ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕಳೆದುಹೋದ 2 ಲಕ್ಷ ಮೌಲ್ಯದ ಮ್ಯಾಕ್‌ಬುಕ್ ಮರಳಿಸಿದ ರಿಕ್ಷಾ ಚಾಲಕ: ಪ್ರಾಮಾಣಿಕತೆಗೆ ನೆಟ್ಟಿಗರು ಫಿದಾ!

Viral News: ದೆಹಲಿಯಲ್ಲಿ ನಡೆದ ಘಟನೆಯೊಂದು ಇಂದಿಗೂ ಪ್ರಾಮಾಣಿಕ ವ್ಯಕ್ತಿತ್ವ ಕೆಲವರಲ್ಲಿ ಜೀವಂತವಾಗಿದೆ ಅನ್ನೋದನ್ನು ತೋರಿಸಿಕೊಟ್ಟಿದೆ. ‌ಅದರಲ್ಲೂ ಕಳೆದುಹೋದ ದುಬಾರಿ ವಸ್ತುಗಳನ್ನು ಮರಳಿ ಪಡೆಯುವ ಎಲ್ಲಾ ಭರವಸೆಯನ್ನು ಕಳೆದುಕೊಳ್ಳುವ ಈ ಜಗತ್ತಿನಲ್ಲಿ ಎರಡು ಲಕ್ಷ ರೂಪಾಯಿ ಮೌಲ್ಯದ ಕಳೆದ ಹೋದ ಮ್ಯಾಕ್ ಬುಕ್ ಅನ್ನು ರಿಕ್ಷಾ ಚಾಲಕರೊಬ್ಬರು ಮಾಲೀಕರಿಗೆ ತಲುಪಿಸಿದ್ದಾರೆ. ಚಾಲಕನ ಮಾನವೀಯ ಗುಣಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ‌..

ಕಳೆದು ಹೋದ ಮ್ಯಾಕ್ ಬುಕ್ ಮರಳಿಸಿ ಮಾನವೀಯತೆ ಮೆರೆದ ರಿಕ್ಷಾ ಚಾಲಕ

ನವದೆಹಲಿ,ಸೆ.3: ಇಂದಿನ ಆಧುನಿಕ ಯುಗದಲ್ಲಿ ಜನರು ಇತರರ ಕಷ್ಟಕ್ಕೆ ಸ್ಪಂದಿಸುವುದು ತೀರಾ ಅಪರೂಪ. ಆದರೆ ದೆಹಲಿಯಲ್ಲಿ ನಡೆದ ಘಟನೆಯೊಂದು ಇಂದಿಗೂ ಪ್ರಾಮಾಣಿಕ ವ್ಯಕ್ತಿತ್ವ ಕೆಲವರಲ್ಲಿ ಜೀವಂತವಾಗಿದೆ ಅನ್ನೋದನ್ನು ತೋರಿಸಿಕೊಟ್ಟಿದೆ. ‌ಅದರಲ್ಲೂ ಕಳೆದುಹೋದ ದುಬಾರಿ ವಸ್ತುಗಳನ್ನು ಮರಳಿ ಪಡೆಯುವ ಎಲ್ಲಾ ಭರವಸೆಯನ್ನು ಕಳೆದುಕೊಳ್ಳುವ ಈ ಜಗತ್ತಿ ನಲ್ಲಿ ಎರಡು ಲಕ್ಷ ರೂಪಾಯಿ ಮೌಲ್ಯದ ಕಳೆದ ಹೋದ ಮ್ಯಾಕ್ ಬುಕ್ ಬಾಕ್ಸ್ ಅನ್ನು ರಿಕ್ಷಾ ಚಾಲಕರೊಬ್ಬರು ಮಾಲೀಕರಿಗೆ ತಲುಪಿಸಿದ್ದಾರೆ. ಚಾಲಕನ ಮಾನವೀಯ ಗುಣಕ್ಕೆ ಸೋಷಿಯಲ್ ಮೀಡಿಯಾದಲ್ಲಿ (Viral News) ಮೆಚ್ಚುಗೆ ವ್ಯಕ್ತ ವಾಗುತ್ತಿದೆ‌

ಹರ್ಷಿತ್ ಸುರೇಕ ಎಂಬ ಕಂಟೆಂಟ್ ಕ್ರಿಯೇಟರ್ ಭಾರೀ ಮಳೆಯ ಸಂದರ್ಭದಲ್ಲಿ ಮನೆಗೆ ಹಿಂದಿರುಗುವಾಗ ತನ್ನ ದುಬಾರಿ ಮ್ಯಾಕ್‌ಬುಕ್ ಅನ್ನು ಕಳೆದುಕೊಂಡಿದ್ದರು. ಇದರ ಮೌಲ್ಯ ಸುಮಾರು 2 ಲಕ್ಷ ರೂಪಾಯಿ ಆಗಿದ್ದು ಇದರ ಜೊತೆ ವೈಯಕ್ತಿಕ ಡೈರಿ ಹಾಗೂ ಇತರ ಪ್ರಮುಖ ದಾಖಲೆಗಳಿದ್ದವು. ಆದರೆ ಮನೆ ತಲುಪಿದ ಮೇಲೆಯೇ ಅವರಿಗೆ ಬಾಕ್ಸ್ ಕಳೆದುಹೋಗಿರುವ ವಿಚಾರ ಗೊತ್ತಾಗಿದೆ.

