ಕೇರಳ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ (Temple) ಚಿನ್ನಾಭರಣ ಕಳ್ಳತನವಾಗಿರುವ (Gold Jewellery Theft ) ಘಟನೆ ತಿರುವನಂತಪುರಂ (Udupi) ನಡೆದಿದೆ. ಇಲ್ಲಿನ ದ್ವಾರಪಾಲಕ ವಿಗ್ರಹಕ್ಕೆ ಹಾಕಿದ್ದ 42.8 ಕೆಜಿ ತೂಕದ ಕವಚದ 4.5 (4.45 kg of gold goes missing) ಕೆಜಿ ಚಿನ್ನ ಕಾಣೆಯಾಗಿದೆ. ದೇವಸ್ಥಾನದ ಗರ್ಭಗುಡಿಯ ಚಿನ್ನದ ಲೇಪನ ಕಾಮಗಾರಿಯ ವೇಳೆ ಈ ಘಟನೆ ಬೆಳಕಿಗೆ ಬಂದಿದ್ದು, ಸುಮಾರು 4.45 ಕೆಜಿ ಚಿನ್ನ ನಾಪತ್ತೆಯಾಗಿದೆ ಎನ್ನಲಾಗಿದೆ. ಸದ್ಯ ಈ ಪ್ರಕರಣಕ್ಕೆ ಕೇರಳ ಹೈಕೋರ್ಟ್ (High Court of Kerala) ಎಂಟ್ರಿಯಾಗಿದ್ದು, ನ್ಯಾಯಾಂಗ ತನಿಖೆಗೆ ಆದೇಶಿಸಿದೆ.
ಹೈಕೋರ್ಟ್ ನ್ಯಾಯಮೂರ್ತಿಗಳಾದ ರಾಜಾ ವಿಜಯರಾಘವನ್ ವಿ ಮತ್ತು ಕೆ.ವಿ. ಜಯಕುಮಾರ್ ಅವರ ವಿಭಾಗೀಯ ಪೀಠವು ತುರ್ತು ಮತ್ತು ಸಮಗ್ರ ತನಿಖೆ ನಡೆಸುವಂತೆ ಸ್ಥಳೀಯ ಪೊಲೀಸರಿಗೆ ಸೂಚನೆ ನೀಡಿದ್ದು, ಈ ಪ್ರಕರಣ ಸಂಪೂರ್ಣ ವಿವರ ಇಲ್ಲಿದೆ.
ಮದ್ಯದ ದೊರೆ ವಿಜಯ್ ಮಲ್ಯ ಜನವರಿ 2011ರಲ್ಲಿ 32 ಕೆಜಿ ಚಿನ್ನ ಮತ್ತು 1900 ಕೆಜಿ ತಾಮ್ರ ಬಳಸಿ, ದೇಗುಲದ ಮುಂಭಾಗ ಚಿನ್ನದ ಹಾಳೆಗಳ ಮೇಲ್ಛಾವಣಿ ನಿರ್ಮಿಸಿಕೊಟ್ಟರು. ಅದಕ್ಕೆ ಆಗ್ಗೆ ತಗುಲಿದ ವೆಚ್ಚ 18 ಕೋಟಿ ರೂಪಾಯಿ ವೆಚ್ಚವಾಗಿತ್ತು. ಆದರೆ ವರ್ಷ ಕಳೆದಂತೆ ದೇವಸ್ಥಾನದ ಗರ್ಭಗುಡಿಯ ಚಿನ್ನಲೇಪಿತ ಮಾಳಿಗೆ ಸೋರಲು ಶುರುವಾಗಿತ್ತು. ಪ್ರವೇಶ ದ್ವಾರದ ಎಡಭಾಗದಲ್ಲಿರುವ ಗರ್ಭಗುಡಿಯ ಹೊರ ಗೋಡೆಯ ಮೂಲಕ ನೀರು ಹೊರಬರುತ್ತಿತ್ತು. ಈ ವೇಳೆ ಇದನ್ನ ಸರಿಪಡಿಸಲು ತಿರುವಾಂಕೂರು ದೇವಸ್ವಂ ಮಂಡಳಿ(ಟಿಡಿಬಿ) ನಿರ್ಧರಿಸಿ, ದುರಸ್ತಿ ಕಾಮಗಾರಿ ಕೈಗೆತ್ತಿಕೊಳ್ಳಲು ಮುಂದಾಗಿತ್ತು.
ಈ ಹಿನ್ನಲೆಯಲ್ಲಿ ದುರಸ್ತಿ ಕಾರ್ಯಕ್ಕಾಗಿ, ದೇವಸ್ಥಾನದ ಖಜಾನೆಯಲ್ಲಿದ್ದ ಸುಮಾರು 42 ಕೆಜಿ ತೂಕದ ಚಿನ್ನದ ತಟ್ಟೆಗಳನ್ನು ಹೊರತೆಗೆದು, ಅದನ್ನು ಶುದ್ಧೀಕರಿಸಿ, ಹೊಸದಾಗಿ ಹಾಳೆಗಳನ್ನು ಮಾಡಿ ಗರ್ಭಗುಡಿಯ ಶಿಖರಕ್ಕೆ ಅಳವಡಿಸಬೇಕಾಗಿತ್ತು. ಆದರೆ ಮರು ನವೀರಕರಣ ಕೆಲಸ ಕಾರ್ಯಗಳು ಮುಗಿದು ಚಿನ್ನದ ಹಾಳೆಗಳನ್ನು ಹಿಂದಿರುಗಿಸುವಾಗ ಸುಮಾರು 4.5 ಕೆಜಿ ಚಿನ್ನ ಕಡಿಮೆ ಇರುವುದು ತಿಳಿದು ಬಂದಿದ್ದು, ದೇವಾಲಯದ ಆಡಳಿತ ಮಂಡಳಿಯ ಅನುಮಾನ ಹುಟ್ಟಿಸುವ ವಾತಾವರಣ ನಿರ್ಮಾಣವಾಗಿದೆ.
