ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಆಸ್ಪತ್ರೆಯ ಆಕ್ಸಿಜನ್ ಪೈಪ್ ಮೇಲೆಯೇ ಇಲಿಗಳ ಓಡಾಟ: ಬೆಚ್ಚಿಬೀಳಿಸುವ ದೃಶ್ಯ ಇಲ್ಲಿದೆ!

Viral Video: ಉತ್ತರ ಪ್ರದೇಶದ ಗೊಂಡಾದ ಬಾಬು ಈಶ್ವರ್ ಶರಣ್ ಆಸ್ಪತ್ರೆಯ ವಾರ್ಡ್‌ನೊಳಗೆ ಇಲಿಗಳು ಓಡಾಡುತ್ತಿರುವ ಘಟನೆ ಕಂಡು ಬಂದಿದ್ದು‌ ರೋಗಿಗಳ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆ ಗಳನ್ನು ಹುಟ್ಟುಹಾಕಿದೆ. ಆಸ್ವತ್ರೆಯ ವಾರ್ಡ್‌ನಲ್ಲಿ ರೋಗಿಗಳು ಮಲಗಿದ್ದಾಗಲೇ ಅವರ ತಲೆಯ ಮೇಲಿರುವ ಆಕ್ಸಿಜನ್ ಪೈಪ್‌ಗಳ ಮೇಲೆ ಇಲಿಗಳು ರಾಜ ಗಾಂಭಿರ್ಯವಾಗಿ ಓಡಾಡುತ್ತಿವೆ.

ಯುಪಿ ಆಸ್ಪತ್ರೆಯೊಳಗೆ ರಾಜರೋಷವಾಗಿ ಇಲಿಗಳ ಓಡಾಟ

ಉತ್ತರ ಪ್ರದೇಶ,ಜ. 14: ಇತ್ತೀಚೆಗೆ ಆರೋಗ್ಯ ವ್ಯವಸ್ಥೆಯ ದುಸ್ಥಿತಿಯನ್ನು ಪ್ರತಿಬಿಂಬಿಸುವ ಅನೇಕ ಆಘಾತಕಾರಿ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗುತ್ತವೆ‌. ಇದೀಗ ಉತ್ತರ ಪ್ರದೇಶದ ಗೊಂಡಾದ ಬಾಬು ಈಶ್ವರ್ ಶರಣ್ ಆಸ್ಪತ್ರೆಯ ವಾರ್ಡ್‌ನೊಳಗೆ ಇಲಿಗಳು ಓಡಾಡು ತ್ತಿರುವ ಘಟನೆ ಕಂಡು ಬಂದಿದ್ದು‌ ರೋಗಿಗಳ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಆಸ್ವತ್ರೆಯ ವಾರ್ಡ್‌ನಲ್ಲಿ ರೋಗಿಗಳು ಮಲಗಿದ್ದಾಗಲೇ ಅವರ ತಲೆಯ ಮೇಲಿರುವ ಆಕ್ಸಿಜನ್ ಪೈಪ್‌ಗಳ ಮೇಲೆ ಇಲಿಗಳು ರಾಜ ಗಾಂಭಿರ್ಯವಾಗಿ ಓಡಾಡುತ್ತಿವೆ.

ಮೂಳೆಚಿಕಿತ್ಸಾ ವಾರ್ಡ್‌ಗೆ ದಾಖಲಾದ ರೋಗಿಗಳು ಇದ್ದು ಈ ವೇಳೆ ಅವರ ಬೆಡ್‌ಗಳ ಪಕ್ಕದಲ್ಲೇ ಇರುವ ಆಮ್ಲಜನಕ ಸರಬರಾಜು ಮಾಡುವ ಪೈಪ್‌ಗಳ ಮೇಲೆ ಮೂರ್ನಾಲ್ಕು ದೊಡ್ಡ ಇಲಿಗಳು ಓಡಾಡುತ್ತಿರುವುದನ್ನು ರೋಗಿಯ ಸಂಬಂಧಿಕರು ರೆಕಾರ್ಡ್ ಮಾಡಿದ್ದಾರೆ.ದೃಶ್ಯಾವಳಿಗಳಲ್ಲಿ, ಇಲಿಗಳು ಹಾಸಿಗೆಗಳ ಮೇಲೆ ಹೋಗುವುದು,ವಿದ್ಯುತ್ ಬೋರ್ಡ್‌ಗಳ ಮೇಲೆ ಓಡುವುದು ಮತ್ತು ರೋಗಿಗಳು ಹತ್ತಿರದಲ್ಲಿ ಮಲಗಿರುವಾಗ ವೈದ್ಯಕೀಯ ಉಪಕರಣಗಳ ಹತ್ತಿರ ಚಲಿಸುವುದನ್ನು ಕಾಣಬಹುದು.

