ಚಿನ್ನ -ಬೆಳ್ಳಿ ಮೇಲೆ ಹೂಡಿಕೆ ಸುಲಭವಾಗಿಸಿದ ಇನ್‌ಕ್ರೆಡ್! 10 ರೂ.ಇಂದಲೇ ಆರಂಭಿಸಿ
ಇನ್‌ಕ್ರೆಡ್ ಗ್ರೂಪ್‌ನ ರಿಟೇಲ್ ವೆಲ್ತ್-ಟೆಕ್ ಭಾಗವಾಗಿರುವ ಇನ್‌ಕ್ರೆಡ್ ಮನಿ , ಡಿಜಿಟಲ್ ಗೋಲ್ಡ್ ಮತ್ತು ಸಿಲ್ವರ್ ಸೇವೆಯನ್ನು ಆರಂಭಿಸಿದೆ. ಈ ಸೇವೆಯು ಪಿಎಎಮ್‌ಪಿ ಎಸ್‌ಎ PAMP SA) ಹಾಗೂ ಭಾರತ ಸರ್ಕಾರದ ಎಂಟರ್ಪೈಸ್ ಎಮ್‌ಎಮ್‌ಟಿಸಿ ಲಿಮಿಟೆಡ್ (MMTC Ltd), ಭಾರತದ ಎಲ್‌ಬಿ ಎಮ್‌ಎ ಪ್ರಮಾ ಣಿತ ಗುಡ್ ಡೆಲಿವರಿ ಗೋಲ್ಡ್ ಮತ್ತು ಸಿಲ್ವರ್ ನ ಜಂಟಿ ಸಹಯೋಗದ ಪಾಲುದಾರಿಕೆಯಲ್ಲಿ ಆರಂಭಿಸ ಲಾಗಿದೆ

-

ಇನ್‌ಕ್ರೆಡ್ ಗ್ರೂಪ್‌ನ ರಿಟೇಲ್ ವೆಲ್ತ್-ಟೆಕ್ ಭಾಗವಾಗಿರುವ ಇನ್‌ಕ್ರೆಡ್ ಮನಿ , ಡಿಜಿಟಲ್ ಗೋಲ್ಡ್ ಮತ್ತು ಸಿಲ್ವರ್ ಸೇವೆಯನ್ನು ಆರಂಭಿಸಿದೆ. ಈ ಸೇವೆಯು ಪಿಎಎಮ್‌ಪಿ ಎಸ್‌ಎ PAMP SA) ಹಾಗೂ ಭಾರತ ಸರ್ಕಾರದ ಎಂಟರ್ಪೈಸ್ ಎಮ್‌ಎಮ್‌ಟಿಸಿ ಲಿಮಿಟೆಡ್ (MMTC Ltd), ಭಾರತದ ಎಲ್‌ಬಿ ಎಮ್‌ಎ ಪ್ರಮಾಣಿತ ಗುಡ್ ಡೆಲಿವರಿ ಗೋಲ್ಡ್ ಮತ್ತು ಸಿಲ್ವರ್ ನ ಜಂಟಿ ಸಹಯೋಗದ ಪಾಲುದಾರಿಕೆಯಲ್ಲಿ ಆರಂಭಿಸಲಾಗಿದೆ. ಕೇವಲ 10 ರೂಪಾಯಿಗಳ ಹೂಡಿಕೆಯ ಆರಂಭದ ಜೊತೆ ಈ ಸೌಲಭ್ಯವು ಪ್ರತಿನಿತ್ಯ ಖರ್ಚು ಮಾಡುವವರನ್ನುಪ್ರತಿನಿತ್ಯ ಉಳಿತಾಯ ಮಾಡುವವರನ್ನಾಗಿ ಬದಲಾಯಿಸುವ ಉದ್ದೇಶ ಹೊಂದಿದೆ.
