Viral Video: ಜಲಾವೃತ ಪ್ರದೇಶದಲ್ಲಿ ನಿಂತು ಸರ್ಕಾರವನ್ನೇ ತರಾಟೆಗೆ ತೆಗೆದುಕೊಂಡ ಪುಟ್ಟ ಬಾಲಕಿ- ಈ ವಿಡಿಯೊ ನೋಡಿ
ಸಿಕಾರ್ ಜಿಲ್ಲೆಯ ಲಕ್ಷ್ಮಣ್‌ಗಢ ಪ್ರದೇಶದ ಗಡೋರಾ ಗ್ರಾಮದ ಶಾಲಾ ವಿದ್ಯಾರ್ಥಿನಿಯೊಬ್ಬಳು ರಸ್ತೆಯಲ್ಲಿ ಮೊಣಕಾಲು ಆಳದವರೆಗೆ ಬಂದಿರುವ ನೀರಿನಲ್ಲಿ ನಡೆದುಕೊಂಡು ಹೋಗುತ್ತಾ ರಾಜಕೀಯ ನಾಯಕರು ಮತ್ತು ಸರ್ಕಾರಿ ವ್ಯವಸ್ಥೆಗಳನ್ನು ಅಣಕಿಸಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್(Viral Video)ಆಗಿದೆ.


ಜೈಪುರ: ಇದೀಗ ರಾಜಸ್ಥಾನದ ಹಲವಾರು ಜಿಲ್ಲೆಗಳಲ್ಲಿ ಭಾರಿ ಮಳೆಯಾದ ಕಾರಣದಿಂದ ಜಲಾವೃತಗೊಂಡಿದ್ದು, ದೈನಂದಿನ ಜೀವನ ಅಸ್ತವ್ಯಸ್ತವಾಗಿದೆ. ಈ ಮಧ್ಯೆ, ಸಿಕಾರ್ ಜಿಲ್ಲೆಯ ಲಕ್ಷ್ಮಣ್‌ಗಢ ಪ್ರದೇಶದ ಗಡೋರಾ ಗ್ರಾಮದ ಶಾಲಾ ವಿದ್ಯಾರ್ಥಿನಿಯೊಬ್ಬಳು ರಸ್ತೆಯಲ್ಲಿ ಮೊಣಕಾಲು ಆಳದವರೆಗೆ ಬಂದಿರುವ ನೀರಿನಲ್ಲಿ ನಡೆದುಕೊಂಡು ಹೋಗುತ್ತಾ ರಾಜಕೀಯ ನಾಯಕರು ಮತ್ತು ಸರ್ಕಾರಿ ವ್ಯವಸ್ಥೆಗಳನ್ನು ಅಣಕಿಸಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್(Viral Video) ಆಗಿದೆ.
ವೈರಲ್ ಆದ ವಿಡಿಯೊದಲ್ಲಿ, ಸಮವಸ್ತ್ರ ಧರಿಸಿರುವ ಶಾಲಾ ವಿದ್ಯಾರ್ಥಿನಿ ರಸ್ತೆಯಲ್ಲಿ ತುಂಬಿ ಹರಿಯುತ್ತಿದ್ದ ನೀರಿನ ಮೇಲೆ ನಡೆದುಕೊಂಡು ಹೋಗುವಾಗ ಸಾರ್ವಜನಿಕ ಸೌಲಭ್ಯಗಳ ಬಗ್ಗೆ ಮಾತನಾಡಿದ್ದಾಳೆ. ಆಕೆಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನಸೆಳೆದು ವೈರಲ್ ಆಗಿದೆ. ವಿದ್ಯಾರ್ಥಿಯು ಈ ವಿಡಿಯೊದಲ್ಲಿ ಸರ್ಕಾರಿ ಅವ್ಯವಸ್ಥೆಯನ್ನು ಬಯಲು ಮಾಡಿದ್ದಾಳೆ.
ವಿಡಿಯೊ ಇಲ್ಲಿದೆ ನೋಡಿ...
