಷಕರು ಮಕ್ಕಳ ಮುಂದಿನ ಭವಿಷ್ಯದ ಬಗ್ಗೆ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಆದರೆ ವಿಡಿಯೋ ಚಿತ್ರೀಕರಿಸಲಾದ ಬಗ್ಗೆ ನಿಖರ ದಿನಾಂಕ ಇನ್ನೂ ದೃಢಪಟ್ಟಿಲ್ಲವಾದರ ಪೋಷಕರು ಮತ್ತು ಆನ್‌ಲೈನ್ ಬಳಕೆದಾರರಿಂದ ತೀವ್ರ ಟೀಕೆ ವ್ಯಕ್ತವಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆಯಾಗಲಿ ಅಥವಾ ಶಾಲಾ ಆಡಳಿತ ಮಂಡಳಿಯಾಗಲಿ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ. ಈ ನಡುವೆ ರಾಜಸ್ಥಾನದ ನಾಗೌರ್ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಇದೇ ರೀತಿಯ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಇಲ್ಲಿ ಪುಟ್ಟ ಮಕ್ಕಳನ್ನು ಮಧ್ಯಾಹ್ನದ ಬಿಸಿಯೂಟದ ಪಾತ್ರೆಗಳನ್ನು ಹೊರಸುತ್ತಿರುವ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ಕಳವಳ ಮೂಡಿಸಿದೆ.
Viral Video: ಮಧ್ಯ ರಸ್ತೆಯಲ್ಲೇ ಭರ್ಜರಿ ಭೋಜನ; ರಾಜಸ್ಥಾನ ಎಕ್ಸ್‌ಪ್ರೆಸ್‌ವೇಯಲ್ಲೇ ಪಾರ್ಟಿ ಮಾಡಿದ ಕುಟುಂಬ
ಅದೇ ರೀತಿ ಮಧ್ಯ ಪ್ರದೇಶದ ಭಿಂದ್ ಜಿಲ್ಲೆಯ ಕೋಟ್ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕನೊಬ್ಬ ವಿದ್ಯಾರ್ಥಿ ಗಳಿಗೆ ಪಾಠ ಮಾಡುವ ಬದಲು ಮೊಬೈಲ್ ನೋಡುತ್ತಾ ಬ್ಯುಸಿಯಾಗಿದ್ದಾರೆ. ಶಿಕ್ಷಕ ತರಗತಿಯಲ್ಲೇ ಮೊಬೈಲ್‌ನಲ್ಲಿ ಗೇಮ್ ಆಡುತ್ತಾ, ವಿದ್ಯಾರ್ಥಿನಿಯರ ಇನ್‌ಸ್ಟಾಗ್ರಾಮ್ ಐಡಿ ಕೇಳುತ್ತಿದ್ದಾರೆ ಎಂದು ಮಕ್ಕಳು ದೂರಿದ್ದಾರೆ. ಸದ್ಯ ಈ ಎಲ್ಲಾ ಘಟನೆಗಳು ಸರಕಾರಿ ಶಾಲೆಯಲ್ಲಿ ನಡೆಯುತ್ತಿರುವುದರಿಂದ ಪೋಷಕರು ಇಲ್ಲಿನ ಗುಣಮಟ್ಟದ ಶಿಕ್ಷಣ ಬಗ್ಗೆ ಪ್ರಶ್ನಿಸುತ್ತಿದ್ದಾರೆ.