ನಿಯಂತ್ರಣವಿಲ್ಲದೇ ಖರ್ಚು ಮಾಡುವ ಈ ಕಾಲಘಟ್ಟದಲ್ಲಿ 100 ರೂಗಳ ತಿಂಡಿ, 300 ರೂಗಳ ಆನ್‌ಲೈನ್ ಶಾಪಿಂಗ್‌ಗಳು ಬೆರಳತುದಿಯಲ್ಲಿ ನಡೆಯುತ್ತವೆ. ಈ ಮಧ್ಯೆ ಉಳಿತಾಯ ಮಾಡುವ ಅಭ್ಯಾಸ ಮರೆಯಾಗುತ್ತಿದೆ. ಆದರೆ ಇನ್‌ಕ್ರೆಡ್ ಮನಿ ಈ ಅಭ್ಯಾಸವನ್ನು ಮರಳಿ ತರುತ್ತಿದೆ. ಡಿಜಿಟಲ್ ಗೋಲ್ಡ್ ಮತ್ತು ಸಿಲ್ವರ್ ನಲ್ಲಿ ಕನಿಷ್ಟ 10 ರೂಗಳ ಹೂಡಿಕೆ ಮೂಲಕ ಪ್ರತಿಯೊಬ್ಬರಿಗೂ ಚಿನ್ನ ಮತ್ತು ಬೆಳ್ಳಿ ಕೈಗೆಟಕುವಂತೆ ಮಾಡಿದೆ.
ಇದನ್ನೂ ಓದಿ: Egg Health Benefits: ಒಂದು ಮೊಟ್ಟೆಯಲ್ಲಿ ಎಷ್ಟು ಪ್ರೊಟೀನ್ ದೊರೆಯುತ್ತದೆ?
ಈ ಸೇವೆಯ ವಿಶೇಷತೆ ಏನು?
- ಕ್ಷಣಾರ್ಧದಲ್ಲಿ ಖರೀದಿ/ಮಾರಾಟ ಮತ್ತು ನೇರವಾಗಿ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ
24 x 7 ಸೇವೆ ಲಭ್ಯ
- MMTC –PAMP ಮೂಲಕ 24K, 999.9 (99.99% ಶುದ್ಧತೆ) ಚಿನ್ನ/ಬೆಳ್ಳಿ ನಾಣ್ಯ ಅಥವಾ ಬಾರ್‌ಗಳನ್ನು ಮನೆ ಬಾಗಿಲಿಗೆ ತಲುಪಿಸುವ ಸೇವೆ
- ಲೈವ್ ಮಾರುಕಟ್ಟೆ ಬೆಲೆಗಳು ಮತ್ತು ಸಂಪೂರ್ಣ ಪಾರದರ್ಶಕತೆ
ಡಿಮ್ಯಾಟ್ ಅಗತ್ಯವಿಲ್ಲ – 100% ಡಿಜಿಟಲ್ ಮತ್ತು ಸುರಕ್ಷಿತ
ನಿತ್ಯ, ವಾರ ಅಥವಾ ಮಾಸಿಕ ಎಸ್‌ಐಪಿಗೆ ಅವಕಾಶ
ಸುಲಭವಾಗಿ ಕ್ಯಾಶ್‌ಗೆ ಪರಿವರ್ತನೆ , ಸುರಕ್ಷಿತವಾಗಿ ಗೋಲ್ಡ್/ಸಿಲ್ವರ್ ಮನೆ ಬಾಗಿಲಿಗೆ
“ಉಳಿತಾಯವು ಖರ್ಚಿನಷ್ಟೇ ಸಾಮಾನ್ಯವಾಗಬೇಕು”
ಈ ಕುರಿತು ಮಾತನಾಡಿದ ಇನ್‌ಕ್ರೆಡ್ ಮನಿಯ ಸಿಇಒ ವಿಜಯ್ ಕುಪ್ಪಾ “ಜನರಿಗೆ ಉಳಿತಾಯ ಮಾಡಲು ಸುಲಭವಾದ ಹಾಗೂ ಸುರಕ್ಷಿತವಾದ ಮಾರ್ಗದ ಅಗತ್ಯವಿದೆ. ನಮ್ಮ ವೇದಿಕೆಯಲ್ಲಿನ ಡಿಜಿಟಲ್ ಗೋಲ್ಡ್ ಮತ್ತು ಸಿಲ್ವರ್ ಜನರ ಜೀವನದ ಜೊತೆ ಸುಲಭವಾಗಿ ಒಳಗೊಳ್ಳುವಂತದ್ದು . ಚಹಾ ಬ್ರೇಕ್, ಕ್ವಿಕ್ ರೀಚಾರ್ಜ್, ಮಧ್ಯ ರಾತ್ರಿಯ ತಿಂಡಿ ಖರೀದಿಯಲ್ಲಿ ಉಳಿಸಲಾದ 10 ರೂಪಾಯಿ ಉತ್ತಮವಾದದ್ದನ್ನು ನಿರ್ಮಿಸಬಹುದಾಗಿದೆ” ಎಂದರು.
