ನವದೆಹಲಿ: ಇತ್ತೀಚಿನ ದಿನದಲ್ಲಿ ಕಳ್ಳತನ, ದರೋಡೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಅಂಗಡಿ, ಮಾಲ್, ಬ್ಯಾಂಕ್ , ಆಭರಣ ಮಳಿಗೆಗಳು ಇಂತಹ ಕೃತ್ಯದ ಅಪಾಯಕ್ಕೆ ಹೆದರಿ ಹೆಚ್ಚಿನ ಭದ್ರತಾ ವ್ಯವಸ್ಥೆ ಹಾಗೂ ಸಿಸಿಟಿವಿಯನ್ನು ಅಳವಡಿಸಿರುತ್ತಾರೆ. ಬಹುತೇಕ ಕಡೆಗಳಲ್ಲಿ ಇಂತಹ ಸಿಸಿಟಿವಿ ಇದ್ದರೂ ಕೂಡ ಕಳ್ಳತನ ಮಾಡುವ ಪ್ರಮಾಣ ಇದ್ದೇ ಇರುತ್ತದೆ. ಇನ್ನು ಕೆಲವು ಕಡೆ ಕದ್ದ ವರನ್ನು ಸಿಸಿಟಿವಿ ಫೂಟೇಜ್ ಮೂಲಕವೇ ಪತ್ತೆ ಮಾಡಲಾಗುತ್ತದೆ. ಆದರೆ ಇಂತಹ ದೃಶ್ಯಗಳು ಕೂಡ ಕೆಲವೊಮ್ಮೆ ಭಯಾನಕವಾಗಿರಲಿದೆ. ಅಂತೆಯೇ ಆಭರಣ ಮಳಿಗೆಯೊಂದಕ್ಕೆ ದರೋಡೆಕೋರರು ನುಗ್ಗಿದ್ದು ಮಾಲೀಕನ ಸಮಯ ಪ್ರಜ್ಞೆಯಿಂದ ದರೋಡೆ ಕೋರರನ್ನು ಹಿಮ್ಮೆಟ್ಟಿಸಿದ ಘಟನೆ ಕ್ಯಾಲಿ ಫೋರ್ನಿಯಾದ ಮಡೇರಾದಲ್ಲಿ ನಡೆದಿದೆ. ಸದ್ಯ ಈ ಕುರಿತಾದ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ಸಂಚಲನ ಉಂಟು ಮಾಡಿದ್ದು ಭಾರೀ ವೈರಲ್ (Viral Video) ಆಗಿದೆ.
ವೈರಲ್ ಆದ ವಿಡಿಯೋದಲ್ಲಿ ನವೆಂಬರ್ 13ರ ಗುರುವಾರ ಸಂಜೆ 5:30 ರ ಸುಮಾರಿಗೆ ಅಂಗಡಿ ಯೊಂದಕ್ಕೆ ಐವರು ದರೋಡೆ ಕೋರರು ನುಗ್ಗಿದ್ದ ದೃಶ್ಯಗಳನ್ನು ಕಾಣಬಹುದು. ದರೋಡೆ ಕೋರರು ಕಪ್ಪು ಮುಖವಾಡಗಳನ್ನು ಮತ್ತು ಕೈಗವಸುಗಳನ್ನು (Black masks) ಧರಿಸಿ ಒಲಿವಿ ಯಾದ ಫೈನ್ ಜ್ಯುವೆಲರಿ (Olivia's Fine Jewelry store) ಅಂಗಡಿಗೆ ನುಗ್ಗಿದ್ದಾರೆ. ಆ ಸಮಯದಲ್ಲಿ ಅಂಗಡಿಯಲ್ಲಿ ಕೆಲವು ಸಿಬಂದಿ ಇದ್ದು ದರೋಡೆ ಕೋರರನ್ನು ಕಂಡು ಹೆದರಿದ್ದಾರೆ. ಸೀದಾ ಬಂದು ಚಿನ್ನಾಭರಣ, ವಜ್ರಾಭರಣ ದೋಚಲು ದರೋಡೆಕೋರರು ಮುಂದಾಗಿದ್ದು ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದೆ.
