ಜೋಧ್ಪುರ: ಸ್ನೇಹಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ ಎಂಬುವುದಕ್ಕೆ ರಾಜಸ್ಥಾನದ (Rajasthan) ಜೋಧ್ಪುರ(Jodhpur) ಜಿಲ್ಲೆಯ ಶಾಲೆಯೊಂದರಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಕ್ಯಾನ್ಸರ್(cancer)ಗೆ ತುತ್ತಾಗಿ ಬಳಲುತ್ತಿರುವ ಸ್ನೇಹಿತೆಯ ಆತ್ಮಸ್ಥೈರ್ಯ ಹೆಚ್ಚಿಸಲು ಇಡೀ ಶಾಲೆಯ ವಿದ್ಯಾರ್ಥಿನೀಯರು ಹಾಗೂ ಶಿಕ್ಷಕರು ಒಟ್ಟಾಗಿ ತಕೆ ಕೂದಲನ್ನು ತೆಗೆಸಿಕೊಂಡಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣ (Social Media) ಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ವಿದ್ಯಾರ್ಥಿನಿಯೋರ್ವಳು ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಕಿಮೋಥೆರಪಿ ಚಿಕಿತ್ಸೆಯ ನಂತರ ಆಕೆಯ ತಲೆ ಕೂದಲು ಸಂಪೂರ್ಣವಾಗಿ ಉದುರಿ ಹೋಗಿತ್ತು. ಇದಿರಿಂದಾಗಿ ಮಾನಸಿಕವಾಗಿ ಹೋಗಿದ್ದ ಬಾಲಕಿಯು ಸ್ನೇಹಿತರ ಮುಂದೆ ಬರಲೂ ಹಿಂಜೆರಿಯುತ್ತಿದ್ದಳು. ತಮ್ಮ ಸಹಪಾಠಿಯ ಈ ಸ್ಥಿತಿಯನ್ನು ಕಂಡು ತೀವ್ರ ದಃಖ ವ್ಯಕ್ತಪಡಿಸಿದ ಸ್ನೇಹಿತೆಯರು ಹಾಗೂ ಶಿಕ್ಷಕಿಯರು ಆಕೆಯ ಬೆಂಬಲಕ್ಕೆ ನಿಲ್ಲಲು ನಿರ್ಧರಿಸಿದರು. ಆಕೆ ಒಬ್ಬಂಟಿ ಅಲ್ಲ, ನಾವೆಲ್ಲರೂ ಆಕೆಯ ಜೊತೆಗಿದ್ದೇವೆ ಎಂಬ ಭಾವನೆ ಮೂಡಿಸಿ ಆತ್ಮಸ್ಥೈರ್ಯ ತುಂಬಲು ಶಾಲೆಯ ಎಲ್ಲ ವಿದ್ಯಾರ್ಥಿನೀಯರು ಹಾಗೂ ಶಿಕ್ಷಕರು ಸಾಮೂಹಿಕವಾಗಿ ಕೇಶ ಮುಂಡನ ಮಾಡಿಸಿಕೊಂಡಿದ್ದಾರೆ.
ವೈರಲ್ ಆದ ಈ ಹೃದಯಸ್ಪರ್ಶಿ ಘಟನೆಯ ವಿಡಿಯೋದಲ್ಲಿ, ಸಹಪಾಠಿಗಳು ಒಬ್ಬೊಬ್ಬರಾಗಿ ಸಾಲಿನಲ್ಲಿ ನಿಂತು ಕೇಶ ಮುಂಡನ ಮಾಡಿಕೊಳ್ಳುತ್ತಿರುವುದು ಹಾಗೂ ಹಲವರು ನಗುತ, ಚಪ್ಪಾಳೆ ತಟ್ಟಿ ಬಾಲಕಿಯ ಮನೋಬಲ ಹೆಚ್ಚಿಸುವ ಪ್ರಯತ್ನ ಮಾಡುತ್ತಿರುವುದು ಕಂಡುಬಂದಿದೆ.
ಶಿಕ್ಷಕರು ಮತ್ತು ಶಾಲಾ ಸಿಬ್ಬಂದಿಯೂ ಈ ಕಾರ್ಯದಲ್ಲಿ ಭಾಗವಹಿಸಿ, ಆಕೆಯ ಈ ಹೋರಾಟದಲ್ಲಿ ಒಂಟಿಯಾಗಿಲ್ಲ ಎಂಬ ಸಂದೇಶವನ್ನು ಸಾರಿದ್ದಾರೆ. ಈ ದೃಶ್ಯ ನೋವು ಮತ್ತು ಭಾವನಾತ್ಮಕತೆಯ ಜೊತೆಗೆ ಪ್ರೀತಿ ಮತ್ತು ಮನೋಬಲವನ್ನು ಮೂಡಿಸುತ್ತದೆ. ಬಾಲಕಿ ಈ ಬೆಂಬಲದಿಂದ ತುಂಬಾ ಹರ್ಷಿತಳಾಗಿದ್ದು, ತನ್ನ ಅನುಭವವನ್ನು ಇತರರೂ ಹಂಚಿಕೊಂಡಿರುವುದರಿಂದ ಆಕೆಯ ಮನಸ್ಸಿಗೆ ಹಗುರವಾಗಿರುವುದು ಸ್ಪಷ್ಟವಾಗಿ ಕಾಣಿಸಿದೆ.
Viral Video: ರೀಲ್ಸ್‌ಗಾಗಿ ಇದೆಂಥ ಹುಚ್ಚಾಟ? ಚಲಿಸುವ ಟ್ರಕ್ ಕೆಳಗೆ ಬೈಕ್ ಓಡಿಸಿದ ಯುವಕ
ಇನ್ನೂ ಈ ವೀಡಿಯೊ ಸಾವಿರಾರು ಜನರಿಂದ ಮೆಚ್ಚುಗೆ ಪಡೆದಿದ್ದು, ಭಾರೀ ವೈರಲ್ ಆಗಿದೆ. ಜೀವನದಲ್ಲಿ ಮಾಡುವ ಒಂದು ಸಣ್ಣ ಒಳ್ಳೆಯ ಕಾರ್ಯವೂ ದೀರ್ಘಾವಧಿಯಲ್ಲಿ ದೊಡ್ಡ ಬದಲಾವಣೆ ತರುತ್ತದೆ ಎಂಬುದಕ್ಕೆ ಇದೊಂದು ನಿದರ್ಶನ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಇಂತಹ ಮಾನವೀಯ ಮೌಲ್ಯಗಳನ್ನು ಉತ್ತೇಜಿಸಿದ ಶಾಲೆಯ ಕ್ರಮಕ್ಕೂ ಜನರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ನೆಟ್ಟಿಗರಿಂದ ಅಭಿನಂದನೆಗಳ ಮಹಾಪೂರ
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಕಾಮೆಂಟ್‌ಗಳ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. “ದಯೆಗೆ ಹಣ ಬೇಕಾಗಿಲ್ಲ, ಹೃದಯ ಬೇಕು ಎಂದು ಯಾರೋ ಸರಿಯಾಗಿ ಹೇಳಿದ್ದಾರೆ,” ಎಂದು ಒಬ್ಬರು ಬರೆದಿದ್ದರೆ, ಮತ್ತೊಬ್ಬರು, “No Words,” ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, “ನಿಜವಾದ ಹೀರೋಗಳು ಹೀಗೆ ಮಾಡುತ್ತಾರೆ,” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.