MMTC-PAMP ಮಧ್ಯಂತರ ಸಿಇಒ ಮತ್ತು ಸಿಎಫ್‌ಟಿಒ ಸಮಿತ್ ಗುಹಾ ಮಾತನಾಡಿ“ ನಾವು ಗ್ರಾಹಕರ ಅಗತ್ಯತೆ ಮತ್ತು ಆಸಕ್ತಿಗೆ ಅನುಗುಣವಾಗಿ ಸೇವೆಯನ್ನು ನೀಡುತ್ತೇವೆ. ಈ ವೇದಿಕೆಯು ಗ್ರಾಹಕರಿಗೆ ಮತ್ತು ಹೂಡಿಕೆದಾರರಿಗೆ 99.99% ಶುದ್ಧತೆಯ ಗೋಲ್ಡ್ ಮತ್ತುಸಿಲ್ವರ್ ಮಿಂಟೆಡ್ ಉತ್ಪನ್ನಗಳನ್ನು ಸಾಂಪ್ರದಾಯಿಕ ಆಚರಣೆಗೆ ಅಥವಾ ಪೋರ್ಟ್ಫೋಲಿಯೊ ವೈವಿಧ್ಯತೆಗೆ ಪಡೆಯ ಬಹುದಾಗಿದೆ” ಎಂದರು.
ಸಣ್ಣ ಮತ್ತು ನಿರಂತರ ಡಿಜಿಟಲ್ ಹೂಡಿಕೆ ಮೂಲಕ ಅರ್ಥಪೂರ್ಣ ಹಿಡುವಳಿ (ಹೋಲ್ಡಿಂಗ್ಸ್) ನಿರ್ಮಿಸಬಹುದಾಗಿದೆ. ನಿಮ್ಮ ಹೂಡಿಕೆ ಒಂದು ಹಂತವನ್ನು ತಲುಪಿದಾಗ ಕ್ಯಾಶ್ ಅಥವಾ ಭೌತಿಕ ರೂಪದಲ್ಲಿ ನಿಮ್ಮ ಹೂಡಿಕೆಯನ್ನು ಮರುಪಡೆಯಬಹುದಾಗಿದೆ (ರಿಡೀಮ್) . ಇದು ಶಿಸ್ತುಬದ್ಧ ಹಾಗೂ ಸುಲಭ ಉಳಿತಾಯಕ್ಕೆ ನೆರವಾಗುತ್ತದೆ. ಜೊತೆಗೆ ಯಾವುದೇ ಸಮಯದಲ್ಲಿ ಚಿನ್ನ ಮತ್ತು ಬೆಳ್ಲಿಯ ಬೆಲೆಯನ್ನು ಲಾಕ್ ಮಾಡುವ ಮೂಲಕ ಭವಿಷ್ಯದ ಬೆಲೆ ಬದಲಾವಣೆಯಿಂದ ರಕ್ಷಿಸಬಹು ದಾಗಿದೆ. ಡಿಜಿಟಲ್ ಗೋಲ್ಡ್ ಮತ್ತು ಸಿಲ್ವರ್ ಸುಲಭವಾಗಿ ಹಣಕ್ಕೆ ಪರಿವರ್ತಿಸಬಹು ದಾಗಿದ್ದು, ಶೇಖರಣೆಯ ಜಂಜಾಟವಿಲ್ಲದೇ ಸುರಕ್ಷಿತ ಉಳಿತಾಯ ವಾತಾವರಣ ನೀಡುತ್ತದೆ.