ವಿಡಿಯೋ ನೋಡಿ:



ಈ ವಿಡಿಯೋ ಸದ್ಯ ಆಸ್ಪತ್ರೆಯ ಅಧಿಕಾರಿಗಳ ವಿರುದ್ಧ ನಿರ್ಲಕ್ಷಕ್ಕೆ ಕಾರಣವಾಗಿದೆ. ಹಲವಾರು ದಿನಗಳಿಂದ ಈ ಸಮಸ್ಯೆ ಇದ್ದು, ಶುಶ್ರೂಷಕ ಸಿಬ್ಬಂದಿ ಹಾಗೂ ವೈದ್ಯರಿಗೆ ಪದೇ ಪದೇ ದೂರು ನೀಡಿದರೂ ಯಾವುದೇ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿಲ್ಲ ಎಂದು ರೋಗಿಗಳ ಕುಟುಂಬ ಸದಸ್ಯರು ದೂರಿದ್ದಾರೆ. ಇಲಿ ಕಡಿತವು ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು ಎಂದು ವೈದ್ಯಕೀಯ ತಜ್ಞರು ಎಚ್ಚರಿಸಿದ್ದಾರೆ. ಇಲಿ ಕಡಿತ ಜ್ವರ (RBF) ಗಂಭೀರವಾಗಿದ್ದು ಸಂಭಾವ್ಯವಾಗಿ ಮಾರಣಾಂತಿಕ ಬ್ಯಾಕ್ಟೀರಿ ಯಾದ ಸೋಂಕು ಹರಡಬಹುದು. ಇದು ಇಲಿ ಕಡಿತ, ಗೀರುಗಳು ಅಥವಾ ಇಲಿ ಲಾಲಾರಸ, ಮೂತ್ರ ಅಥವಾ ಮಲದ ಸಂಪರ್ಕದ ಮೂಲಕ ಹರಡಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

Viral Video: ಸೊಸೆಯ ಹೆರಿಗೆ ಸಂದರ್ಭ ಅಮಾನವೀಯವಾಗಿ ವರ್ತಿಸಿದ ಅತ್ತೆ; ವಿಡಿಯೊ ವೈರಲ್

ಇಲಿಗಳು ವಿದ್ಯುತ್ ವೈಯರ್‌ಗಳನ್ನು ಕಡಿಯುವುದರಿಂದ ಶಾರ್ಟ್ ಸರ್ಕ್ಯೂಟ್ ಕೂಡ ಉಂಟಾಗ ಬಹುದು. ಸದ್ಯ ವಿಡಿಯೋ ವೈರಲ್ ಆಗಿ ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆ ವ್ಯಕ್ತವಾದ ಬೆನ್ನಲ್ಲೇ ಎಚ್ಚೆತ್ತುಕೊಂಡ ಜಿಲ್ಲಾಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ. ಸ್ವಾಯತ್ತ ರಾಜ್ಯ ವೈದ್ಯ ಕೀಯ ಕಾಲೇಜಿನ ಪ್ರಾಂಶುಪಾಲ ಡಾ. ಧನಂಜಯ್ ಶ್ರೀಕಾಂತ್ ಕೋಟಸ್ಥಾನೆ, ತಕ್ಷಣ ಕ್ರಮ ಕೈಗೊಳ್ಳಲಾಗಿದೆ ಎಂದು ದೃಢಪಡಿಸಿದರು.ಎಲ್ಲಾ ವಾರ್ಡ್‌ಗಳಿಗೆ ಔಷಧಿಗಳನ್ನು ಸಿಂಪಡಿಸ ಲಾಗಿದ್ದು ತನಿಖೆಗೆ ಆದೇಶಿಸಲಾಗಿದೆ ಮತ್ತು ಸ್ವಚ್ಛತೆಯನ್ನು ಕಾಪಾಡಿಕೊಳ್ಳುವಲ್ಲಿ ನಿರ್ಲಕ್ಷ್ಯ ವಹಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದು ಅವರು ಹೇಳಿದ್ದಾರೆ.