ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಒಬ್ಬಂಟಿ ಮಹಿಳೆ ಪ್ರಯಾಣಿಸುವಾಗ ಅಶ್ಲೀಲ ವಿಡಿಯೊ ವೀಕ್ಷಿಸಿದ ರ‍್ಯಾಪಿಡೋ ಚಾಲಕ! ಕಹಿ ಘಟನೆ ಶೇರ್ ಮಾಡಿದ ಯುವತಿ

Viral News: ದೇಶದ ರಾಜಧಾನಿಯಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಪ್ರಶ್ನೆ ಮಾಡುವಂತ ಮತ್ತೊಂದು ಪ್ರಕರಣ ವರದಿಯಾಗಿದೆ. ದೆಹಲಿಯ ಮಹಿಳೆಯೊಬ್ಬರು ರ‍್ಯಾಪಿಡೋ ಆಟೋ-ರಿಕ್ಷಾದಲ್ಲಿ ಪ್ರಯಾಣ ಮಾಡುವಾಗ ಚಾಲಕನೊಬ್ಬ ಅಶ್ಲೀಲ ವಿಡಿಯೋ ವೀಕ್ಷಿಸುತ್ತಿದ್ದು, ತನ್ನ ಜೊತೆ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಆರೋಪ ಮಾಡಿದ್ದಾರೆ. ಸಂತ್ರಸ್ತ ಮಹಿಳೆಯೂ ತನಗಾದ ಕಹಿ ಅನುಭವದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಯುವತಿಯ ಎದುರೇ ಅಶ್ಲೀಲ ವಿಡಿಯೊ ವೀಕ್ಷಿಸಿದ ಆಟೋ ಚಾಲಕ

ನವದೆಹಲಿ,ಆ.3: ಸಾರ್ವಜನಿಕ ಸ್ಥಳದಲ್ಲೆ ಮಹಿಳೆಯರ ಜತೆ ಅಸಭ್ಯವಾಗಿ ವರ್ತಿಸುವ ಅನೇಕ ಘಟನೆಗಳು ಇಂದು ವರದಿಯಾಗುತ್ತಿವೆ. ಇದೀಗ ದೇಶದ ರಾಜಧಾನಿಯಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಪ್ರಶ್ನೆ ಮಾಡುವಂತ ಮತ್ತೊಂದು ಪ್ರಕರಣ ವರದಿಯಾಗಿದೆ. ದೆಹಲಿಯ ಮಹಿಳೆಯೊಬ್ಬರು ರಾಪಿಡೋ ಆಟೋ-ರಿಕ್ಷಾದಲ್ಲಿ ಪ್ರಯಾಣ ಮಾಡುವಾಗ ಚಾಲಕನೊಬ್ಬ ಅಶ್ಲೀಲ ವಿಡಿಯೋ ವೀಕ್ಷಿಸುತ್ತಿದ್ದು, ತನ್ನ ಜೊತೆ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಆರೋಪ ಮಾಡಿದ್ದಾರೆ. ಸಂತ್ರಸ್ತ ಮಹಿಳೆಯೂ ತನಗಾದ ಕಹಿ ಅನುಭವದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಶೇರ್ (Viral News) ಮಾಡಿಕೊಂಡಿದ್ದಾರೆ.

ಇತ್ತೀಚೆಗೆ ರಾಪಿಡೋ ಚಾಲಕರು ಒಬ್ಬಂಟಿ ಮಹಿಳೆಯರು ಪ್ರಯಾಣ ಮಾಡುವಾಗ ಲೈಂಗಿಕ ಕಿರುಕುಳ ನೀಡಿದ ಅನೇಕ ಘಟನೆಗಳು ವರದಿಯಾಗಿವೆ. ಇದೀಗ ದೆಹಲಿಯಲ್ಲಿ ಮಹಿಳೆ ಹಿಂಬದಿ ಸೀಟಿನಲ್ಲಿ ಕುಳಿತಿದ್ದಾಗಲೇ ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೊ ನೋಡುತ್ತಿದ್ದ. ಈ ಘಟನೆಯೂ ಮಹಿಳೆಯರ ಸುರಕ್ಷತೆಯ ಬಗ್ಗೆ ಗಂಭೀರ ಕಳವಳ ವ್ಯಕ್ತವಾಗಿದ್ದು ನೆಟ್ಟಿಗರು ಆತಂಕವನ್ನು ವ್ಯಕ್ತ ಪಡಿಸುತ್ತಿದ್ದಾರೆ.