ದರೋಡೆಕೋರರಿಗೆ ಬಂದೂಕು ತೋರಿಸಿ ಹೆದರಿಸಿದ ಮಳಿಗೆಯ ಮಾಲೀಕ
ದರೋಡೆಕೋರರು ಅಮೂಲ್ಯವಾದ ಆಭರಣಗಳನ್ನು ಕದಿಯಲು ಆ ಅಂಗಡಿಯಲ್ಲಿದ್ದ ಗಾಜಿನ ಪೆಟ್ಟಿಗೆಗಳನ್ನು ಒಡೆಯಲು ಮುಂದಾಗಿದ್ದಾರೆ. ಅಂಗಡಿಯ ಗುಮಾಸ್ತನೊಬ್ಬ ದರೋಡೆಕೋರರನ್ನು ತಡೆಯಲು ಪ್ರಯತ್ನಿಸಿದನು. ಆದರೆ ಕಳ್ಳರಲ್ಲಿ ಒಬ್ಬ ಆ ಗುಮಾಸ್ತನನ್ನು ಕೌಂಟರ್‌ನತ್ತ ಹಿಂದಕ್ಕೆ ತಳ್ಳುತ್ತಾನೆ. ಕೆಲವೇ ಕ್ಷಣಗಳ ನಂತರ ಅಂಗಡಿಯ ಮಾಲೀಕರು ತನ್ನ ಬಂದೂಕನ್ನು ಹಿಡಿದು ಕೊಂಡೆ ಹೊರಬಂದಿದ್ದಾರೆ. ಅದನ್ನು ಫಯರ್ ಮಾಡುವ ಮೂಲಕ ಗುಂಡು ಹಾರಿಸಿ ಕಳ್ಳರನ್ನು ಹೊರಗೆ ಹೋಗುವಂತೆ ಮಾಡಿದ್ದಾರೆ.
ಗುಂಡಿನ ಸದ್ದು ಕೇಳುತ್ತಿದ್ದಂತೆ ಆಭರಣಗಳಲ್ಲಿ ಕೆಲವೊಂದಿಷ್ಟನ್ನು ದೋಚಿ ದರೋಡೆಕೋರರು ಅಂಗಡಿಯ ಮುಂಬಾಗಿಲಿನ ಮೂಲಕವೇ ಓಡಿ ಹೋಗಿದ್ದಾರೆ. ಅಂಗಡಿ ಮಾಲೀಕರು ತ್ವರಿತ ಚಿಂತನೆ ಮತ್ತು ಧೈರ್ಯದಿಂದಾಗಿ ಅಪಾರ ಮೌಲ್ಯದ ಸ್ವತ್ತುಗಳನ್ನು ಕಳ್ಳತನ ಆಗದಂತೆ ತಡೆಯ ಲಾಗಿದ್ದು ಸದ್ಯ ಈ ವಿಡಿಯೋ ನೆಟ್ಟಿಗರ ಗಮನ ಸೆಳೆಯುತ್ತಿದೆ.
ಈ ಘಟನೆಯ ಬಗ್ಗೆ ಮದೇರಾ ಪೊಲೀಸ್ ಇಲಾಖೆಯಲ್ಲಿ ಅಂಗಡಿ ಮಾಲೀಕರು ಪ್ರಕರಣ ದಾಖಲಿಸಿ ದ್ದಾರೆ. ಅಪರಾಧಿಗಳಲ್ಲಿ ಯಾರಾದರೂ ಗಾಯಗೊಂಡಿದ್ದಾರೆಯೇ ಎಂಬುದು ಸ್ಪಷ್ಟ ವಾಗಿಲ್ಲ. ಪೊಲೀಸರು ಈ ಪ್ರಕರಣ ತನಿಖೆ ನಡೆಸುತ್ತಿದ್ದು, 170,000 ಡಾಲರ್ ಮೌಲ್ಯದ ರತ್ನಗಳನ್ನು ದರೋಡೆಕೋರರು ಕದ್ದಿದ್ದಾರೆ ಎಂದು ತಿಳಿದು ಬಂದಿದೆ. ಅಂಗಡಿ ಮಾಲೀಕರು ಆ ಸಮಯದಲ್ಲಿ ಧೈರ್ಯದಿಂದ ಯೋಚಿಸಿ ಯುಕ್ತಿಯಿಂದ ದೊಡ್ಡ ಮೊತ್ತದಲ್ಲಿ ದರೋಡೆ ಆಗುವ ಅಪಾಯವನ್ನು ತಡೆಗಟ್ಟಿದ್ದಾರೆ. ತನಿಖೆ ಇನ್ನು ಮುಂದುವರಿಯುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ಹೇಳಿಕೆ ಕೂಡ ನೀಡಿದ್ದಾರೆ.