A Girl from #sikar #Rajasthan showing condition after #HeavyRains #RajasthanNews #Rajasthanviralvideo #viralvideo #viral #news #RajasthanWeather #RajasthanPatrika #RajasthanWithSamacharplus #popnewsblend pic.twitter.com/AaaQRYoO3a
— erprashant (@erprashant) July 9, 2025
ರಾಜಸ್ಥಾನದ ಕೆಲವು ಭಾಗಗಳಲ್ಲಿ ಮಾನ್ಸೂನ್ ಮಳೆ ಮುಂದುವರೆದಿದ್ದು, ದೌಸಾ ಜಿಲ್ಲೆಯ ಸಿಕ್ರೈ ಕಳೆದ 24 ಗಂಟೆಗಳಲ್ಲಿ ಅತಿ ಹೆಚ್ಚು ಮಳೆಯನ್ನು ದಾಖಲಿಸಿದೆ. ಜೈಪುರದ ಹವಾಮಾನ ಕೇಂದ್ರದ ಪ್ರಕಾರ, ಸಿಕ್ರೈ (ದೌಸಾ) ನಲ್ಲಿ ಅತಿ ಹೆಚ್ಚು 132 ಮಿಮೀ ಮಳೆಯಾಗಿದ್ದು, ಕೆಲವು ಸ್ಥಳಗಳಲ್ಲಿ ಮಧ್ಯಮ ಪ್ರಮಾಣದಲ್ಲಿ ಭಾರಿ ಮಳೆಯಾಗಿದೆ. ಸೋಮವಾರ (ಜುಲೈ 7)ಬೆಳಿಗ್ಗೆ 8:30 ರವರೆಗೆ 24 ಗಂಟೆಗಳಲ್ಲಿ ಅಲ್ಲಲ್ಲಿ ಭಾರೀ ಮಳೆಯಾಗಿದೆ. ಮುಂದಿನ ಒಂದು ಅಥವಾ ಎರಡು ದಿನಗಳಲ್ಲಿ ಭರತ್‌ಪುರ, ಜೈಪುರ ವಿಭಾಗ ಮತ್ತು ಶೇಖಾವತಿ ಪ್ರದೇಶದ ಕೆಲವು ಭಾಗಗಳಲ್ಲಿ ಮಧ್ಯಮ ಪ್ರಮಾಣದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ರಾಜಸ್ಥಾನದ ಕೆಲವು ಭಾಗಗಳಲ್ಲಿ ಮಳೆ ಕಡಿಮೆಯಾಗುವ ನಿರೀಕ್ಷೆಯಿದೆ.
ಈ ಸುದ್ದಿಯನ್ನೂ ಓದಿ:Viral Video: Viral Video: ಪುಣೆಗೆ ಹೊರಟಿದ್ದ ವಿಮಾನದಲ್ಲಿ ತಪ್ಪಿದ ದುರಂತ; ಗಾಳಿಗೆ ಹಾರಿ ಬಿದ್ದ ಕಿಟಕಿಯ ಚೌಕಟ್ಟು, ವಿಡಿಯೋ ನೋಡಿ
ಡೆಹ್ರಾಡೂನ್, ಹರಿದ್ವಾರ, ನೈನಿತಾಲ್ ಮತ್ತು ಚಮೋಲಿ ಸೇರಿದಂತೆ ಉತ್ತರಾಖಂಡದ ಹಲವಾರು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಭೂಕುಸಿತ ಮತ್ತು ನದಿ ಮಟ್ಟ ಏರಿಕೆಯಾಗುವ ಅಪಾಯದಿಂದಾಗಿ, ಶಾಲೆಗಳನ್ನು ಮುಚ್ಚಲಾಗಿದೆ. ಏತನ್ಮಧ್ಯೆ, ಹಿಮಾಚಲ ಪ್ರದೇಶದಲ್ಲಿ, ಕಾಂಗ್ರಾ, ಮಂಡಿ, ಸಿರ್ಮೌರ್ ಮತ್ತು ಸೋಲನ್ ಜಿಲ್ಲೆಗಳು ಸಹ ಭಾರಿ ಮಳೆ ಮತ್ತು ಭೂಕುಸಿತದ ಬೆದರಿಕೆಯನ್ನು ಎದುರಿಸುತ್ತಿವೆ. ಈ ಪ್ರದೇಶಗಳಲ್ಲಿನ ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳನ್ನು ಸಹ ಮುಚ್ಚಲಾಗಿದೆ.