ವಿಡಿಯೊ ನೋಡಿ:



ಅವರ ಪೋಸ್ಟ್ ಪ್ರಕಾರ, ಭಾನುವಾರ ರಾತ್ರಿ 8:48 ರ ಸುಮಾರಿಗೆ ಸಫ್ದರ್ಜಂಗ್‌ನಿಂದ ಮಾಡೆಲ್ ಟೌನ್‌ಗೆ ರಾಪಿಡೋ ಆಟೋವನ್ನು ಬುಕ್ ಮಾಡಿದ್ದರು. ಪ್ರಯಾಣದ ಸಮಯದಲ್ಲಿ, ದ್ವಿಚಕ್ರ ವಾಹನದಲ್ಲಿ ಸವಾರಿ ಮಾಡುತ್ತಿದ್ದ ಮಹಿಳೆಯೊಬ್ಬರು ಟ್ರಾಫಿಕ್ ಸಿಗ್ನಲ್‌ನಲ್ಲಿ ಚಾಲಕ ಮೊಬೈಲ್ ಫೋನ್‌ನಲ್ಲಿ ಆಶ್ಲೀಲ ವಿಡಿಯೋ ವೀಕ್ಷಿಸುತ್ತಿರುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.. ಆಗ ಎಚ್ಚೆತ್ತ ಚಾಲಕ ಮೊಬೈಲ್ ಅನ್ನು ಕೆಳಗೆ ಇರಿಸಿದ್ದಾನೆ.

ಮಹಾರಾಷ್ಟ್ರದಲ್ಲಿ ಭೀಕರ ಅಪಘಾತ; ನಿದ್ದೆಯ ಮಂಪರಿನಲ್ಲಿ ಬೈಕ್ ಸವಾರನನ್ನು ಎಳೆದೊಯ್ದ ಉಬರ್ ಚಾಲಕ

ಆದರೆ ಆ ಬಳಿಕವೂ ಚಾಲಕ ಅಸಭ್ಯವಾಗಿ ವರ್ತಿಸುತ್ತಿರುವುದನ್ನು ಯುವತಿ ಗಮನಿಸಿದ್ದಾರೆ. ತಾನು ತಲುಪಬೇಕಾದ ಸ್ಥಳದಿಂದ ಇನ್ನೂ 30 ನಿಮಿಷಗಳ ದೂರದಲ್ಲಿದ್ದೇನೆಂದು ಅರ್ಥೈಸಿಕೊಂಡು ಮಹಿಳೆಯೂ ತಕ್ಷಣವೇ ಚಾಲಕನನ್ನು ಎದುರಿಸಲು ನಿರ್ಧರಿಸಲಿಲ್ಲ ,ಬಳಿಕ ಸುರಕ್ಷತೆಯ ದೃಷ್ಟಿಯಿಂದ ತಕ್ಷಣವೇ ರಾಪಿಡೋ ಸುರಕ್ಷತಾ ತಂಡವನ್ನು ಸಂಪರ್ಕ ಮಾಡಿ ತನಗೆ ಎದುರಾಗಿರುವ ಅಪಾಯದ ಬಗ್ಗೆ ಮಾಹಿತಿ ನೀಡಿದ್ದಾರೆ.

ತನ್ನ ಸ್ಥಳ ತಲುಪಿದ ನಂತರ, ಮಹಿಳೆ ಚಾಲಕನನ್ನು ಎದುರಿಸಿದ್ದು ಆತ ಆರೋಪವನ್ನು ತಳ್ಳಿ ಹಾಕಿದ್ದಾನೆ. ತಾನು 'ಚಿಕ್ಕ ಬಟ್ಟೆಗಳನ್ನು ಧರಿಸಿದ್ದ ವಿದೇಶಿ ಮಹಿಳೆಯರ ವೀಡಿಯೊಗಳನ್ನು ನೋಡುತ್ತಿದ್ದೆ' ಎಂದು ಹೇಳಿಕೊಂಡಿದ್ದಾನೆ. ಚಾಲಕನನ್ನು ಛೋಟೂಲಾಲ್ ಕುಮಾರ್ ಯಾದವ್ ಎಂದು ಗುರುತಿಸಲಾಗಿದೆ. ಆದರೆ ಆತನನ್ನು ಪೊಲೀಸರು ಬಂಧಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.ತನ್ನ ಪೋಸ್ಟ್‌ನಲ್ಲಿ, ಮಹಿಳೆ ತನ್ನನ್ನು ಎಚ್ಚರಿಸಿದ ಅಪರಿಚಿತ ಬೈಕರ್‌ಗೆ ಧನ್ಯವಾದಗಳನ್ನು ಹೇಳಿದ್ದಾರೆ.