ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪುದುಚೇರಿ ಚುನಾವಣೆಯಲ್ಲಿ ಮತದಾರರನ್ನು ಸ್ವಾಗತ ಮಾಡಿದ ಸೀರೆ ಉಟ್ಟ ರೋಬೋಟ್ 'ನಿಲಾ'; ವಿಡಿಯೋ ನೋಡಿ

Viral Video: ಪುದುಚೇರಿ ವಿಧಾನಸಭಾ ಮತದಾನ ವೇಳೆ ವಿಶೇಷ ಆಕರ್ಷಣೆ ವೊಂದು ಕಂಡು ಬಂದಿದೆ. ಶಾಲೆಯ ಮತದಾನ ಕೇಂದ್ರಕ್ಕೆ ಆಗಮಿಸಿದ ಮತದಾರರನ್ನು ಸೀರ ಧರಿಸಿದ "ನಿಲಾ" ಎಂಬ ಹುಮನಾಯ್ಡ್ ರೋಬೋಟ್ ಸ್ವಾಗತಿಸಿದ ದೃಶ್ಯ ಕಂಡು ಬಂದಿದೆ.

ಮತಗಟ್ಟೆಯಲ್ಲಿ ಮತದಾರರನ್ನು ಸ್ವಾಗತಿಸಿದ ರೋಬೋಟ್

ಪುದುಚೇರಿ, ಎ.9: ಚುನಾವಣೆ ಅಂದಾಗ ಜನರನ್ನು ಆಕರ್ಷಣೆ ಮಾಡಲು ನಾನಾ ರೀತಿಯ ತಂತ್ರಗಳಿರುತ್ತವೆ. ಇದೀಗ ಪುದುಚೇರಿ ವಿಧಾನಸಭಾ ಮತದಾನ ವೇಳೆ ವಿಶೇಷ ಆಕರ್ಷಣೆ ವೊಂದು ಕಂಡು ಬಂದಿದೆ. ಶಾಲೆಯ ಮತದಾನ ಕೇಂದ್ರಕ್ಕೆ ಆಗಮಿಸಿದ ಮತದಾರರನ್ನು ಸೀರ ಧರಿಸಿದ "ನಿಲಾ" ಎಂಬ ಹುಮನಾಯ್ಡ್ ರೋಬೋಟ್ ಸ್ವಾಗತಿಸಿದ ದೃಶ್ಯ (Viral News) ಕಂಡು ಬಂದಿದೆ.

ಗುರುವಾರ ಪುದುಚೇರಿಯ VOC ಸರ್ಕಾರಿ ಶಾಲೆಯಲ್ಲಿ ಮತದಾನ ನಡೆದಿತ್ತು. ಮತದಾನ ಕೇಂದ್ರಕ್ಕೆ ಆಗಮಿಸಿದ ಮತದಾರರನ್ನು ಸೀರೆ ಧರಿಸಿದ "ನಿಲಾ" ಎಂಬ ಹುಮನಾಯ್ಡ್ ರೋಬೋಟ್ ಸ್ವಾಗತ ಮಾಡಿದೆ. ನೀಲಾ ರೋಬೋಟ್ ಬಹು ವೈಶಿಷ್ಟ್ಯಗಳನ್ನು ಹೊಂದಿದ್ದು ಇದು ಧ್ವನಿ ವೈಶಿಷ್ಟ್ಯವನ್ನು ಸಹ ಹೊಂದಿದೆ.

ವಿಡಿಯೋ ನೋಡಿ:



ಕೊಯಮತ್ತೂರಿನ 'ರೋಬೋ ಮಿರರ್' ಸಂಸ್ಥೆ ಇದನ್ನು ಅಭಿವೃದ್ಧಿಪಡಿಸಿದೆ.‌ ಈ ರೋಬೋಟ್ ಅಲ್ಲಿಗೆ ಆಗಮಿಸಿದ ಜನರೊಂದಿಗೆ ತಮಿಳು ಮತ್ತು ಇಂಗ್ಲಿಷ್ ನಲ್ಲಿ ಸಂವಹನ ನಡೆಸಿದೆ. ಮದುವೆ ಮತ್ತು ಇತೆ ಕಾರ್ಯಕ್ರಮಗಳಿಗಾಗಿ ವಿನ್ಯಾಸಗೊಳಿಸಲಾದ ಈ ರೋಬೋಟ್ ಚುನಾವಣೆ ಸಂದರ್ಭದಲ್ಲಿ ವಿಶೇಷ ಮೆರುಗು ನೀಡಲು ಬಳಸಿಕೊಳ್ಳಲಾಯಿತು.

Viral Video: 282 ಅಡಿ ಎತ್ತರದ ಟವರ್ ಮೇಲೆ ಅಪಾಯಕಾರಿ ಸ್ಟಂಟ್; ಯುವಕ ಪೊಲೀಸ್ ವಶಕ್ಕೆ

ಪುದುಚೇರಿಯಲ್ಲಿ ಒಟ್ಟು 10,14,070 ಮತದಾರರಿದ್ದು, ಅವರಲ್ಲಿ 5,39,125 ಮಹಿಳೆಯರು, 4,74,788 ಪುರುಷರು ಮತ್ತು 157 ತೃತೀಯ ಲಿಂಗದ ಮತದಾರರು ಇದ್ದಾರಡ. ಅವರಲ್ಲಿ 24,156 ಜನರು 18-19 ವರ್ಷ ವಯಸ್ಸಿನ ಮೊದಲ ಬಾರಿಗೆ ಮತದಾರರಾಗಿದ್ದರೆ, 6,034 ಜನರು 85 ವರ್ಷಕ್ಕಿಂತ ಹೆಚ್ಚಿನ ಮತದಾರರು ಆಗಿದ್ದಾರೆ. ಮತದಾರರ ನಡುವೆ ಈ ರೋಬೋಟ್ ಕೂಡ ಗಮನ ಸೆಳೆದಿದೆ.