ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮಕ್ಕಳ ಜೀವದ ಜತೆ ಚೆಲ್ಲಾಟ: ವಿದ್ಯಾರ್ಥಿಗಳನ್ನು ವಾಹನದಲ್ಲಿ ಹೇಗೆ ಕಿಕ್ಕಿರಿದು ತುಂಬಿಸುತ್ತಾರೆ ನೋಡಿ

Viral Video: ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯ ಪಡ್ರೌನಾದಲ್ಲಿ ಶಾಲಾ ಮಕ್ಕಳು ಅಪಾಯಕಾರಿ ಸ್ಥಿತಿಯಲ್ಲಿ ಪ್ರಯಾಣ ಮಾಡುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಎಸ್‌ಯುವಿ ವಾಹನವೊಂದರಲ್ಲಿ ಕಿಕ್ಕಿರಿದ ಶಾಲಾ ಮಕ್ಕಳ ಗುಂಪು ಕಂಡು ಬಂದಿದೆ. ವಾಹನದಲ್ಲಿ ಸಾಮರ್ಥ್ಯಕ್ಕೂ ಮೀರಿ ಮಕ್ಕಳನ್ನು ತುಂಬಿರುವ ದೃಶ್ಯ ಕಂಡು ಬಂದಿದ್ದು ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಮಿತಿಗಿಂತ ಹೆಚ್ಚು ಮಕ್ಕಳನ್ನು ತುಂಬಿಸಿದ ಶಾಲಾ ವಾಹನ: ವಿಡಿಯೊ ವೈರಲ್‌

ಮಿತಿಗಿಂತ ಹೆಚ್ಚು ಮಕ್ಕಳನ್ನು ತುಂಬಿಸಿದ ಶಾಲಾ ವಾಹನ -

Profile
Pushpa Kumari Jan 4, 2026 3:16 PM

ಲಖನೌ, ಜ. 4: ನಗರ ಪ್ರದೇಶಗಳು ಎಷ್ಟೇ ಅಭಿವೃದ್ಧಿ ಹೊಂದಿದ್ದರೂ ಗ್ರಾಮೀಣ ಭಾಗದಲ್ಲಿ ಇಂದಿಗೂ ಹಲವು ಪ್ರದೇಶದಲ್ಲಿ ಜನರು ಮೂಲಭೂತ ಸೌಕರ್ಯಗಳ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಅದರಲ್ಲೂ ಸಂಚಾರ ವ್ಯವಸ್ಥೆ ಸರಿಯಾಗಿ ಇಲ್ಲದೆ ಕೆಲವೆಡೆ ಅಸುರಕ್ಷಿತ ಸಾರಿಗೆಯನ್ನು ಬಳಸುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯ ಪಡ್ರೌನಾದಲ್ಲಿ ಶಾಲಾ ಮಕ್ಕಳು ಅಪಾಯಕಾರಿ ಸ್ಥಿತಿಯಲ್ಲಿ ಪ್ರಯಾಣಿಸುತ್ತಿರುವ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ. ಎಸ್‌ಯುವಿ ವಾಹನವೊಂದರಲ್ಲಿ ಕಿಕ್ಕಿರಿದ ಶಾಲಾ ಮಕ್ಕಳ ಗುಂಪು ಕಂಡು ಬಂದಿದೆ. ಈ ವಾಹನದಲ್ಲಿ ಸಾಮರ್ಥ್ಯಕ್ಕೂ ಮೀರಿ ಮಕ್ಕಳನ್ನು ತುಂಬಿರುವ ದೃಶ್ಯ ಕಂಡು ಬಂದಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯಲ್ಲಿ ಈ ಘಟನೆ ಕಂಡು ಬಂದಿದೆ. ಸದ್ಯ ಈ ವಿಡಿಯೊ ಗ್ರಾಮೀಣ ಭಾರತದಲ್ಲಿ ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಶಾಲಾ ಸಾರಿಗೆ ಮೂಲ ಸೌಕರ್ಯದ ಕುರಿತು ಸಾರ್ವಜನಿಕ ವಲಯದಲ್ಲಿ ಚರ್ಚೆ ಉಂಟು ಮಾಡುವಂತೆ ಮಾಡಿದೆ. ವಿಡಿಯೊದಲ್ಲಿ ಸಣ್ಣ ವಾಹನದೊಳಗೆ ಕಿಕ್ಕಿರಿದ ಶಾಲಾ ಮಕ್ಕಳ ಗುಂಪು ಕಂಡು ಬಂದಿದೆ. ಕೆಲವು ವಿದ್ಯಾರ್ಥಿಗಳು ವ್ಯಾನ್ ಚಲಿಸುವಾಗ ಉಸಿರುಗಟ್ಟುವಂತೆ ಕುಳಿತಿರುವುದು ಮಾತ್ರವಲ್ಲದೆ, ಕೆಲವರು ವಾಹನದ ಹಿಂಭಾಗದ ಬಾಗಿಲಿಗೆ ನೇತಾಡಿಕೊಂಡು ಪ್ರಯಾಣಿಸಿದ್ದಾರೆ.

ವಿಡಿಯೊ ನೋಡಿ:



ಮಕ್ಕಳು ವಾಹನದಲ್ಲಿ ನೇತಾಡುತ್ತಿರುವ ಆತಂಕಕಾರಿ ವಿಡಿಯೊಗೆ ಪೋಷಕರು ಹಾಗೂ ಸ್ಥಳೀಯರಿಂದ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. ಈ ಭಾಗದಲ್ಲಿ ಶಾಲೆಗೆ ಹೋಗಲು ಸರಿಯಾದ ಸಾರಿಗೆ ಸೌಲಭ್ಯ ಇಲ್ಲದ ಕಾರಣ, ಅನಿವಾರ್ಯವಾಗಿ ಇಂತಹ ವಾಹನಗಳನ್ನು ಅವಲಂಬಿಸಬೇಕಾಗಿದೆ ಎಂದು ಸ್ಥಳಿಯರು ತಿಳಿಸಿದ್ದಾರೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರು, ಕೂಡಲೇ‌ ಚಾಲಕನ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಬೆಂಗಳೂರಿನ ಹೆವೀ ಟ್ರಾಫಿಕ್ ನಡುವೆಯೇ ಹೆಲ್ಮೆಟ್‌ನಿಂದ ಹೊಡೆದಾಡಿದ ಬೈಕ್ ಸವಾರರು

ನೆಟ್ಟಿಗರೊಬ್ಬರು ಕಮೆಂಟ್‌ ಮಾಡಿ ಶಾಲಾ ವಾಹನದಲ್ಲಿ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು ಎಂದ ಸೂಚನೆ ಇದೆ. ಆದರೆ ಇಲ್ಲಿ ಯಾವುದೇ ನಿಯಮ ಪಾಲಿಸದೆ ಮಕ್ಕಳ ‌ಜೀವದ ಜತೆ ಆಟ ಆಡುತ್ತಿದ್ದಾರೆ. ಒಂದು ವೇಳೆ ಸಣ್ಣ ಸಮಸ್ಯೆ ಸಂಭವಿಸಿದರೂ ಮಕ್ಕಳಿಗೆ ಹೊರಬರಲು ಸಾಧ್ಯವೇ ಇಲ್ಲ. ಅಧಿಕಾರಿಗಳು ಈಗ ಎಲ್ಲಿದ್ದಾರೆ ಎಂದು ಪ್ರಶ್ನಿಸಿದ್ದಾರೆ.