ಈ ಸುದ್ದಿಯನ್ನು ಓದಿ: Viral Video: ಸಂಪ್ರದಾಯವನ್ನು ಮುರಿದು ತಂದೆಯ ಶವವನ್ನು ಹೊತ್ತು ಅಂತಿಮ ವಿಧಿವಿಧಾನ ನೆರವೇರಿಸಿದ ಹೆಣ್ಣುಮಕ್ಕಳು
ಚಿನ್ನದ ಲೇಪನದ ಕೆಲಸ ಮುಗಿಸಿ ಫಲಕಗಳನ್ನು ದೇವಸ್ಥಾನಕ್ಕೆ ಮರಳಿಸಿದಾಗ, ಅವುಗಳನ್ನು ತೂಗಿದಾಗ ಒಟ್ಟು ತೂಕ ಕೇವಲ 38 ಕೆಜಿ ಇದ್ದು, ಸುಮಾರು 4.45 ಕೆಜಿ ಚಿನ್ನ ಕಡಿಮೆಯಾಗಿರುವುದು ಬೆಳಕಿಗೆ ಬಂದಿದೆ. ಈ ಬೆಳವಣಿಗ ಗಮನಿಸಿದ ಕೇರಳ ಹೈಕೋರ್ಟ್ ಪ್ರಕರಣ ಗಂಭೀರತೆಯನ್ನು ತಿಳಿದು ಸ್ವಯಂಪ್ರೇರಿತವಾಗಿ ಮಧ್ಯಸ್ತಿಕೆ ವಹಿಸಿದ್ದು, ಬಹಳ ಕಟುವಾಗಿ ದೇವಸ್ಥಾನದ ಆಡಳಿತ ಮಂಡಳಿಯನ್ನು ಕಟುವಾಗಿ ಟೀಕಿಸಿದೆ. "ಪೆಟ್ರೋಲ್ ಆಗಿದ್ದರೆ ಆವಿಯಾಗಿ ತೂಕ ಕಡಿಮೆಯಾಗಿದೆ ಎಂದು ಹೇಳಬಹುದು. ಆದ್ರೆ ಇದು ಚಿನ್ನ. ಚಿನ್ನದ ತೂಕ ಹೇಗೆ ಕಡಿಮೆಯಾಗುತ್ತದೆ?". ತೂಕ ಹೇಗೆ ಕಡಿಮೆಯಾಯಿತು?" ಎಂದು ಕೇಳಿ, ದೇವಾಲಯದ ಆಡಳಿತವನ್ನು ಪ್ರಶ್ನಿಸಿದೆ.
ಅಲ್ಲದೇ ದೇವಾಲಯದ ಆಸ್ತಿಗೆ ಸಂಬಂಧಪಟ್ಟಂತೆ ಯಾವುದೇ ಅನುಮಾನಗಳು ವ್ಯಕ್ತವಾಗಬಾರದು. ಈ ವಿಷಯದಲ್ಲಿ ನಂಬಿಕೆ ಮತ್ತು ಪಾರದರ್ಶಕತೆ ಮುಖ್ಯವಾಗಿರುತ್ತದೆ. ಅದರಲ್ಲಿ ಯಾವುದೇ ರಾಜಿಯಾಗಬಾರದು ಎಂಬುದನ್ನು ಹೈಕೋರ್ಟ್ ತಿಳಿಸಿದ್ದು, ದೇವಸ್ವಂ ವಿಜಿಲೆನ್ಸ್ ವಿಭಾಗಕ್ಕೆ ಮೂರು ವಾರಗಳಲ್ಲಿ ತನಿಖಾ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದೆ.
ಜೊತೆಗೆ ಶಬರಿಮಲೆ ದೇವಸ್ಥಾನವನ್ನು ನಿರ್ವಹಿಸುವ ತ್ರಾವಣಕೋರ್ ದೇವಸ್ವಂ ಬೋರ್ಡ್ (TDB) ತನಿಖೆಗೆ ಸಂಪೂರ್ಣ ಸಹಕಾರ ನೀಡಬೇಕೆಂದು ಸೂಚನೆ ನೀಡಲಾಗಿದ್ದು, ದೇವಳದ ದ್ವಾರಪಾಲಕರ ಮೂರ್ತಿಗಳು ಮತ್ತು ಇತರೆ ಚಿನ್ನದ ಲೇಪಿತ ವಸ್ತುಗಳ ತಪಾಸಣೆ ನಡೆಸಿ, ಅವುಗಳನ್ನು ದೇವಾಲಯದ ಭದ್ರ ಕೊಠಡಿಯಲ್ಲಿ ಸುರಕ್ಷಿತವಾಗಿ ಸಂಗ್ರಹಿಸಬೇಕೆಂದು ಕೋರ್ಟ್ ಆದೇಶಿಸಿದೆ.