ರಾತ್ರಿ 10 ಗಂಟೆಯ ಸುಮಾರಿಗೆ ಹರ್ಷಿತ್ ಸುರೇಕ ಜಿಮ್‌ನಿಂದ ಮನೆಗೆ ಬೈಕ್‌ನಲ್ಲಿ ಮರಳುತ್ತಿದ್ದರು. ಆದರೆ ಭಾರೀ ಮಳೆ ಕಾರಣದಿಂದ ಬೈಕ್‌ನ ಹಿಂಭಾಗದಲ್ಲಿದ್ದ ಮ್ಯಾಕ್‌ಬುಕ್ ಬ್ಯಾಗ್ ರಸ್ತೆಯಲ್ಲಿ ಎಲ್ಲೋ ಬಿದ್ದುಹೋಗಿತ್ತು. ಇದನ್ನು ಅರಿತ ಚಾಲಕ ಮಳೆಯಲ್ಲೇ ವಾಪಸ್ಸು ಬಂದು ಸುಮಾರು ಕಿಲೋಮೀಟರ್ ಹಿಂತಿರುಗಿ ಹುಡುಕಾಟ ನಡೆಸಿದ್ದಾರೆ‌. ಆಗ ಯಾರೋ ಈ ಬಾಕ್ಸ್ ಅನ್ನು ರಿಕ್ಷಾ ಚಾಲಕರೊಬ್ಬರು ಅದನ್ನು ಎತ್ತಿಕೊಂಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

ವಿಡಿಯೋ ನೋಡಿ:



ಚಾಲಕನ ವಿವರ ಸಿಗದ ಕಾರಣ ಹರ್ಷಿತ್ ಪೋಲೀಸ್ ದೂರು ನೀಡಲು ಠಾಣೆಗೆ ತೆರಳಿದರು. ​ಆ ಸಮಯದಲ್ಲಿ ಹರ್ಷಿತ್ ಅವರುಮೊಬೈಲ್ ನಲ್ಲಿ ಇಸ್ಟಾಗ್ರಾಮ್ ಮೆಸೇಜ್ ರಿಕ್ವೆಸ್ಟ್ ಬಂದಿದ್ದು ಪರಿಶೀಲಿಸಿದ್ದಾರೆ‌. ಆ ಚಾಲಕ ಇವರ ಖಾತೆಯನ್ನು ಹುಡುಕಿ ಮೆಸೇಜ್ ಕಳುಹಿಸಿ ತಮ್ಮ ಫೋನ್ ನಂಬರ್ ಹಂಚಿಕೊಂಡಿರುವುದು ಕಂಡುಬಂದಿದೆ.

Viral News: ಮೊದಲ ಬಾರಿ ಬೆಂಗಳೂರಿಗೆ ಬಂದ ಹಳ್ಳಿ ಯುವಕರನ್ನು ದೋಚಿದ ಆಟೋ ಚಾಲಕ; ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ಆಕ್ರೋಶ

ಚಾಲಕನ ಸಂಖ್ಯೆಯೊಂದಿಗೆ ಸಂದೇಶ ಬಂದಿದ್ದರಿಂದ ಅವರಿಗೆ ಕರೆ ಮಾಡಿ ಮ್ಯಾಕ್‌ಬುಕ್ ಅನ್ನು ಸುರಕ್ಷಿತವಾಗಿ ಮರಳಿ ಪಡೆದು ಕೊಂಡರು. ಚಾಲಕನ ಪ್ರಾಮಾಣಿಕತೆಗೆ ಮೆಚ್ಚಿ ಅವರು ಹಣ ಅಥವಾ ಬಹುಮಾನ ನೀಡಲು ಹರ್ಷಿತ್ ಮುಂದಾದರಾದರೂ, ರಿಕ್ಷಾ ಚಾಲಕ ನಿರಾಕರಣೆ ಮಾಡಿದ್ದಾರೆ. ಈ ಬಗ್ಗೆ ಬರೆದು ಕೊಂಡ ಹರ್ಷಿತ್ ಈ ಜಗತ್ತಿನಲ್ಲಿ ಕೆಟ್ಟ ಜನರಿದ್ದಾರೆ. ಆದರೆ ನೀವು ಒಳ್ಳೆಯ ಕಾರ್ಯಗಳನ್ನು ಮಾಡಿದರೆ, ಬಹುಶಃ ಅದು ನಿಮಗೆ ರಿಟರ್ನ್ ಸಿಗಬಹುದು., ನಾನು ಇದನ್ನು ಮರಳಿ ಪಡೆದು ಕೊಂಡಿದ್ದೇನೆ. ಬಹುಶಃ ಅವರು ಒಳ್ಳೆಯ ವ್ಯಕ್ತಿಯಾಗಿದ್ದರು ಅದಕ್ಕಾಗಿಯೇ ತನಗೆ ಮರಳಿ ನೀಡಿದ್ದಾರೆ ಅಂದರು. ಚಾಲಕನ ಪ್ರಾಮಾಣಿಕತೆಗೆ ನೆಟ್ಟಿಗರು ಕೂಡ ಮೆಚ್ಚುಗೆ ನೀಡಿದ್ದಾರೆ.